Updated By: Priyalachhi

ಸ್ಯಾಂಡಲ್​ವುಡ್ ಬಾದ್​ ಷಾ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಮದುವೆಯ ಅರಿಶಿನ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುದೀಪ್ ಅವರ ಅಕ್ಕನ ಮಗನ‌ ಮದುವೆ ಶ್ರೀಲಂಕಾದಲ್ಲಿ ನಡೆದಿದ್ದು. ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ಧೂರಿಯಾಗಿ ನಡೆದಿದೆ.

ಸುದೀಪ್ ಅಕ್ಕನ ಮಗನ (ಸೋದರಳಿಯ) ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದೆ. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version