• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಹೊಸ ವರ್ಷದ ಸ್ವಾಗತಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಿಗ್ಗೆಸ್ಟ್ ಪಾರ್ಟಿ

Sambrama Prabha News by Sambrama Prabha News
December 28, 2025
in Latest News, Nation News
0
ಹೊಸ ವರ್ಷದ ಸ್ವಾಗತಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಿಗ್ಗೆಸ್ಟ್ ಪಾರ್ಟಿ

Updated By: Priyalachhi

ಹೈದರಾಬಾದ್(ತೆಲಂಗಾಣ): ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿ ಮತ್ತು ಥೀಮ್ ಪಾರ್ಕ್ ಹೊಂದಿರುವ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಡಿಸೆಂಬರ್ 31ರಂದು ಹೊಸ ವರ್ಷವನ್ನು ಸಂಭ್ರಮ ಮತ್ತು ವೈಭವದಿಂದ ಸ್ವಾಗತಿಸಲು ಸಜ್ಜಾಗಿದೆ. ಇಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೊಸ ವರ್ಷದ ಆಚರಣೆಯನ್ನು ಸ್ಮರಣೀಯವಾಗಿಸಲು ‘ರಾಮೋಜಿ ಕಾರ್ನಿವೈಬ್ 2026’ ಏರ್ಪಡಿಸಲಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುವ ಈ ಮ್ಯಾಜಿಕಲ್ ನ್ಯೂ ಇಯರ್ ಸಲಿಬ್ರೆಷನ್ ಅತ್ಯಂತ ರೋಮಾಂಚಕವಾಗಿರಲಿದೆ.

ಅತಿದೊಡ್ಡ ಓಪನ್ ಏರ್ ಡ್ಯಾನ್ಸ್ ಫ್ಲೋರ್: ರಾಮೋಜಿ ಕಾರ್ನಿವೈಬ್ 2026ನಲ್ಲಿ ಹಲವು ವೈವಿಧ್ಯಮ ಕಾರ್ಯಕ್ರಮ ಮತ್ತು ಸಿನಿಮಾ ಪ್ರಪಂಚದ ಅದ್ಭುತ ಪ್ರದರ್ಶನಗಳು ಇರಲಿವೆ. ದೇಶದ ಅತಿದೊಡ್ಡ 15,000 ಚದರ್​ ಅಡಿ ಓಪನ್ ಏರ್ ಡ್ಯಾನ್ಸ್ ಫ್ಲೋರ್​​ನಲ್ಲಿ ಅತಿಥಿಗಳು ನಕ್ಷತ್ರಗಳ ಅಡಿಯಲ್ಲಿ ಹೆಜ್ಜೆ ಹಾಕುತ್ತಾ ಹೊಸ ವರ್ಷ ಸ್ವಾಗತಿಸಬಹುದು. ಜೊತೆಗೆ ಸೆಲೆಬ್ರಿಟಿ ಡಿಜೆಗಳಾದ ಸೋನಿ, ನಾಡ್ ಮತ್ತು ದೀಪಕ್ ಅವರ ಹೈ-ಎನರ್ಜಿ “ವಾರ್ ಆಫ್ ಡಿಜೆ” ಸಂಭ್ರಮವನ್ನು ನೂರ್ಮಡಿಗೊಳಿಸಲಿದೆ. ಅಷ್ಟೇ ಅಲ್ಲ, ಮಕ್ಕಳು ಮತ್ತು ವಯಸ್ಕರನ್ನು ರೋಮಾಂಚನಗೊಳಿಸುವ ಸಂಗೀತ ಪ್ರದರ್ಶನಗಳನ್ನು ಸಹ ಇದು ಒಳಗೊಂಡಿದೆ.

ಆರು ವಿಭಿನ್ನ ರೀತಿಯ ಮನರಂಜನೆ: ಇಲ್ಲಿ ಹೊಸ ವರ್ಷ ಸ್ವಾಗತಿಸಲು ಬುಧವಾರ ರಾತ್ರಿ ಆರು ವಿಶೇಷ ಮನರಂಜನಾ ಕಾಯಕ್ರಮಗಳನ್ನು ಆಯೋಜಿಸಲಾಗಿದೆ. ನಗೆ ಉಕ್ಕಿಸುವ ಸ್ಟ್ಯಾಂಡ್ ಅಪ್ ಹಾಸ್ಯ, ಗಾಯಕರಿಂದ ಲೈವ್ ಪ್ರದರ್ಶನ, ಮ್ಯಾಜಿಕ್ ಶೋಗಳು, ವೈಲ್ಡ್ ವೆಸ್ಟ್ ಸ್ಟಂಟ್‌ಗಳು ಮತ್ತು ಕಲಾವಿದರಿಂದ ಶೋಗಳು ಇರುತ್ತವೆ. ಹಾಗೆಯೇ ವಿವಿಧ ವೇಷಭೂಷಣಗಳಲ್ಲಿ ಕಲಾವಿದರ ಪ್ರದರ್ಶನ ಮತ್ತು ಅತ್ಯಾಕರ್ಷಕ ಡಿಜೆಯನ್ನು ಆನಂದಿಸಬಹುದು.

ಅಲಂಕೃತ ಕಾರ್ನೀವಲ್ ಮೆರವಣಿಗೆ ರಾತ್ರಿ ಹಬ್ಬದ ವಾತಾವರಣಕ್ಕೆ ಮೆರುಗು ನೀಡುತ್ತದೆ. ಇನ್ನು ಉದ್ಯಾನವನ ಅತ್ಯಾಧುನಿಕ ಬೆಳಕಿನೊಂದಿಗೆ ಅನನ್ಯವಾಗಿ ಸಂಯೋಜಿಸಲ್ಪಟ್ಟಿರುತ್ತದೆ. ಇದು ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿಯಲ್ಲಿ ವಿಶಿಷ್ಟ ಅನುಭವ ನೀಡಲಿದೆ.

Tags: ಹೊಸ ವರ್ಷ
Previous Post

ಬೆಂಗಳೂರಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್​ ವಶ ಎನ್ನುವುದು ಸತ್ಯಕ್ಕೆ ದೂರ

Next Post

ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿ ಹೊಸ ದಾಖಲೆ

Next Post
ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿ ಹೊಸ ದಾಖಲೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿ ಹೊಸ ದಾಖಲೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.