• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸಕಾಗುತ್ತಾ: ಬಿ.ಕೆ.ಹರಿಪ್ರಸಾದ್

Sambrama Prabha News by Sambrama Prabha News
January 29, 2026
in Politics
0
ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸಕಾಗುತ್ತಾ: ಬಿ.ಕೆ.ಹರಿಪ್ರಸಾದ್

Updated By: Priyalachhi

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಖಂಡನೆ ವ್ಯಕ್ತಪಡಿಸಿದ್ದ ಸಭಾನಾಯಕ ಎನ್.ಎಸ್. ಬೋಸರಾಜ್ ಅವರು ವಿಷಾದ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್​ನಲ್ಲಿ ಇಂದೂ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ಸದನ ಬಾವಿಗಳಿದು ಧರಣಿ ಮುಂದುವರೆಸುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.‌

ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಸಭಾನಾಯಕರು ರಾಜ್ಯಪಾಲರ ಭಾಷಣದ ಮೇಲೆ ಖಂಡನೆ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ವಂದನಾ ನಿರ್ಣಯ ಮಂಡಿಸುತ್ತಿದೆ. ಅವರ ಖಂಡನೆ ವಿಚಾರ ಸದನಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಈ ಬಗ್ಗೆ ಸರ್ಕಾರ ದ್ವಂದ್ವ ನಿಲುವು ತಳೆದಿತ್ತು. ಇದಾದ ಬಳಿಕ ವಂದನಾ ನಿರ್ಣಯ ಎಂದು ಹೇಳಿತ್ತು. ಹಾಗಾದರೆ ಖಂಡನೆ ಮಾಡಿದ್ದಕ್ಕೆ ಸಭಾನಾಯಕರು ವಿಷಾದ ವ್ಯಕ್ತಪಡಿಸಿದರೆ ಧರಣಿ ಹಿಂಪಡೆಯುತ್ತೇವೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎನ್.ಎಸ್​.ಭೋಸರಾಜ್, “ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಸ್ವಾಗತಿಸಲಾಗಿದೆ” ಎಂದರು.

ಇದರಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರೆಸಿದಾಗ ಮಧ್ಯಪ್ರವೇಶಿಸಿದ ಹೊರಟ್ಟಿ, “ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸ್ವಾಗತ ಎಂದು ಸರ್ಕಾರ ಹೇಳಿದೆ ಎಂದ ಮೇಲೆ ಎಲ್ಲವೂ ಸರಿ ಆಯ್ತು ಎಂದರ್ಥ” ಎಂದು ಹೇಳಿದರು.

ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ, “ಹೇಗೆ ಆ ರೀತಿ ಅರ್ಥ ಬರುತ್ತೆ?. ಯಾವ ಡಿಕ್ಷನರಿಯಲ್ಲಿದೆ ತೋರಿಸಿ” ಎಂದು ಪ್ರಶ್ನಿಸಿದರು.

ಸದನದಲ್ಲಿ ಜಟಾಪಟಿ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, “ಸದನದ ರೂಲ್ ಬುಕ್ ಹರಿದು ಹಾಕಿದ್ದಾರೆ. ಇದೊಂದು ಪುಸ್ತಕವಲ್ಲ. ಈ ಸದನಕ್ಕೆ ಸಂವಿಧಾನವಿದ್ದಂತೆ. ಬಿಜೆಪಿಯವರಿಗೆ ಸಂವಿಧಾನವೆಂದರೆ ರೋಗವಿದ್ದಂತೆ” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸದಸ್ಯ ಅರುಣ್ ಶಂಕರಮೂರ್ತಿ ಅವರು ಹರಿಪ್ರಸಾದ್ ಅವರನ್ನು ಉದ್ದೇಶಿಸಿ ಮಾತನಾಡಿ, “ರಾಜ್ಯಪಾಲರನ್ನು ಕೈ ತೋರಿಸಿ ಮಾತನಾಡಿರುವುದು ಸರಿಯಲ್ಲ” ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಕಾಲು ತೋರಿಸಕಾಗುತ್ತಾ?” ಎಂದು ಕೇಳಿದರು.

Tags: ಬಿ.ಕೆ.ಹರಿಪ್ರಸಾದ್
Previous Post

ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆಯಲ್ಲಿ OPD ಸೇವೆಗಳಿಗೆ ಮಾತ್ರ ಅನುಮತಿಸಲಾಗಿದೆ: ಸಚಿವ ದಿನೇಶ್ ಗುಂಡೂರಾವ್

Next Post

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

Next Post
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.