ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ರಾಮನಗರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಹಾಜಿ ಸೈಯದ್ ಜಿಯಾವುಲ್ಲಾ ಹೃದಯಾಘಾತದಿಂದ ನಿಧನರಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿರುವ ತೋಪ್‌ಖಾನ್ ಮೊಹಲ್ಲಾದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆ ಜಿಯಾವುಲ್ಲಾ ಸಾಕಷ್ಟು ನಿಕಟ ಸಂಬಂಧ ಹೊಂದಿದ್ದರು. ಅಂತಿಮ ದರ್ಶನದ ಬಳಿಕ ಮಾತನಾಡಿದ ಡಿಸಿಎಂ, ಸುಮಾರು 40 ವರ್ಷಗಳಿಂದ ಜಿಯಾವುಲ್ಲಾ ನನಗೆ ಪರಿಚಯವಿದ್ದು, ನಮ್ಮ ಪಕ್ಷದ ಆಧಾರವಾಗಿದ್ದರು. ತಿರುಪತಿಯಲ್ಲಿದ್ದ ನನಗೆ ಅವರ ಸಾವಿನ ಸುದ್ದಿ ಕೇಳಿ ಬಹಳ ಆಘಾತವಾಗಿದೆ ಎಂದವರು ತಿಳಿಸಿದ್ದಾರೆ.



