BREAKING NEWS
ಸಚಿವ ಸಂಪುಟ ವಿಸ್ತರಣೆ ಕಸರತ್ತು: “ಮಂತ್ರಿ ಗಾದಿ”ಗಾಗಿ ಜಮೀರ್ ಅಹ್ಮದ್ ಖಾನ್ ದಿಲ್ಲಿಯತ್ತ ದೌಡು, ‘ರಾಜಕೀಯ ಗುರು’ ಹೇಳಿಕೆಯ ಸಂಚಲನ!   •   ‘ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಆದರೆ ಪುತ್ರ ಹಾಗೂ ಭೈರತಿ ಸುರೇಶ್‌ರಿಂದ ಕಲುಷಿತ’: ಸ್ವಪಕ್ಷದ ವಿರುದ್ಧವೂ ಗುಡುಗಿದ ಯತ್ನಾಳ್!   •   ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಹೊಸ ರೂಪ: ‘ಜೆನ್ ಜೀ’, ಐಟಿ ಉದ್ಯೋಗಿಗಳ ಬೆಂಬಲಕ್ಕೆ ರೈತರ ಕರೆ!   •   ಲೋಕಸಭೆಯಲ್ಲಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಕ್ಕೆ ಅಮಿತ್ ಶಾ ಆದೇಶ: ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?   •   ರಾಜಕೀಯ ಕಲುಷಿತ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಿದ್ದರಾಮಯ್ಯ   •   ಸೌಜನ್ಯ ಪ್ರಕರಣ: ಸಿಬಿಐ ತನಿಖೆ ‘ಕಳಪೆ’, ರಾಜ್ಯದಿಂದಲೇ ತನಿಖೆಯಾಗಲಿ ಎಂದ ಸುಪ್ರೀಂ ಕೋರ್ಟ್   •   ‘ಬಾರ್ ಕಟ್ಟಡದಲ್ಲೇ ಬಿಸಿಎಂ ಹಾಸ್ಟೆಲ್’ – ‘ಸಂಭ್ರಮಪ್ರಭ’ ವರದಿಗೆ ಎಚ್ಚೆತ್ತ ಸರ್ಕಾರ   •   ಫಲಾನುಭವಿಗಳ ಗಮನಕ್ಕೆ: ಗೃಹಲಕ್ಷ್ಮಿಗೆ ವೋಟರ್ ಐಡಿ ಕಡ್ಡಾಯ, ಗೃಹಜ್ಯೋತಿ ಗೊಂದಲಕ್ಕೆ ಬೆಸ್ಕಾಂ ಹೆಲ್ಪ್‌ಲೈನ್   •  

—Advertisement—

, ,

‘ನವೆಂಬರ್ ಕ್ರಾಂತಿ’ ಇಲ್ಲ, ಕ್ರಾಂತಿ ಏನಿದ್ದರೂ 2028ಕ್ಕೆ: ಡಿಕೆಶಿ ಹೇಳಿಕೆ ಹಿಂದಿರುವ ಮರ್ಮ ಏನು?

Author Picture
Published On: November 6, 2025

—Advertisement—

Updated By: Priyalachhi

ಬೆಂಗಳೂರು/ನವದೆಹಲಿ: ರಾಜ್ಯ ರಾಜಕೀಯದಲ್ಲಿ “ನವೆಂಬರ್ ಕ್ರಾಂತಿ” ಭಾರಿ ಸದ್ದು ಮಾಡುತ್ತಿದೆ. ಆದರೆ ನಾಯಕತ್ವ ಬದಲಾವಣೆಯ ಈ ಕ್ರಾಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, 2028 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಹೇಳಿದ್ದಾರೆ.

ತಾವು ಪಕ್ಷದ “ಶಿಸ್ತಿನ ಸಿಪಾಯಿ” ಎಂದು ಹೇಳಿಕೊಂಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ಈ ತಿಂಗಳು ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳಿವೆ. ಇದನ್ನೇ “ನವೆಂಬರ್ ಕ್ರಾಂತಿ” ಎಂದು ಕರೆಯಲಾಗುತ್ತಿದೆ.

ನಾನು (ಹೈಕಮಾಂಡ್‌) ಯಾರನ್ನೂ ಭೇಟಿಯಾಗುತ್ತಿಲ್ಲ. ಸಚಿವ ಸಂಪುಟ ಪುನರ್ರಚನೆ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಸಿಎಂ ಅವರ ವಿಶೇಷ ಹಕ್ಕು. ಅವರು ಅದನ್ನು ಮಾಡಲಿ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳೀದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದರು.

ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಇರಬೇಕೆಂದು ಹೇಳಿದರೆ, ಅವರು ಐದು ವರ್ಷಗಳ ಕಾಲ ಇರುತ್ತಾರೆ. ಅವರು ಹತ್ತು ವರ್ಷಗಳ ಕಾಲ ಇರಬೇಕಾದರೆ, ಅವರು ಹತ್ತು ವರ್ಷಗಳ ಕಾಲ ಇರುತ್ತಾರೆ. 15 ವರ್ಷಗಳ ಕಾಲ ಇದ್ದರೆ, ಅವರು 15 ವರ್ಷಗಳ ಕಾಲ ಇರುತ್ತಾರೆ. ನಮಗೆ (ಪಕ್ಷದಿಂದ) ನೀಡಿದ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ” ಎಂದು ಹೇಳಿದರು.

ನವೆಂಬರ್ ಕ್ರಾಂತಿಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ನವೆಂಬರ್ ಅಥವಾ ಡಿಸೆಂಬರ್ ಅಥವಾ ಜನವರಿ ಅಥವಾ ಫೆಬ್ರವರಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ. ಅದು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿಯಾಗುತ್ತದೆ” ಎಂದರು.

ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26 ರ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, “ಯಾರೋ ಸುಮ್ಮನೆ ಅದನ್ನು ಹಾಗೆ ಬರೆದಿದ್ದಾರೆ… ಯಾವುದೇ ಕ್ರಾಂತಿ ಇರುವುದಿಲ್ಲ” ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp