Updated By: Priyalachhi
ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎಂಬ ಟ್ಯಾಗ್ ಲೈನ್ ಹೊಂದಿರುವ ಲ್ಯಾಂಡ್ಲಾರ್ಡ್ ಸಿನಿಮಾ ಇಂದು ಕರ್ನಾಕದ್ಯಾಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಗಿದೆ. ಜಡೇಶ್ ಕೆ ಹಂಪಿ ನಿರ್ದೇಶನದ ಲ್ಯಾಂಡ್ಲಾರ್ಡ್, ಸಿನಿಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿದೆ. ಟ್ರೇಲರ್ ನೋಡಿದಾಗ ಪಾಳೇಗಾರಿಕೆ ಹಾಗೂ ಬಡ ರೈತರ ನಡುವಿನ ಸಂಘರ್ಷದ ಕಥೆ ಅನ್ನೋ ಸುಳಿವು ಬಿಟ್ಟುಕೊಟ್ಟಿತ್ತು. ಅಂದುಕೊಂಡಂತೆ ಲ್ಯಾಂಡ್ ಲಾರ್ಡ್ ಸಿನಿಮಾ ಪಾಳೇಗಾರಿಕೆ, ಸಮಾನತೆ ಬಗ್ಗೆ ಧ್ವನಿ ಎತ್ತಿದೆ.
ರಾಮದುರ್ಗ ಎಂಬ ಹಳ್ಳಿಯಲ್ಲಿ ನಡೆಯುವ ಕಥೆ ಲ್ಯಾಂಡ್ ಲಾರ್ಡ್. ಸುಮಾರು 80 – 90ರ ದಶಕದ ಕಥೆ ಇದು. ಕೋಲಾರ ಭಾಗದ ಭಾಷೆಯನ್ನು ಬಳಸಿಕೊಳ್ಳುವ ಜೊತೆಗೆ, ನೆಲದ ಕಥೆಯನ್ನು ಬಹಳ ಸೂಕ್ಷ್ಮವಾಗಿ ನಿರ್ದೇಶಕ ಜಡೇಡ್ ಕೆ ಹಂಪಿ ತೆರೆ ಮೇಲೆ ಹೇಳಿ ಯಶಸ್ವಿಯಾಗಿದ್ದಾರೆ.
ಊರಿನ ಧಣಿ ಎನಿಸಿಕೊಂಡವರ ದಬ್ಬಾಳಿಕೆ, ಅವರ ಪರ ನಿಲ್ಲುವ ಕಾನೂನು, ಪೊಲೀಸ್ ಎಂಬ ವ್ಯವಸ್ಥೆ ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಲ್ಯಾಂಡ್ ಲಾರ್ಡ್ ಸಿನಿಮಾದ ತಿರಳು. ರೈತನ ಪಾತ್ರದಲ್ಲಿ ದುನಿಯಾ ವಿಜಯ್ 2 ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಹುಶಃ ವಿಜಯ್ ಸಿನಿಮಾ ಕೆರಿಯರ್ನಲ್ಲಿ ಈ ಚಿತ್ರ ವಿಶೇಷ ಸ್ಥಾನ ಪಡೆದುಕೊಳ್ಳುವ ಎಲ್ಲ ಲಕ್ಷಣಗಳಿವೆ. ರಚಿತಾ ರಾಮ್ ಕೂಡಾ ನಿಂಗವ್ವನ ಪಾತ್ರದಲ್ಲಿ ಗಟ್ಟಿಗಿತ್ತಿ ತಾಯಿಯಾಗಿ ನೋಡುಗರಿಗೆ ಇಷ್ಟ ಆಗ್ತಾರೆ.

