Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಅಕ್ಷಯ ತೃತೀಯ ಶುಭ ಮೂಹೂರ್ತ ಯಾವಾಗ? ಚಿನ್ನ-ಬೆಳ್ಳಿ ಖರೀದಿ ಸಾಧ್ಯವಾಗದಿದ್ದರೆ ಈ ವಸ್ತುಗಳನ್ನಾದರೂ ಮನೆಗೆ ತನ್ನಿ
Nation News Home

ಅಕ್ಷಯ ತೃತೀಯ ಶುಭ ಮೂಹೂರ್ತ ಯಾವಾಗ? ಚಿನ್ನ-ಬೆಳ್ಳಿ ಖರೀದಿ ಸಾಧ್ಯವಾಗದಿದ್ದರೆ ಈ ವಸ್ತುಗಳನ್ನಾದರೂ ಮನೆಗೆ ತನ್ನಿ

Sambrama Prabha NewsBy Sambrama Prabha NewsApril 20, 2026No Comments2 Mins Read
Share WhatsApp Facebook Twitter Telegram
Share
WhatsApp Facebook Twitter Telegram

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಹಿಂದೂ ಪಂಚಾಂಗದ ಪ್ರಕಾರ, ಏಪ್ರಿಲ್‌ 19, 2026ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯವನ್ನು ಸಂಪತ್ತು, ಸಮೃದ್ಧಿ ಮತ್ತು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷಯ ತೃತೀಯದಲ್ಲಿ ಗ್ರಹಗಳ ಅಪರೂಪದ ಸಂಯೋಗದಿಂದಾಗಿ ಅಕ್ಷಯ ಯೋಗ, ಮಾಲವ್ಯ ರಾಜಯೋಗ, ಗಜಕೇಸರಿ ರಾಜಯೋಗಗಳಂತಹ ಹಲವು ಶುಭ ಯೋಗಗಳು ಬರಲಿವೆ.

ಸಂಸ್ಕೃತದಲ್ಲಿ ‘ಅಕ್ಷಯ’ ಎಂದರೆ ‘ಎಂದಿಗೂ ಕ್ಷಯಿಸದ ಅಂದರೆ ಕಡಿಮೆಯಾಗದ ಅಥವಾ ‘ಶಾಶ್ವತ’ ಎಂಬ ಅರ್ಥವಿದ್ದು, ಈ ದಿನದಂದು ಕೈಗೊಳ್ಳುವ ಯಾವುದೇ ಶುಭ ಕಾರ್ಯ ಅಥವಾ ಹೂಡಿಕೆಯು ಕಾಲಕ್ರಮೇಣ ವೃದ್ಧಿಸುತ್ತಲೇ ಇರುತ್ತದೆ ಎಂಬುದು ಅಚಲ ನಂಬಿಕೆ.

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯ ಈ ದಿನ ಯಾವುದೇ ವಸ್ತು ಖರೀದಿಸಿದರೂ ಅದು ಮನೆಯಲ್ಲಿ ಸಮೃದ್ಧಿಯಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ಚಿನ್ನ ಖರೀದಿಸಿದರೆ ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಗೆ ಪ್ರವೇಶಿಸುತ್ತಾಳೆ ಎನ್ನಲಾಗುತ್ತದೆ. ಐಶ್ವರ್ಯ ಮತ್ತು ಸಂಪತ್ತು ಶಾಶ್ವತವಾಗಿ ನೆಲೆಸಲಿ ಎಂಬ ಆಶಯದಿಂದ ಜನ ಚಿನ್ನದ ಮಳಿಗೆಗಳಿಗೆ ಮುಗಿಬೀಳುತ್ತಾರೆ.

ಪರಂಪರೆಯ ಪ್ರಕಾರ, ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು ಕೇವಲ ಆಭರಣದ ಹೂಡಿಕೆಯಲ್ಲ, ಬದಲಿಗೆ ಅದು ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಒಂದು ಸಂಪ್ರದಾಯವಾಗಿದೆ. 2026ರ ಸಾಲಿನಲ್ಲಿ ಈ ಹಬ್ಬವು ಏಪ್ರಿಲ್ 19ರಂದು ಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಸಲು ಕಾತರದಿಂದ ಕಾಯುತ್ತಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ದಾನ. ಈ ದಿನ ನೀವು ಮಾಡುವ ಸಣ್ಣ ದಾನವೂ ಸಹ ನಿಮಗೆ ಪುಣ್ಯವನ್ನು ನೀಡುತ್ತದೆ ಎಂಬುದು ಸನಾತನ ಧರ್ಮದ ನಂಬಿಕೆ. ಅಂದು ಮನೆಯನ್ನು ಸ್ವಚ್ಛಗೊಳಿಸಿ, ಮಹಾಲಕ್ಷ್ಮಿ, ಗಣಪತಿ, ಸರಸ್ವತಿ ಮತ್ತು ಕುಬೇರನ ಪೂಜೆ ಮಾಡಿದರೆ ಸಾಕು, ನಿಮ್ಮ ಐಶ್ವರ್ಯ ದ್ವಿಗುಣಗೊಳ್ಳುವುದರಲ್ಲಿ ಸಂಶಯವಿಲ್ಲ.

ಅಕ್ಷಯ ತೃತೀಯ ದಿನದಂದು ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮುಹೂರ್ತವನ್ನು ನೋಡದೆ ಮದುವೆ, ಗೃಹಪ್ರವೇಶ, ಹೊಸ ಅಂಗಡಿ, ಉದ್ಯಮ, ವ್ಯವಹಾರದಂತಹ ಚಟುವಟಿಕೆಗಳನ್ನು ಆರಂಭಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಅಕ್ಷಯ ತೃತೀಯದಂದು ನಿಮಗೆ ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೇ ಕನಿಷ್ಠ ಈ 5 ವಸ್ತುಗಳನ್ನಾದರೂ ಮನೆಗೆ ತನ್ನಿ!

ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದು ಚಿನ್ನ ಖರೀದಿಸುವುದಕ್ಕಿಂತಲೂ ಶ್ರೇಷ್ಠ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ. ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಲಾಗಿದೆ. ಈ ದಿನ ಉಪ್ಪನ್ನು ಮನೆಗೆ ತರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ, ಧನಾತ್ಮಕತೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ಹೊಸ ಮಣ್ಣಿನ ಪಾತ್ರೆ ಅಥವಾ ಮಡಿಕೆಯನ್ನು ಈ ದಿನ ಖರೀದಿಸುವುದು ಅತ್ಯಂತ ಶುಭದಾಯಕ.

ಮನೆಯಲ್ಲಿ ತುಳಸಿ ಗಿಡ ಇಲ್ಲದವರು ಅಕ್ಷಯ ತೃತೀಯದಂದು ಹೊಸ ಗಿಡವನ್ನು ಖರೀದಿಸಿ ನೆಡುವುದು ಶ್ರೇಯಸ್ಕರ.

ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಅರಿಶಿನ ಮತ್ತು ಕುಂಕುಮ ಸೌಭಾಗ್ಯದ ಸಂಕೇತಗಳಾಗಿವೆ.

ವಿದ್ಯೆಯೇ ಮಹಾಧನ. ಈ ದಿನ ಪುಸ್ತಕಗಳನ್ನು ಖರೀದಿಸುವುದು ಉತ್ತಮ.

ಒಟ್ಟಿನಲ್ಲಿ ಅಕ್ಷಯ ತೃತೀಯದಂದು ಚಿನ್ನ-ಬೆಳ್ಳಿಯನ್ನು ಖರೀದಿಸುವುದು ಶುಭ ಎಂದು ಹೇಳಲಾಗುತ್ತದೆ. ಆದರೆ ಚಿನ್ನ-ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುವಳು ಎಂದು ಹೇಳಲಾಗುತ್ತದೆ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
ಅಕ್ಷಯ ತೃತೀಯ
Add as Preferred on Google Follow on Google News
Share. WhatsApp Facebook Twitter Telegram
Previous Articleಸೋಮವಾರದ ಪಂಚಾಂಗ, ಭವಿಷ್ಯ
Next Article Cauvery River: ದರ್ಗಾಕ್ಕೆ ಬಂದವರ ದುರಂತ ಅಂತ್ಯ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

October 8, 2026

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

October 6, 2026

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

October 1, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.