ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಹೈದರಾಬಾದ್ : ಅಮೆರಿಕ ಮತ್ತು ಇರಾನ್ ಪಡೆಗಳು ಪತನಗೊಂಡ ಅಮೆರಿಕದ ವಾಯುಪಡೆಯ ಸಿಬ್ಬಂದಿಯನ್ನು ಹುಡುಕಲು ಪರದಾಡುತ್ತಿರುವಾಗ, ಒಪ್ಪಂದವನ್ನು ಮಾಡಿಕೊಳ್ಳಲು ಅಥವಾ ಸಂಪೂರ್ಣ ನರಕವನ್ನು ಎದುರಿಸಲು ಟೆಹ್ರಾನ್‌ಗೆ 48 ಗಂಟೆಗಳು ಉಳಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಎಚ್ಚರಿಕೆ ರವಾನಿಸಿದ್ದಾರೆ.
ಇರಾನ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ದಾಳಿ ನಡೆದ ನಂತರ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿದ್ದು, ಟೆಹ್ರಾನ್ ಈ ಪ್ರದೇಶದಲ್ಲಿ ಹೊಸ ದಾಳಿಗಳನ್ನು ಘೋಷಿಸಿದ ಬಳಿಕ, ಐಆರ್ಜಿಸಿ ಪಡೆ ಇಸ್ರೇಲ್‌ಗೆ ಸಂಬಂಧಿಸಿದೆ ಎಂದು ಹೇಳಲಾದ ಬಹ್ರೇನ್‌ನಲ್ಲಿರುವ ವಾಣಿಜ್ಯ ಹಡಗನ್ನು ಹೊಡೆದಿದ್ದಾರೆ ಎಂದು ವರದಿಯಾದ ನಂತರ ಟ್ರಂಪ್ ಅವರು ಈ ಬೆದರಿಕೆ ಒಡ್ಡಿದ್ದಾರೆ.
ಒಂದು ತಿಂಗಳ ಹಿಂದೆ (ಫೆ.28) ಅಮೆರಿಕ-ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ನಡೆಸಿದ್ದರಿಂದಾಗಿ ಯುದ್ಧ ಭುಗಿಲೆದ್ದಿತು. ಇದು ಪ್ರತೀಕಾರಕ್ಕೆ ಕಾರಣವಾಯಿತು. ವಿಶೇಷವಾಗಿ ತೈಲ ಮತ್ತು ಅನಿಲಕ್ಕೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದಾಗಿ ಮಧ್ಯಪ್ರಾಚ್ಯದಾದ್ಯಂತ ಸಂಘರ್ಷವನ್ನು ಹರಡಿತು ಮತ್ತು ಜಾಗತಿಕ ಆರ್ಥಿಕತೆಯನ್ನೂ ಅಲುಗಾಡಿಸಿತು.
ಇದೀಗ ಟ್ರಂಪ್ ಅವರು, ‘ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನಾನು ಇರಾನ್‌ಗೆ 10 ದಿನಗಳ ಕಾಲಾವಕಾಶ ನೀಡಿದ್ದನ್ನು ನೆನಪಿಡಿ’ ಎಂದು ಟ್ರಂಪ್ ಮಾರ್ಚ್ 26 ರಂದು ಹೊರಡಿಸಲಾದ ಅಲ್ಟಿಮೇಟಮ್ ಅನ್ನು ಉಲ್ಲೇಖಿಸಿ ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
“ಸಮಯ ಮುಗಿಯುತ್ತಿದೆ – 48 ಗಂಟೆಗಳ ಮೊದಲು ಎಲ್ಲಾ ನರಕವು ಅವರ ಮೇಲೆ ಆಳ್ವಿಕೆ ನಡೆಸುತ್ತದೆ (sic).” ಎಂದು ಹೇಳಿದ್ದಾರೆ.
ಇರಾನ್ ಸೇನೆಯು ಅಮೆರಿಕದ ಎ-10 ಭೂ ದಾಳಿ ವಿಮಾನವನ್ನು ಕೊಲ್ಲಿಯಲ್ಲಿ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದು, ಆ ವಿಮಾನದ ಪೈಲಟ್‌ನನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ತಿಳಿಸಿವೆ.
ಕಾಣೆಯಾದ ಪೈಲಟ್‌ಗಾಗಿ ಹುಡುಕಾಟವು ಇನ್ನೂ ಮುಂದುವರೆದಿದೆ ಎಂದು ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದ ಉಪ ಗವರ್ನರ್ ಫತ್ತಾಹ್ ಮೊಹಮ್ಮದಿ ಅವರು ಹೇಳಿರುವುದಾಗಿ ಸ್ಥಳೀಯ ಮೆಹರ್ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.
“ನಿನ್ನೆ ರಾತ್ರಿ ಸೇನಾ ಪಡೆ ಶತ್ರು ಹೆಲಿಕಾಪ್ಟರ್ ಮೇಲೆ ರೈಫಲ್‌ಗಳಿಂದ ಗುಂಡು ಹಾರಿಸಿದರು ಮತ್ತು ಅವರನ್ನು ಇಳಿಯಲು ಬಿಡಲಿಲ್ಲ” ಎಂದು ಅವರು ಹೇಳಿದ್ದಾಗಿ ತಿಳಿಸಿವೆ.

