ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ವಿಜಯ್ ಅವರ ಜನ ನಾಯಗನ್ ನಂತರ ಕೆವಿಎನ್ ಪ್ರೊಡಕ್ಷನ್ಸ್ ಮತ್ತೊಂದು ಸೆನ್ಸಾರ್ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ತೋರುತ್ತಿದೆ. ಈ ಬಾರಿ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರಕ್ಕೆ ಅನಿರೀಕ್ಷಿತ ಅಡಚಣೆ ಎದುರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಕೆವಿಎನ್ ಕೆಡಿ ಸಿನಿಮಾ ಮೇಲೆ ಸೆನ್ಸಾರ್ ಬೋರ್ಡ್ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಸಿನಿಮಾಗಳಿಗೆ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್‍ನಿಂದ ಅನ್ಯಾಯ ಆಗುತ್ತಿದೆ. ನಿಮಯ ಉಲ್ಲಂಘಿಸಿ, ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿದೆ.

ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ‘ಎ’ ಸರ್ಫಿಟಿಕೇಟ್ ನೀಡುವುದಾಗಿ ಹೇಳಿತ್ತು. ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು. ಇದನ್ನು ಪಾಸ್ ಮಾಡದ ಕೇಂದ್ರ ಸೆನ್ಸಾರ್ ಮಂಡಳಿ, ಮತ್ತೆ ರಿವೈಸಿಂಗ್ ಕಮಿಟಿಗೆ ಕಳುಹಿಸಿ ಈ ಧೋರಣೆ ತೋರಿದೆ. ನಾವು ಸರಿಯಾದ ಮಾರ್ಗದ ಮೂಲಕ ಹೋಗಿದ್ದೇವೆ ಎಂದು ನಿರ್ದೇಶಕ ಪ್ರೇಮ್ ವಿವಾದದ ಬಗ್ಗೆ ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ, ಚಿತ್ರಕ್ಕೆ ಅನುಮತಿ ಸಿಗುತ್ತಿಲ್ಲ ಮತ್ತು ಮುಂಬೈನಲ್ಲಿರುವ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ನಮಗೆ ಸರಿಯಾದ ಸಂವಹನ ಮತ್ತು ಸ್ಪಷ್ಟತೆ ಇರಲಿಲ್ಲ. ನನಗಾಗಲಿ, ನಿರ್ಮಾಪಕರಿಗಾಗಲಿ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಔಪಚಾರಿಕವಾಗಿ ತಿಳಿಸಲಾಗಿಲ್ಲಇದು ಹೇಗಾಗುತ್ತದೆ ಎಂದು ಅವರು ಪ್ರಶ್ನಿಸುತ್ತಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version