BREAKING NEWS
‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •   ಡಿಕೆ ಶಿವಕುಮಾರ್‌ಗೆ ಒಲಿದ ಸಿಎಂ ಪಟ್ಟ: ಮತ್ತೆ ಮುನ್ನೆಲೆಗೆ ಬಂತು ಕುಮಾರಕೃಪಾ ರಸ್ತೆಯ ‘ಅದೃಷ್ಟದ ಮನೆ’ಯ ರೋಚಕ ಕಥೆ!   •   ಬೆಂಗಳೂರು: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಜಾಜಿನಗರ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ   •   40,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ   •   ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ   •   ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!   •  

—Advertisement—

ಕೋಟ್ಯಂತರ ರೂ ವೆಚ್ಚದಲ್ಲಿ ‘ಹಿಂದೂ ದೇವಾಲಯ’ ಕಟ್ಟಿಸಿಕೊಟ್ಟ ಮುಸ್ಲಿಂ ಉದ್ಯಮಿ!

Author Picture
Published On: November 4, 2025

—Advertisement—

Updated By: Priyalachhi

ರಾಮನಗರ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಬೊಂಬೆನಗರಿ ಚನ್ನಪಟ್ಟಣ ಸಾಕ್ಷಿಯಾಗಿದೆ. ಇಲ್ಲಿನ ಮಂಗಳವಾರಪೇಟೆಯಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬಸವೇಶ್ವರ ದೇವಾಲಯವನ್ನು ಮುಸ್ಲಿಂ ಉದ್ಯಮಿಯೊಬ್ಬರು ಕೋಟ್ಯಂತರ ರೂ. ವೆಚ್ಚ ಮಾಡಿ ಕಟ್ಟಿಸಿಕೊಟ್ಟಿದ್ದಾರೆ.

ಶಿಥಿಲಗೊಂಡಿದ್ದ ದೇವಾಲಯ ಪುನರ್ ನಿರ್ಮಾಣಕ್ಕೆ ರೂ. 3 ಕೋಟಿ ಹಣವನ್ನ ದೇಣಿಗೆ ನೀಡಿರುವ ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ , ನೂತನ ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವ ಮೂಲಕ ಮಾದರಿಯಾಗಿದ್ದಾರೆ.

ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಮುಖಂಡರು ಸನ್ಮಾನಿಸಿದ್ದು, ಬೆಳ್ಳಿ‌ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.

ದೇವಾಲಯ ನಿರ್ಮಾಣಕ್ಕೆ ಇದೇ ಗ್ರಾಮದ ಕೆಂಪಮ್ಮ ಹಾಗೂ ಮೋಟೇಗೌಡರು ತಮ್ಮ ಸ್ವಂತ ಜಾಗ ಬಿಟ್ಟುಕೊಟ್ಟಿದ್ದು, ನಂತರ ಸೈಯದ್ ಉಲ್ಲಾ ಸಖಾಫ್ ಅವರು ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಕಲ್ಲಿನ ದೇವಸ್ಥಾನ ಕಟ್ಟಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.

ಲೋಕಾರ್ಪಣೆಗೊಂಡ ದೇವಸ್ಥಾನ ರಾಷ್ಟ್ರವಾಸಿಗಳಿಗೆ ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಹಬಾಳ್ವೆ ಸಂದೇಶವನ್ನು ಸಾರುತ್ತಿದೆ. ಅದರಲ್ಲೂ ಹಿಂದೂ-ಮುಸ್ಲಿಂ ಒಗ್ಗಟ್ಟಾಗಿರಬೇಕೆಂಬ ಸಂದೇಶ ನೀಡುತ್ತಿರುವುದು ವಿಶೇಷ.

ಈ ಹಿಂದೆಯೂ ಸಂತೇ ಮೊಗೇನಹಳ್ಳಿಯಲ್ಲಿ ಸ್ವಂತ ಹಣದಲ್ಲಿ ವೀರಭದ್ರೇಶ್ವರ ದೇಗುಲವನ್ನು ನಿರ್ಮಾಣ ಮಾಡುವ ಮೂಲಕ ಸೈಯದ್ ಉಲ್ಲಾ ಭಾವೈಕ್ಯತೆ ಮರೆದಿದ್ದರು. ಹಿಂದೂ ದೇವಾಲಯ ಹಾಗೂ ಮುಸ್ಲಿಂ ಗೋರಿಯನ್ನು ಒಂದೇ ಕಾಂಪೌಂಡಿನೊಳಗೆ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದು, ಇದೀಗ ಮತ್ತೊಂದು ದೇವಸ್ಥಾನ ಕಟ್ಟಿಸಿ ಸೈಯದ್ ಉಲ್ಲಾ ಸಖಾಫ್ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp