• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ದುರ್ಬಲಗೊಂಡ ಡಾಲರ್​; ಚಿನ್ನ – ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

Sambrama Prabha News by Sambrama Prabha News
January 23, 2026
in Latest News
0
ದುರ್ಬಲಗೊಂಡ ಡಾಲರ್​; ಚಿನ್ನ – ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

Updated By: Priyalachhi

ನವದೆಹಲಿ; ಅಮೆರಿಕ ಡಾಲರ್ ದುರ್ಬಲಗೊಂಡಿರುವುದು ಮತ್ತು ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನ ಮತ್ತು ಬೆಳ್ಳಿಯ ಭವಿಷ್ಯದ ವ್ಯವಹಾರದಲ್ಲಿ( ಪ್ಯೂಚರ್​ ವಹಿವಾಟು) ಭಾರಿ ಏರಿಕೆ ಕಂಡು ಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ MCX ನಲ್ಲಿ ಮಾರ್ಚ್ ತಿಂಗಳ ಬೆಳ್ಳಿ ಒಪ್ಪಂದವು( ಪ್ಯೂಚರ್​​​ ವ್ಯವಹಾರ) 12,638 ರೂ ಏರಿಕೆಯಾಗಿ ಪ್ರತಿ ಕೆಜಿಗೆ 3,39,927 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

ಬುಧವಾರದ ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಫ್ಯೂಚರ್‌ ದರಗಳು ಪ್ರತಿ ಕೆಜಿಗೆ 3,35,521 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಚಿನ್ನವು ಸಹ ಗರಿಷ್ಠ ಮಟ್ಟವನ್ನು ತಲುಪಿದ್ದು ಸತತ ಐದನೇ ದಿನವೂ ಏರಿಕೆ ಕಾಣುತ್ತಿದೆ. ಫೆಬ್ರವರಿ ವಿತರಣೆಗಾಗಿನ ವ್ಯವಹಾರದಲ್ಲಿ( ಪ್ಯೂಚರ್​ ವಹಿವಾಟು) ಹಳದಿ ಲೋಹವು ಎಂಸಿಎಕ್ಸ್‌ನಲ್ಲಿ 10 ಗ್ರಾಂಗೆ 2,885 ರೂ. ಏರಿಕೆಯಾಗಿ 1,59,226 ರೂ.ಗಳಿಗೆ ತಲುಪಿದೆ.

ಗುರುವಾರ 24 ಕ್ಯಾರೆಟ್​​ ನ ಪರಿಶುದ್ಧ 10 ಗ್ರಾಂ ಬಂಗಾರದ ಬೆಲೆ 1,56,341 ರೂ.ಗೆ ಇಳಿಕೆ ಕಂಡಿತ್ತು. ಆದರೆ ಇಂದು ಅದರ ದರ ಏರಿಕೆ ದಾಖಲಿಸಿದೆ. MCX ನಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ಏರಿರುವುದು ಜಾಗತಿಕ ಅಪಾಯಕಾರಿ ಅಂಶಗಳು ಮತ್ತು ಸ್ಥೂಲ ಆರ್ಥಿಕ ಹಿನ್ನಡೆಗಳ ಪ್ರಬಲ ಒಮ್ಮುಖವನ್ನು ಪ್ರತಿಬಿಂಬಿಸುತ್ತದೆ ಎಂದು ಆಶಿಕಾ ಗ್ರೂಪ್‌ನ ಮುಖ್ಯ ವ್ಯವಹಾರ ಅಧಿಕಾರಿ ರಾಹುಲ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಈ ರ್‍ಯಾಲಿಗೆ ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ನಿರಂತರ ಭೌಗೋಳಿಕ ಆರ್ಥಿಕ ಅನಿಶ್ಚಿತತೆ ಕಾರಣ ಎಂದು ಗುಪ್ತಾ ಅವರು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಗಮನ ಹರಿಸಿರುವುದರಿಂದ ಬಂಗಾರದ ಬೆಲೆ ತನ್ನ ನಾಗಾಲೋಟ ಮುಂದುವರೆಸಿದೆ. ಇನ್ನು ಅಮೆರಿಕ ಡಾಲರ್ ದುರ್ಬಲಗೊಳ್ಳುತ್ತಿರುವುದು ಜಾಗತಿಕ ಹೂಡಿಕೆದಾರರಲ್ಲಿ ಬುಲಿಯನ್ ಮಾರುಕಟ್ಟೆಯತ್ತ ಚಿತ್ತ ಹರಿಸುವಂತೆ ಮಾಡಿದೆ.

ಅಮೆರಿಕದ ಫೆಡರಲ್​ ಬ್ಯಾಂಕ್​ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಬಂಗಾರದತ್ತ ಒಲವು ತೋರಿಸುತ್ತಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ 99 ಡಾಲರ್ ದಾಟಿದೆ. ಮಾರ್ಚ್ ವಿತರಣೆಗಾಗಿ ಬೆಳ್ಳಿ ಫ್ಯೂಚರ್‌ಗಳು ಶುಕ್ರವಾರ ವಿದೇಶಿ ವ್ಯಾಪಾರದಲ್ಲಿ ಪ್ರತಿ ಔನ್ಸ್‌ಗೆ 3.02 ಡಾಲರ್ ಅಥವಾ ಶೇಕಡಾ 3.14 ರಷ್ಟು ಏರಿಕೆಯಾಗಿ ಔನ್ಸ್‌ಗೆ 99.39 ಡಾಲರ್‌ನ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

ಫೆಬ್ರವರಿ ಒಪ್ಪಂದಕ್ಕಾಗಿ ಕಾಮೆಕ್ಸ್ ಚಿನ್ನದ ಫ್ಯೂಚರ್‌ಗಳು ಸಹ ಪ್ರತಿ ಔನ್ಸ್‌ಗೆ 56.6 ಡಾಲರ್ ಅಥವಾ ಶೇಕಡಾ 1.15 ರಷ್ಟು ಏರಿಕೆಯಾಗಿ 4,970 ಡಾಲರ್‌ಗೆ ತಲುಪಿದೆ. ಹಳದಿ ಲೋಹವು ಗುರುವಾರ ಪ್ರತಿ ಔನ್ಸ್‌ಗೆ 4,913.4 ಡಾಲರ್‌ಗೆ ಮುಕ್ತಾಯಗೊಳ್ಳುವ ಮೊದಲು ನಿರ್ಣಾಯಕವಾದ ಪ್ರತಿ ಔನ್ಸ್‌ಗೆ 4,900 ಡಾಲರ್ ಮಟ್ಟವನ್ನು ಮೀರಿ ಮುನ್ನುಗ್ಗಿತು.

ಚಿನ್ನ ಮತ್ತು ಬೆಳ್ಳಿ ಗರಿಷ್ಠ ಮಟ್ಟವನ್ನು ತಲುಪಿವೆ. ಚಿನ್ನ USD 4,970 (ರೂ. 1,59,200) ಮತ್ತು ಬೆಳ್ಳಿ USD 99.2 (ರೂ. 3,40,000) ತಲುಪಿದೆ. ಇದು ಮಾರ್ಚ್ 2020 ರಿಂದ ಅದರ ಪ್ರಬಲ ಸಾಪ್ತಾಹಿಕ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಇದಕ್ಕೆ ದೀರ್ಘಕಾಲದ ಭೌಗೋಳಿಕ ರಾಜಕೀಯ ಅಪಾಯಗಳು ಮತ್ತು ನಿರಂತರ ಸುರಕ್ಷಿತ ಹೂಡಿಕೆ ಮಾರ್ಗಗಳು ಕಾರಣ ಎಂದು ಆಗ್ಮಾಂಟ್‌ನ ಸಂಶೋಧನಾ ಮುಖ್ಯಸ್ಥೆ ರೆನಿಶಾ ಚೈನಾನಿ ಹೇಳಿದ್ದಾರೆ.

Tags: ಚಿನ್ನಬೆಳ್ಳಿ
Previous Post

ಮೈಸೂರು-ಬೆಳಗೊಳ-ಕುಶಾಲನಗರ ರೈಲ್ವೆ ಯೋಜನೆಗೆ ತಡೆ

Next Post

ಶನಿವಾರದ ಪಂಚಾಂಗ, ರಾಶಿ ಭವಿಷ್ಯ ಹೀಗಿದೆ

Next Post
ಶನಿವಾರದ ಪಂಚಾಂಗ, ರಾಶಿ ಭವಿಷ್ಯ ಹೀಗಿದೆ

ಶನಿವಾರದ ಪಂಚಾಂಗ, ರಾಶಿ ಭವಿಷ್ಯ ಹೀಗಿದೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.