• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ

Sambrama Prabha News by Sambrama Prabha News
April 16, 2026
in Home, Nation News
0
ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ದೆಹಲಿ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಅಕಾಸಾ ಏರ್ ಮತ್ತು ಸ್ಪೈಸ್‌ಜೆಟ್ ವಿಮಾನಗಳ ರೆಕ್ಕೆಗಳು ಪರಸ್ಪರ ತಾಕಿಕೊಂಡಿದ್ದು, ಈ ಘಟನೆದಲ್ಲಿ ಹಾನಿ ಸಂಭವಿಸಿದ ಕಾರಣ ಎರಡೂ ವಿಮಾನಗಳ ಟೇಕ್ ಆಫ್ ನ್ನು ರದ್ದುಗೊಳಿಸಿ ನಿಲ್ಲಿಸಲಾಗಿದೆ.

ಅಕಾಸಾ ಏರ್ ವಿಮಾನ ಟೇಕ್‌ಆಫ್‌ಗೆ ಟ್ಯಾಕ್ಸಿಂಗ್ ಮಾಡುತ್ತಿದ್ದಾಗ ಮತ್ತು ಸ್ಪೈಸ್‌ಜೆಟ್ ವಿಮಾನ ಪಾರ್ಕಿಂಗ್ ಸ್ಟ್ಯಾಂಡ್‌ ಕಡೆಗೆ ಟ್ಯಾಕ್ಸಿಂಗ್ ಮಾಡುತ್ತಿದ್ದಾಗ, ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ಟರ್ಮಿನಲ್ 1 ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕಾಸಾ ಏರ್ ವಿಮಾನ ದೆಹಲಿಯಿಂದ ಹೈದರಾಬಾದ್‌ಗೆ ತೆರಳುವ QP-1406 ವಿಮಾನಯಾನವನ್ನು ನಡೆಸಬೇಕಾಗಿದ್ದು, ಸ್ಪೈಸ್‌ಜೆಟ್ ವಿಮಾನ ಲೇಹ್‌ನಿಂದ ಆಗಮಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

“ದೆಹಲಿಯಿಂದ ಹೈದರಾಬಾದ್‌ಗೆ ತೆರಳಬೇಕಿದ್ದ QP 1406 ವಿಮಾನಯಾನವನ್ನು ನಡೆಸುತ್ತಿದ್ದ ಅಕಾಸಾ ಏರ್ ವಿಮಾನ 2026ರ ಏಪ್ರಿಲ್ 16ರಂದು Bay ಗೆ ಹಿಂದಿರುಗಬೇಕಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಸಾ ವಿಮಾನ ಸ್ಥಿರವಾಗಿ ನಿಂತಿದ್ದಾಗ ಮತ್ತೊಂದು ಏರ್‌ಲೈನ್‌ನ ವಿಮಾನವು ಅದನ್ನು ತಾಕಿದೆ” ಎಂದು ಅಕಾಸಾ ಏರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಭಾಗಿಯಾದ ವಿಮಾನ ಬೋಯಿಂಗ್ 737 ಮ್ಯಾಕ್ಸ್ 8 ಮಾದರಿಯದು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. “ನಿರ್ಧರಿತ ನಿಯಮಾವಳಿಗಳ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ವಿಷಯದ ಕುರಿತು ತನಿಖೆ ನಡೆಯುತ್ತಿದೆ,” ಎಂದು ಅದು ಪ್ರಕಟಿಸಿದೆ.

Tags: ದೆಹಲಿ ವಿಮಾನ ನಿಲ್ದಾಣ
Previous Post

ಹರಿಯಾಣದ 5 ​​ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

Next Post

ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಕೊಹ್ಲಿ ದಾಖಲೆ ಉಡೀಸ್

Next Post
ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಕೊಹ್ಲಿ ದಾಖಲೆ ಉಡೀಸ್

ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಕೊಹ್ಲಿ ದಾಖಲೆ ಉಡೀಸ್

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.