• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಪ್ರಸಕ್ತ ನಿಗಮ, ಮಂಡಳಿ ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶಿಸಿದೆ

Sambrama Prabha News by Sambrama Prabha News
January 29, 2026
in Politics
0
ಪ್ರಸಕ್ತ ನಿಗಮ, ಮಂಡಳಿ ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶಿಸಿದೆ

Updated By: Priyalachhi

ಬೆಂಗಳೂರು: ವಿವಿಧ ನಿಗಮ, ಮಂಡಳಿಗಳಿಗೆ ನೇಮಕಗೊಂಡಿದ್ದ ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ನಿಗಮ, ಮಂಡಳಿಗಳ ಕನಸು ಕಂಡಿದ್ದ ಕೈ ನಾಯಕರಿಗೆ ನಿರಾಸೆಯಾಗಿದೆ.

26.01.2024ರ ಅನ್ವಯ ವಿಧಾನಸಭಾ ಸದಸ್ಯರುಗಳಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ 36 ನಿಗಮ, ಮಂಡಳಿಗಳಿಗೆ ನೇಮಿಸಿ ಆದೇಶಿಸಲಾಗಿತ್ತು. ಈಗಾಗಲೇ ಎರಡು ವರ್ಷಗಳ ಅವಧಿ ಮುಗಿದಿದೆ. ಹೀಗಾಗಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 25 ನಿಗಮ, ಮಂಡಳಿಗಳಿಗೆ ನೇಮಕಗೊಂಡಿರುವ ಶಾಸಕರನ್ನು ಮತ್ತೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ 26.01.2026ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದುವರೆಸಲು ಆದೇಶಿಸಲಾಗಿದೆ.‌

ಇತ್ತ ಎರಡು ವರ್ಷದ ಬಳಿಕ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರು ತಮ್ಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದರು. ಅತ್ತ ತಮಗೂ ನಿಗಮ, ಮಂಡಳಿ ಸ್ಥಾನ ಬೇಕೆಂದು ಪಟ್ಟು ಹಿಡಿದವರಿಗೆ ಇನ್ನುಳಿದ ಅವಧಿಗೆ ಮಾಡೋಣ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭರವಸೆ ನೀಡುತ್ತಿದ್ದರು. ಆದರೆ, ಇದೀಗ ಹಿಂದೆ ನೇಮಕವಾದವರನ್ನೇ ಮುಂದುವರೆಸಿ ಆದೇಶ ಹೊರಡಿಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಆಕಾಂಕ್ಷಿಗಳಿಗೆ ಶಾಕ್: ನಿಗಮ, ಮಂಡಳಿಗಳ ಕನಸು ಕಾಣುತ್ತಿದ್ದ ಕೆಲ ನಾಯಕರಿಗೆ ಇದರಿಂದ ನಿರಾಸೆಯಾಗಲಿದೆ‌. ಎರಡು ವರ್ಷಗಳ ಬಳಿಕ ತಮಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಲಿದೆ ಅಂದುಕೊಂಡವರಿಗೆ ಸರ್ಕಾರದ ಈ ಆದೇಶ ಸದ್ಯ ಶಾಕ್ ನೀಡಿದಂತಾಗಿದೆ. ಮುಂದಿನ ಆದೇಶದವರೆಗೆ ಮುಂದುವರೆಸುವುದಾಗಿ ಆದೇಶದಲ್ಲಿ ಉಲ್ಲೇಖಿಸಿರುವುದು ತುಸು ನಿಟ್ಟುಸಿರು ಬಿಡುವಂತೆಯೂ ಮಾಡಿದೆ. ಇನ್ನು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದವರು ಈ ಆದೇಶದಿಂದ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಾಗಿದೆ.
Tags: ರಾಜ್ಯ ಸರ್ಕಾರ
Previous Post

ನರೇಗಾ ಮೇಲಿನ ಚರ್ಚೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಶಾಸಕರಿಗೆ ಸಿಎಂ ಸೂಚನೆ

Next Post

ನಟ ದರ್ಶನ್: ಜೈಲಲ್ಲೂ ಅಭಿಮಾನಿಗಳ ಕಾಟ

Next Post
ನಟ ದರ್ಶನ್: ಜೈಲಲ್ಲೂ ಅಭಿಮಾನಿಗಳ ಕಾಟ

ನಟ ದರ್ಶನ್: ಜೈಲಲ್ಲೂ ಅಭಿಮಾನಿಗಳ ಕಾಟ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.