• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಫ್ರಾನ್ಸ್ ಜೊತೆಗೂ Donald Trump ಗಲಾಟೆ

Sambrama Prabha News by Sambrama Prabha News
January 21, 2026
in international, Nation News
0
ಫ್ರಾನ್ಸ್ ಜೊತೆಗೂ Donald Trump ಗಲಾಟೆ

Updated By: Priyalachhi

ವಾಷಿಂಗ್ಟನ್: ವೆನೆಜುವೆಲಾ, ಕ್ಯೂಬಾ, ಗ್ರೀನ್ ಲ್ಯಾಂಡ್ ವಿರುದ್ಧ ಕತ್ತಿ ಮಸೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಫ್ರಾನ್ಸ್ ಜೊತೆಗೂ ಗಲಾಟೆ ಮಾಡಿಕೊಂಡಿದ್ದಾರೆ.

ತಾವು ಪ್ರಸ್ತಾವಿಸಿದ್ದ “ಶಾಂತಿ ಮಂಡಳಿ” (Borad of Peace)ಗೆ ಸೇರಲು ಫ್ರಾನ್ಸ್ ನಿರಾಕರಿಸಿದ ಹಿನ್ನಲೆಯಲ್ಲಿ ಆ ದೇಶದ ವಿರುದ್ಧ ಅಸಮಾಧಾನಗೊಂಡಿರುವ ಟ್ರಂಪ್, ಬರೊಬ್ಬರಿ ಶೇ.200ರಷ್ಟು ಸುಂಕ ಘೋಷಣೆ ಮಾಡಿದ್ದಾರೆ. ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಟ್ರಂಪ್ ಡೆನ್ಮಾರ್ಕ್‌ನ ಭಾಗವಾಗಿರುವ ಆರ್ಕ್ಟಿಕ್ ಪ್ರದೇಶದ ಮೇಲೆ ಏಕೆ ಕಣ್ಣಿಟ್ಟಿದ್ದಾರೆ ಎಂಬ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಸಮರ್ಥನೆಯನ್ನು ಪ್ಯಾರಿಸ್ ಅಣಕಿಸಿದ ಬೆನ್ನಲ್ಲೇ ಫ್ರಾನ್ಸ್ ಮೇಲೆ ಟ್ರಂಪ್ ಅವರ ಸುಂಕ ದಾಳಿ ನಡೆದಿದೆ.

ಔಷಧಿಗಳ ಮೇಲೆ ಸುಂಕ ವಿಧಿಸಿದ ಬಳಿಕ, ಇದೀಗ ಮದ್ಯ ಉದ್ಯಮವನ್ನೇ ಟ್ರಂಪ್ ಗುರಿಯಾಗಿಸಿಕೊಂಡಿದ್ದಾರೆ. ಟ್ರಂಪ್ ರ ಈ ನಿರ್ಧಾರದಿಂದ ಅಮೆರಿಕದಲ್ಲಿರುವ ಮದ್ಯಪ್ರಿಯರಿಗೆ ದೊಡ್ಡ ಶಾಕ್‌ ಎದುರಾಗಿದೆ.

Tags: Donald Trumpಫ್ರಾನ್ಸ್
Previous Post

ಪ್ರಧಾನಿ ಮೋದಿ ಅವಧಿಯಲ್ಲಿ ಆದಾಯ ನಾಲ್ಕು ಪಟ್ಟು ಹೆಚ್ಚಳ

Next Post

ಮಂಗಳೂರಿನ ಡಾ.ರಶ್ಮಾ ಎಂ.ಶೆಟ್ಟಿ ಮುಡಿಗೆ ಮಿಸೆಸ್ ಇಂಡಿಯಾ 2025 ಕಿರೀಟ

Next Post
ಮಂಗಳೂರಿನ ಡಾ.ರಶ್ಮಾ ಎಂ.ಶೆಟ್ಟಿ ಮುಡಿಗೆ ಮಿಸೆಸ್ ಇಂಡಿಯಾ 2025 ಕಿರೀಟ

ಮಂಗಳೂರಿನ ಡಾ.ರಶ್ಮಾ ಎಂ.ಶೆಟ್ಟಿ ಮುಡಿಗೆ ಮಿಸೆಸ್ ಇಂಡಿಯಾ 2025 ಕಿರೀಟ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.