• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬದಲಾದ ಜೀವನಶೈಲಿ; ಯುವಕರಲ್ಲಿ ಹೆಚ್ಚುತ್ತಿದೆ ಟೈಪ್ 2 Diabetes..!

Sambrama Prabha News by Sambrama Prabha News
April 17, 2026
in Exclusive, Home, Latest News
0
ಬದಲಾದ ಜೀವನಶೈಲಿ; ಯುವಕರಲ್ಲಿ ಹೆಚ್ಚುತ್ತಿದೆ ಟೈಪ್ 2 Diabetes..!

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಒಬ್ಬ ವ್ಯಕ್ತಿಗೆ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಅದು ಜೀವನ ಪರ್ಯಂತ ಅವರನ್ನು ಕಾಡುತ್ತಲೇ ಇರುತ್ತದೆ. ಈ ಕಾಯಿಲೆಯಿಂದಾಗಿ ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ, ಆದರೆ, ಸಮಸ್ಯೆಯಂತೂ ದೂರಾಗುವುದಿಲ್ಲ. ಹೀಗಾಗಿ ಇದನ್ನು ನಿರ್ವಹಣೆ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ,

ನವೆಂಬರ್ 14 ಸ್ಮರಣೀಯ ದಿನವಾಗಿದ್ದು, ಈ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ನವೆಂಬರ್ 14 ಇನ್ಸುಲಿನ್ ಅನ್ನು ಕಂಡುಹಿಡಿದ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನವಾಗಿದ್ದು, ಹೀಗಾಗಿಸ, ಈ ದಿನವನ್ನು ವಿಶ್ವ ಮಧುಮೇಹ ದಿನವಾಗಿ ಆಚರಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವ ವಯಸ್ಕರಲ್ಲಿ ಟೈಪ್-2 ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬದಲಾದ ಜೀವನಶೈಲಿಯಿಂದಾಗಿ, ಆಹಾರವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ, ಮಧುಮೇಹ, ಬೊಜ್ಜು ಮತ್ತು ತೂಕ ನಿರ್ವಹಣೆಯ ನಿರ್ದೇಶಕ ಡಾ. ಮಂಜುನಾಥ್ ಮಾಳಿಗೆ ಅವರು ಮಾತನಾಡಿ, ಕೊಬ್ಬಿನ ಶೇಖರಣೆಗೆ ಅನುಕೂಲಕರವಾದ “ತ್ರಿಫ್ಟಿ ಫಿನೋಟೈಪ್” ಕಾರಣದಿಂದಾಗಿ ದಕ್ಷಿಣ ಏಷ್ಯನ್ನರು ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆಂದು ಹೇಳಿದ್ದಾರೆ.

ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಮುಖ್ಯಸ್ಥೆ ಮತ್ತು ಸಲಹೆಗಾರ್ತಿ ಡಾ. ಚಿತ್ರಾ ಎಸ್ ಅವರು ಮಾತನಾಡಿ, ಟೈಪ್ 2 ಮಧುಮೇಹ ಸಂಸ್ಕರಿಸಿದ ಆಹಾರಗಳ ಹೆಚ್ಚಿನ ಸೇವನೆ, ಕಡಿಮೆ ನಿದ್ರೆ ಮತ್ತು ದೀರ್ಘಕಾಲದ ಒತ್ತಡದಿಂದಾಗಿ ಕಾಣಿಸಿಕೊಳ್ಳುತ್ತದೆ.

Tags: Diabetes
Previous Post

ಬಾಗಲಕೋಟೆಯಲ್ಲೂ ಕಾಂಗ್ರೆಸ್​​ ಬೆನ್ನಿಗೆ ಚೂರಿ: ಮೂವರು Congress ಮುಖಂಡರ ಉಚ್ಛಾಟನೆಗೆ ಶಿಫಾರಸ್ಸು

Next Post

ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

Next Post
ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.