Updated By: Priyalachhi 

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್‌ 12’ ಸದ್ಯ ಫಿನಾಲೆ ಹಂತಕ್ಕೆ ತಲುಪಿದೆ. ಬಿಗ್‌ಬಾಸ್ ಗೆಲ್ಲುವ ಅದೃಷ್ಟ ಯಾರಿಗಿದೆ? ಎಂಬ ಚರ್ಚೆ ಎಲ್ಲೆಲ್ಲೂ ನಡೆಯುತ್ತಿದೆ. ಈ ಬಾರಿ ಎಲ್ಲಿ ನೋಡಿದರೂ ಗಿಲ್ಲಿ- ಗೆಲ್ಲಿ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದೆ.

ತನ್ನದೇ ಆದ ಹಳ್ಳಿ ಸೊಗಡಿನ ಮಾತು, ಹಾಸ್ಯದ ಮೂಲಕ ಎದುರಾಳಿಗೆ ತಿವಿಯುವ ತಂತ್ರ, ಡ್ಯಾನ್ಸ್ ಹೀಗೆ ಕೋಟ್ಯಾಂತರ ಜನರನ್ನು ರಂಜಿಸುತ್ತಿರುವ ಗಿಲ್ಲಿ ನಟನೇ ನೆಚ್ಚಿನ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಅವರ ಅಭಿಮಾನಿಗಳಿಂದ ಹಿಡಿದು, ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಗಳ ಬಾಯಲ್ಲಿಯೂ ಗಿಲ್ಲಿ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ.

ಗಿಲ್ಲಿ ನಟ ಗೆದ್ದು, ಬಿಗ್‌ಬಾಸ್ ಕನ್ನಡ ಸೀಸನ್ 12 ಕಪ್ ಎತ್ತಬೇಕು ಎಂಬುದು ಕೋಟಿ ಕೋಟಿ ಅಭಿಮಾನಿಗಳ ಅಪೇಕ್ಷೆಯೂ ಆಗಿದೆ. ಗಿಲ್ಲಿ ನಟ ಬಿಗ್‌ಬಾಸ್ ಗೆಲ್ಲಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version