Updated By: Priyalachhi 

ಬೆಂಗಳೂರು: ಮೆಜೆಸ್ಟಿಕ್‌ನಿಂದ ಮಲ್ಲೇಶ್ವರದ ಮಂತ್ರಿಮಾಲ್‌ವರೆಗಿನ ರಸ್ತೆಗೆ ವೈಟ್‌ ಟ್ಯಾಪಿಂಗ್‌ ನಡೆಯಲಿರುವ ಕಾರಣ ಮೂರು ತಿಂಗಳು ಬಂದ್‌ ಆಗಲಿದೆ. ಇದು ಮುಖ್ಯರಸ್ತೆಯಾಗಿರುವ ಕಾರಣ ತುಂಬಾ ಮಂದಿಗೆ ಓಡಾಟಕ್ಕೆ ಸಮಸ್ಯೆಯಾಗಲಿದೆ.

ಬಿ ಸ್ಮೈಲ್ ಕಡೆಯಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಂಡಿದ್ದು ಮುಂದಿನ ಮೂರು ತಿಂಗಳು ರಸ್ತೆ ಬಂದ್‌ ಆಗಲಿದೆ. ಬಂದ್‌ ಆಗಿರುವುದರಿಂದ ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ ಪಾಸ್ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶ ಮಾಡಬೇಕಿದೆ ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಸ್ತಿ ಆಗಲಿದೆ.

ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್‌ ಆಗಿರುವ ಕಾರಣ ಪೀಕ್‌ ಅವಧಿಯಲ್ಲಿ ಮಲ್ಲೇಶ್ವರಂಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಸಮಯ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version