ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಮೈಸೂರು: ಮೈಸೂರು ರೈಲ್ವೆ ವಿಭಾಗವು ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 449.13 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಅತೀ ಹೆಚ್ಚಿನ ಪ್ರಯಾಣಿಕ ಆದಾಯವನ್ನು ಗಳಿಸಿದ್ದು, ಹಿಂದಿನ 419.89 ಕೋಟಿ ರೂ. ದಾಖಲೆಯನ್ನು ಮೀರಿಸಿದೆ.

ಟಿಕೆಟ್ ಪರಿಶೀಲನೆ ಮೂಲಕ 9.75 ಕೋಟಿ ರೂ. ಆದಾಯವನ್ನು ಗಳಿಸಿದ್ದು, ಇದು ಹಿಂದಿನ ದಾಖಲೆ ಮತ್ತು ವಾರ್ಷಿಕ ಗುರಿಯನ್ನೂ ಮೀರಿದೆ. ಈ ಮೂಲಕ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ದಾಖಲೆಯ ಆದಾಯ ಮತ್ತು ವಾಣಿಜ್ಯ ವಹಿವಾಟು ವೃದ್ಧಿಯಾಗಿದೆ. 2025–26 ಹಣಕಾಸು ವರ್ಷದಲ್ಲಿ ಮೈಸೂರು ವಿಭಾಗವು ಅತ್ಯುತ್ತಮ ಸಾಧನೆಯನ್ನು ದಾಖಲಿಸಿದ್ದು, ಪ್ರಯಾಣಿಕ, ಸರಕು ಹಾಗೂ ನಾನ್-ಫೇರ್ ಆದಾಯ ವಿಭಾಗಗಳಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ.

ನಾನ್-ಫೇರ್ ಆದಾಯ ಕ್ಷೇತ್ರದಲ್ಲಿಯೂ ಗಣನೀಯ ಬೆಳವಣಿಗೆ ಕಂಡುಬಂದಿದ್ದು, ವಾಣಿಜ್ಯ ಜಾಹೀರಾತು (3.17 ಕೋಟಿ ರೂ.), ಪಾರ್ಕಿಂಗ್ (4.02 ಕೋಟಿ ರೂ.) ಮತ್ತು ಆಹಾರ ಪೂರೈಕೆ (2.61 ಕೋಟಿ ರೂ.) ವಿಭಾಗಗಳಲ್ಲಿ ದಾಖಲೆಯ ಆದಾಯ ಬಂದಿದೆ.

ಸರಕು ಸಾಗಣೆ ವಿಭಾಗದಲ್ಲಿ 900.19 ಕೋಟಿ ರೂ. ಆದಾಯವನ್ನು ದಾಖಲಿಸಿದ್ದು, ಇದು ಎರಡನೇ ಅತಿ ಹೆಚ್ಚು ಸಾಧನೆಯಾಗಿದೆ. 116 ರೈಲು ರೇಕುಗಳ ಮೂಲಕ ವಾಹನ ಸಾಗಣೆ ಮಾಡಲಾಗಿದ್ದು, 23.94 ಕೋಟಿ ರೂ. ಆದಾಯ ಬಂದಿದೆ. ಇದಲ್ಲದೆ, 8.665 ಮಿಲಿಯನ್ ಟನ್ ಐರನ್ ಓರ್(ಕಬ್ಬಿಣ ಅದಿರು) ಲೋಡಿಂಗ್ ಮೂಲಕ ಎರಡನೇ ಅತಿ ಹೆಚ್ಚು ಸಾಧನೆ ಮಾಡಲಾಗಿದೆ.

ಪಾರ್ಸೆಲ್ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಒಟ್ಟು 11.81 ಕೋಟಿ ರೂ. ಆದಾಯ ಗಳಿಸಲಾಗಿದೆ. SLR (ಸೀಟಿಂಗ್ ಕಮ್ ಲಗೇಜ್ ರೇಕ್) ಮತ್ತು VPH (ಹೈ ಕೆಪ್ಯಾಸಿಟಿ ಪಾರ್ಸೆಲ್ ವ್ಯಾನ್) ಲೀಸಿಂಗ್ ಮೂಲಕ 5.85 ಕೋಟಿ ರೂ. ಅತಿ ಹೆಚ್ಚು ಆದಾಯ ಗಳಿಸಲಾಗಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version