Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ರಾಜ್ಯದಲ್ಲಿ 1.88 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ; ಹಂತ-ಹಂತವಾಗಿ ಭರ್ತಿಗೆ ಕ್ರಮ: ಸಿದ್ದರಾಮಯ್ಯ
Politics

ರಾಜ್ಯದಲ್ಲಿ 1.88 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ; ಹಂತ-ಹಂತವಾಗಿ ಭರ್ತಿಗೆ ಕ್ರಮ: ಸಿದ್ದರಾಮಯ್ಯ

Sambrama Prabha NewsBy Sambrama Prabha NewsDecember 11, 2025No Comments2 Mins Read
Share WhatsApp Facebook Twitter Telegram
Share
WhatsApp Facebook Twitter Telegram

Updated By: Priyalachhi

ಬೆಳಗಾವಿ: ಆರ್ಥಿಕ ಇಲಾಖೆಯ ಅನುಮತಿ ಪಡೆದು ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಿಎಂ ಉತ್ತರಿಸಿದರು. ರಾಜ್ಯದಲ್ಲಿ ನಿಗಮ ಮಂಡಳಿಗಳು ಸೇರಿದಂತೆ ಸುಮಾರು 2,84,881 ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಶೀಘ್ರಗತಿಯಲ್ಲಿ ತುಂಬಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ನಿರಾಣಿ ಕೋರಿದ್ದರು.

ಸರ್ಕಾರದ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಖಾಲಿ ಇದ್ದ ಒಟ್ಟು 2,84,881 ಹುದ್ದೆಗಳ ಪೈಕಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಎರಡೂ ಸೇರಿ 96,844 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಇನ್ನುಳಿದ 1,88,037 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಅದರಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ 1,01,420 ಹುದ್ದೆಗಳು, ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳೂ ಸೇರಿವೆ. ಈಗಾಗಲೇ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ. ಹೈದರಾಬಾದ್(ಕಲ್ಯಾಣ) ಕರ್ನಾಟಕಕ್ಕೆ 371 ಜೆ ಅಡಿ 32,132 ಹುದ್ದೆಗಳು ಭರ್ತಿಯಾಗಬೇಕಿದೆ. ಒಟ್ಟು 56,432 ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

ಒಳಮೀಸಲಾತಿಯ ಬಿಕ್ಕಟ್ಟಿನಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವುಂಟಾಗಿತ್ತು. ಈಗ ಈ ಸಮಸ್ಯೆಗೆ ಬಗೆಹರಿದಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದು ಹಂತ-ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಇದಕ್ಕಾಗಿ ನಮ್ಮದೇ ಆದ ಸಮಯ ನಿಗದಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪರಿಷತ್‌ ವಿಪಕ್ಷ ನಾಯಕ ನಾರಾಯಣಸ್ವಾಮಿ ಅವರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯ ಹಣಮಂತ ನಿರಾಣಿ ಅವರು ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಯವರು ಉತ್ತರಿಸಿದ ನಂತರ, ಡಿಸಿಎಂ ಅವರು ಮಾತನಾಡಿ ಸ್ಪಷ್ಟನೆ ನೀಡಿದರು.

ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಒಳಮೀಸಲಾತಿ ವಿಚಾರ ಬಾಕಿ ಇರುವ ಕಾರಣಕ್ಕೆ ಒಂದಷ್ಟು ಭರ್ತಿ ಕೆಲಸ ಬಾಕಿಯಿದೆ ಎಂದರು.

ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಗೆ ಚಿಂತನೆ: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಿಎಂ ಉತ್ತರಿಸಿದರು. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಕ್ರೀಡಾ ಮೂಲಸೌಕರ್ಯ ವೃದ್ಧಿ ಹಾಗೂ ಕಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಬಗ್ಗೆ ಡಿಸೋಜಾ ಮಾಹಿತಿ ಕೋರಿದ್ದರು.

ರಾಜ್ಯ ಸರ್ಕಾರದಿಂದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಾಮನ್​ವೆಲ್ತ್, ಏಷ್ಯನ್​ ಗೇಮ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ 13 ಕ್ರೀಡಾಪಟುಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ 70 ಕಾನ್ಸ್​ಟೇಬಲ್​​ಗಳಿಗೆ ನೇರ ನೇಮಕಾತಿ ಹಾಗೂ 14 ಪಿಎಸ್​​ಐಗಳ ನೇಮಕಾತಿ ಆಗಿದೆ. ಅಲ್ಲದೇ, ಅರಣ್ಯ ಇಲಾಖೆಯಲ್ಲಿ ಶೇ.3, ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ವಿವರಿಸಿದರು.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
CM Siddaramaiah
Add as Preferred on Google Follow on Google News
Share. WhatsApp Facebook Twitter Telegram
Previous Articleಸುರಂಗ ಯೋಜನೆ ಎಫೆಕ್ಟ್: ಲಾಲ್‌ಬಾಗ್‌ನ 276 ಮರಗಳಿಗೆ ಕುತ್ತು
Next Article ‘ಕಾಣುವ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲೆನೇ ಒಂದು ದಿನ’: ಡಿಕೆಶಿ ಕಾಲೆಳೆದ ಸುನೀಲ್ ಕುಮಾರ್
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಪರಿಷತ್ ಕದನ: ಬಿಜೆಪಿ–ಜೆಡಿಎಸ್ ದೋಸ್ತಿಗೆ ಅಗ್ನಿಪರೀಕ್ಷೆ! ನಾಲ್ಕು ಕ್ಷೇತ್ರಗಳಲ್ಲಿ ‘ಮತ ವರ್ಗಾವಣೆ’ ಲೆಕ್ಕಾಚಾರವೇ ಅಸಲಿ ಗೇಮ್‌ಚೇಂಜರ್

October 6, 2026

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

September 23, 2026

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

September 21, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.