• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲು!

Sambrama Prabha News by Sambrama Prabha News
April 17, 2026
in Nation News, Politics
0
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲು!

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಮಸೂದೆಗಳ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ದರೆ, ಮಸೂದೆಗಳ ವಿರುದ್ಧವಾಗಿ 230 ಸದಸ್ಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ 528 ಸದಸ್ಯರು ಮತ ಚಲಾಯಿಸಿದ್ದರು. ಮಸೂದೆಗಳು ಅಂಗೀಕಾರಗೊಳ್ಳಲು 352 ಸದಸ್ಯರ ಬೆಂಬಲ ಬೇಕಿತ್ತು. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳು ಸೇರಿದಂತೆ ಸಂಸತ್ತಿನಲ್ಲಿ ಗುರುವಾರ ಪರಿಚಯಿಸಲಾದ 3 ಪ್ರಮುಖ ಮಸೂದೆಗಳ ಮೇಲೆ ಇಂದು ಲೋಕಸಭೆಯಲ್ಲಿ ಮತದಾನ ನಡೆಯಿತು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ವಿಧೇಯಕವನ್ನು ಇಂಡಿ ಕೂಟ ಸೋಲಿಸಿದೆ.
2026ರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ 489 ಮತಗಳಲ್ಲಿ 278 ಮತಗಳು ಮಸೂದೆಯ ಪರವಾಗಿ ಚಲಾವಣೆಯಾಗಿದ್ದರೆ 211 ಮತಗಳು ವಿರುದ್ಧವಾಗಿ ಚಲಾವಣೆಯಾದವು. ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ 2/3 ಮೆಜಾರಿಟಿ ಪಡೆಯುವಲ್ಲಿ ಎನ್.ಡಿ. ಸರ್ಕಾರ ವಿಫಲವಾಗಿದೆ. ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದರಿಂದ ಕಲಾಪವನ್ನು ನಾಳೆ ಮುಂದೂಡಲಾಗಿದೆ.
Tags: ಲೋಕಸಭೆ
Previous Post

ಯಾದಗಿರಿ: ಕಾರು-VRL ಬಸ್​​ ಮುಖಾಮುಖಿ ಡಿಕ್ಕಿ; 7 ಮಂದಿ ಸ್ಥಳದಲ್ಲೇ ಸಾವು

Next Post

ಕೆಲ ‘ಒತ್ತಡ’ಗಳಿಂದಾಗಿ Siddaramaiah ‘ಅಸಹಾಯಕ ಪರಿಸ್ಥಿತಿ’ಯಲ್ಲಿದ್ದಾರೆ: ಕಾಂಗ್ರೆಸ್ ಶಾಸಕ KN Rajanna ಹೊಸ ಬಾಂಬ್!

Next Post
ಕೆಲ ‘ಒತ್ತಡ’ಗಳಿಂದಾಗಿ Siddaramaiah ‘ಅಸಹಾಯಕ ಪರಿಸ್ಥಿತಿ’ಯಲ್ಲಿದ್ದಾರೆ: ಕಾಂಗ್ರೆಸ್ ಶಾಸಕ KN Rajanna ಹೊಸ ಬಾಂಬ್!

ಕೆಲ 'ಒತ್ತಡ'ಗಳಿಂದಾಗಿ Siddaramaiah 'ಅಸಹಾಯಕ ಪರಿಸ್ಥಿತಿ'ಯಲ್ಲಿದ್ದಾರೆ: ಕಾಂಗ್ರೆಸ್ ಶಾಸಕ KN Rajanna ಹೊಸ ಬಾಂಬ್!

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.