• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಸಚಿವರ ಶಿಫಾರಸಿನ ಮೇಲೆ ಶಾಸಕರ ಸಂಬಂಧಿಯ ವರ್ಗಾವಣೆ: ಆದೇಶ ರದ್ದುಪಡಿಸಿದ ಹೈಕೋರ್ಟ್

Sambrama Prabha News by Sambrama Prabha News
December 17, 2025
in Politics
0
ಸಚಿವರ ಶಿಫಾರಸಿನ ಮೇಲೆ ಶಾಸಕರ ಸಂಬಂಧಿಯ ವರ್ಗಾವಣೆ: ಆದೇಶ ರದ್ದುಪಡಿಸಿದ ಹೈಕೋರ್ಟ್

Updated By: Priyalachhi

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಹೋದರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಐಎಂಎಸ್) ಪ್ರಾಧ್ಯಾಪಕ ಡಾ.ಕೇಶವ ಅಬ್ಬಯ್ಯ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಸೂಚನೆ ಮೇರೆಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕಿಮ್ಸ್) ದಂತ ಚಿಕಿತ್ಸಾ ವಿಭಾಗಕ್ಕೆ ವರ್ಗಾವಣೆ ಮಾಡಿರುವ ಕ್ರಮಕ್ಕೆ ಹೈಕೋರ್ಟ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಪ್ರಕ್ರಿಯೆ ಸಂಪೂರ್ಣ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿ, ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ವರ್ಗಾವಣೆ ಪ್ರಶ್ನಿಸಿ ಕಿಮ್ಸ್​ ಪ್ರಾಧ್ಯಾಪಕ ಡಾ.ಸುನೀಲ್ ಜಿ.ಪಾಟೀಲ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿತು.

ಶಾಸನಬದ್ಧ ಮಾರ್ಗಸೂಚಿಗಳ ಉಲ್ಲಂಘನೆ: ಡಾ.ಕೇಶವ ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್​​ನಲ್ಲಿ ನಿಯೋಜಿಸುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ನಿಯೋಜಿಸುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಮತ್ತು ರಾಜಕೀಯ ಪ್ರಭಾವದಿಂದ ಅಳಿಸಲಾಗದಷ್ಟು ಕಳಂಕಿತವಾಗಿದೆ ಮತ್ತು ಕಾನೂನಿನಲ್ಲಿ ಅದನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಅರ್ಜಿದಾರರಿಗೆ ಕೆಲವು ತಿಂಗಳ ನಂತರ ಬಡ್ತಿ ಬಂದರೂ ಸಹ ಡಾ.ಅಬ್ಬಯ್ಯ ಅವರ ನೇಮಕಾತಿಯಲ್ಲಿನ ಅಕ್ರಮವನ್ನು ನಿವಾರಿಸುವುದಿಲ್ಲ ಅಥವಾ ಸರಿಪಡಿಸಲಾಗುವುದಿಲ್ಲ ಎಂದು ಸಹ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಶಾಸನಬದ್ಧವಾಗಿ ಬಡ್ತಿಗೆ ಅರ್ಹರಾಗಿದ್ದಾಗ, ಇಲಾಖೆಯಲ್ಲಿ ಲಭ್ಯವಿರುವ ಏಕೈಕ ಹುದ್ದೆಗೆ ಹೊರಗಿನವರನ್ನು ಆಮದು ಮಾಡಿಕೊಳ್ಳುವುದರಿಂದ ಅರ್ಜಿದಾರರ ಸೇವಾ ಹಿರಿತನ, ಶಾಸನಬದ್ಧ ಹಕ್ಕು ಮತ್ತು ಮೂಲಭೂತ ಹಕ್ಕು, ಬಡ್ತಿಯ ಕಾನೂನುಬದ್ಧ ಪರಿಗಣನೆ ಎರಡನ್ನೂ ಪರಿಣಾಮಕಾರಿಯಾಗಿ ಕಸಿದುಕೊಂಡಂತಾಗುತ್ತದೆ ಎಂದು ಪೀಠ ಹೇಳಿದೆ.

ಅರ್ಜಿದಾರರು ಈಗಾಗಲೇ ದಂತ ವೈದ್ಯ ವಿಭಾಗದಲ್ಲಿ ಹೊಸ ಪ್ರೊಫೆಸರ್ ಹುದ್ದೆ ಸೃಷ್ಟಿಸುವ ವೇಳೆಗೆ ಸೇವಾ ಅರ್ಹತೆಯನ್ನು ಗಳಿಸಿದ್ದಾರೆ. ಅವರು ಬಡ್ತಿಗೆ ಸಂಪೂರ್ಣ ಅರ್ಹರಾಗಿದ್ದಾರೆ. ಆದರೆ ಡಾ.ಕೇಶವ ಅವರು ಹಾಲಿ ಶಾಸಕರ ಸಂಬಂಧಿಯಾಗಿದ್ದು, ತಮ್ಮ ಪ್ರಭಾವ ಬಳಸಿ ಕಿಮ್ಸ್​ನಲ್ಲಿ ಹುದ್ದೆಗೆ ಪ್ರಯತ್ನಿಸಿದ್ದು, ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಡಾ.ಕೇಶವ ಅವರ ಸಹೋದರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿಯೇ ಕಿಮ್ಸ್ ಆಸ್ಪತ್ರೆ ಬರುತ್ತದೆ ಎಂಬ ಅಂಶವನ್ನೂ ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. 2025ರ ಮಾರ್ಚ್ 5ರಂದು ಕಿಮ್ಸ್ ಹೊರಡಿಸಿದ ವರ್ಗಾವಣೆ ಆದೇಶ ಮತ್ತು 2025ರ ಜನವರಿ 21ರಂದು ಹೊರಡಿಸಿದ ತಾತ್ಕಾಲಿಕ ಹಿರಿತನದ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

Tags: ಶಿಫಾರಸಿ
Previous Post

ವಿಧಾನಸಭೆಯಲ್ಲಿ ‘ಗೃಹ ಲಕ್ಷ್ಮಿ’ ಕೋಲಾಹಲ

Next Post

ಕೃಷ್ಣ ಬೈರೇಗೌಡ ಮೇಲೆ ಬಿಜೆಪಿಯಿಂದ ಸ್ಮಶಾನ ಜಮೀನು ಕಬಳಿಕೆ ಆರೋಪ; ತನಿಖೆಗೆ ಸಿದ್ಧ ಎಂದ ಸಚಿವರು

Next Post
ಕೃಷ್ಣ ಬೈರೇಗೌಡ ಮೇಲೆ ಬಿಜೆಪಿಯಿಂದ ಸ್ಮಶಾನ ಜಮೀನು ಕಬಳಿಕೆ ಆರೋಪ; ತನಿಖೆಗೆ ಸಿದ್ಧ ಎಂದ ಸಚಿವರು

ಕೃಷ್ಣ ಬೈರೇಗೌಡ ಮೇಲೆ ಬಿಜೆಪಿಯಿಂದ ಸ್ಮಶಾನ ಜಮೀನು ಕಬಳಿಕೆ ಆರೋಪ; ತನಿಖೆಗೆ ಸಿದ್ಧ ಎಂದ ಸಚಿವರು

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.