BREAKING NEWS
‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •   ಡಿಕೆ ಶಿವಕುಮಾರ್‌ಗೆ ಒಲಿದ ಸಿಎಂ ಪಟ್ಟ: ಮತ್ತೆ ಮುನ್ನೆಲೆಗೆ ಬಂತು ಕುಮಾರಕೃಪಾ ರಸ್ತೆಯ ‘ಅದೃಷ್ಟದ ಮನೆ’ಯ ರೋಚಕ ಕಥೆ!   •   ಬೆಂಗಳೂರು: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಜಾಜಿನಗರ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ   •   40,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ   •   ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ   •   ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!   •  

—Advertisement—

ಸೋಮವಾರದ ಪಂಚಾಂಗ, ಭವಿಷ್ಯ

Author Picture
Published On: December 22, 2025

—Advertisement—

Updated By: Priyalachhi

ಪಂಚಾಂಗ:

ದಿನಾಂಕ : 22-12-2025

ವಾರ : ಸೋಮವಾರ

ಸಂವತ್ಸರ : ವಿಶ್ವವಸು

ಆಯನ : ದಕ್ಷಿಣಾಯಣ

ಮಾಸ : ಮಾರ್ಗಶಿರ

ಪಕ್ಷ : ಶುಕ್ಲ

ತಿಥಿ : ದ್ವಿತೀಯ

ನಕ್ಷತ್ರ : ಉತ್ತರಾಷಾಢ

ಸೂರ್ಯೋದಯ : ಮುಂಜಾನೆ 06:36 ಗಂಟೆಗೆ

ಅಮೃತ ಕಾಲ : ಬೆಳಗ್ಗೆ 08:01 ರಿಂದ 09:26 ರವರೆಗೆ

ದುರ್ಮುಹೂರ್ತ : ಮಧ್ಯಾಹ್ನ 01:00 ರಿಂದ 01:48 ಹಾಗೂ 03:24 ರಿಂದ 04:12 ಗಂಟೆವರೆಗೆ

ರಾಹುಕಾಲ : ಮಧ್ಯಾಹ್ನ 01:41 ರಿಂದ 03:06 ರವರೆಗೆ

ಸೂರ್ಯಾಸ್ತ : ಸಂಜೆ 05:56 ಗಂಟೆಗೆ

ರಾಶಿ ಭವಿಷ್ಯ:

ಮೇಷ: ಇದು ಕೆಲಸ ಮಾಡುವ ಸಮಯವೇ ಹೊರತು, ಯೋಜಿಸುವುದಲ್ಲ. ಕೆಲವೊಮ್ಮೆ ನಿಮ್ಮ ವಿಶೇಷ ಹುರುಪನ್ನು ಒಳ್ಳೆಯ ಬಳಕೆಗೆ ಇಟ್ಟುಕೊಳ್ಳುವುದು ಸೂಕ್ತ.

ವೃಷಭ: ಇಡೀ ದಿನ ನಿಮ್ಮ ಮನಸ್ಥಿತಿಯನ್ನು ಶಕ್ತಿ, ಸಮೃದ್ಧಿ ಮತ್ತು ಉತ್ಸಾಹ ಆಳುತ್ತವೆ. ಕೆಲವರಿಗೆ ಬೇಸರವೆನಿಸಿದರೆ, ಕೆಲಸದಿಂದ ಕೊಂಚ ಬಿಡುವು ಪಡೆಯಿರಿ.

ಮಿಥುನ: ನಿಮ್ಮ ಪ್ರೀತಿಯ ಜೀವನ ಕೆಲವು ಏರಿಳಿತ ಕಾಣುವ ಸಾಧ್ಯತೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಪರೀಕ್ಷೆ ಎದುರಿಸುತ್ತೀರಿ. ಬುದ್ಧಿ ಕಳೆದುಕೊಳ್ಳಬೇಡಿ, ವಿಶ್ವಾಸವಿಡಿ.

ಕರ್ಕಾಟಕ: ದುಡುಕಿನ ಪ್ರವೃತ್ತಿ ನಿಮ್ಮ ಕ್ರಿಯೆಗಳನ್ನು ಆಕ್ರಮಿಸುತ್ತದೆ. ಸಕಾರಾತ್ಮಕ ವಿಷಯಗಳಿಗೆ ಗಮನ ನೀಡಿ. ನಿಮ್ಮ ಆಲೋಚನೆಗಿಂತ ಕ್ರಿಯೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಸಿಂಹ: ನಿಮ್ಮೆಲ್ಲ ಜವಾಬ್ದಾರಿಗಳಿಗೂ ನ್ಯಾಯ ಸಲ್ಲಿಸಬೇಕು. ನಿಮ್ಮ ಬಹುಕಾಲದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಎಲ್ಲ ಪವಿತ್ರ ಕಾರ್ಯಗಳು ಹಾಗೂ ಹೊಸ ಯೋಜನೆಗಳನ್ನು ಸಂಜೆ ಪ್ರಾರಂಭಿಸಿ.

ಕನ್ಯಾ: ಪ್ರಭಾವಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ. ಸಂಜೆಯನ್ನು ವಿಂಡೋ-ಶಾಪಿಂಗ್​​ನಲ್ಲಿ ಮಿತ್ರರು ಅಥವಾ ಕುಟುಂಬ ಸದಸ್ಯರಿಗೆ ಉಡುಗೊರೆ ಕೊಳ್ಳಲು ಕಳೆಯಬಹುದು.

ತುಲಾ: ಸಂಪೂರ್ಣ ಕುಟುಂಬದ ದಿನ. ಹತ್ತಿರ, ದೂರದ ಬಂಧುಗಳು ನಿಮ್ಮ ಮನ ಗೆಲ್ಲುತ್ತಾರೆ. ಒಂದು ಒಳ್ಳೆಯ ಸುದ್ದಿ ನಿಮಗೆ ಕಾದಿದೆ.

ವೃಶ್ಚಿಕ: ಪ್ರತಿಭೆಯ ಮೂಲಕ ಜಟಿಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವಿರಿ. ಬಾಕಿ ಇರುವ ಸಮಸ್ಯೆಗಳಿಗೆ ದೀರ್ಘಾವಧಿ ಉತ್ತರಗಳನ್ನು ಕಂಡುಕೊಳ್ಳಬಹುದು.

ಧನು: ಅತ್ಯಂತ ಕಠಿಣ ಸ್ಪರ್ಧೆಯಲ್ಲಿ ಗೆಲುವು ನಿಮ್ಮದೇ. ಹಾಗಾಗಿ, ಆನಂದದ ದಿನ. ಸಂಜೆಯನ್ನು ಸಾಮಾಜಿಕ ಸಭೆಯಲ್ಲಿ ಪ್ರೀತಿಪಾತ್ರರೊಂದಿಗೆ ಕಳೆಯುವಿರಿ.

ಮಕರ: ಹೊಸ ಉತ್ಪನ್ನ ಬಿಡುಗಡೆ ಮಾಡಲು ಬಯಸಿದ್ದರೆ ಕೊಂಚ ಮುಂದೂಡಿ. ಬಿಡುಗಡೆ ತಡ ಮಾಡುವುದು ನಿಮಗೇ ಅನುಕೂಲಕರ. ಏಕೆಂದರೆ, ಪ್ರತಿಕ್ರಿಯೆ ನೀವಂದುಕೊಂಡಷ್ಟು ಚೆನ್ನಾಗಿಲ್ಲದೇ ಇರಬಹುದು.

ಕುಂಭ: ಲೋಕಜ್ಞಾನವನ್ನು ಪಡೆದುಕೊಳ್ಳುವಿರಿ. ಕೆಲವೊಮ್ಮೆ ಉತ್ತಮ ಪುಸ್ತಕಗಳ ಸಂಗ್ರಹಣೆಯಲ್ಲಿ ತೊಡಗುವಿರಿ. ಇದರಿಂದ ನಿಮ್ಮ ಸಂತಸ ಹೆಚ್ಚುವುದು.

ಮೀನ: ಅತ್ಯಂತ ಪ್ರಮುಖ ನಿರ್ಧಾರಗಳನ್ನು ಒಂದು ಅಥವಾ ಮೂರು ದಿನ ಮುಂದೂಡುವುದು ಮುಖ್ಯ. ರಿಸ್ಕ್‌ಗಳನ್ನು ತೆಗೆದುಕೊಳ್ಳಬೇಡಿ, ಅವು ನಿಮ್ಮ ನಿರೀಕ್ಷೆಯ ಫಲ ನೀಡುವುದಿಲ್ಲ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp