• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಹೈಟೆಕ್ 2 ನ್ಯಾನೋಮೀಟರ್ ಚಿಪ್ ಅನಾವರಣಗೊಳಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Sambrama Prabha News by Sambrama Prabha News
February 7, 2026
in Nation News
0
ಹೈಟೆಕ್ 2 ನ್ಯಾನೋಮೀಟರ್ ಚಿಪ್ ಅನಾವರಣಗೊಳಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ನಗರದ ಕ್ವಾಲ್ ಕ್ಯಾಮ್ ಕಂಪನಿ ತಯಾರಿಸಿದ ಅತ್ಯಾಧುನಿಕ 2- ನ್ಯಾನೋ ಮೀಟರ್ ಚಿಪ್ ಅನ್ನು ಕೇಂದ್ರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ನಗರದಲ್ಲಿ ಅನಾವರಣಗೊಳಿಸಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್​ನ ಪಾತ್ರ ಗಣನೀಯವಾಗಿದ್ದು, ಈ ದಿಸೆಯಲ್ಲಿ ಕಂಪನಿ ತಯಾರಿಸಿದ ಸುಧಾರಿತ ಚಿಪ್ ಇದಾಗಿದೆ. ಇದು ಸಿಪಿಯು ಹಾಗೂ ಜಿಪಿಯು ಸಂಯೋಜಿತವಾಗಿದ್ದು, 20 ರಿಂದ 30 ಬಿಲಿಯನ್ ಟ್ರ್ಯಾನಿಸ್ಟರ್​ಗಳನ್ನು ಹೊಂದಿದೆ. ಕಂಪ್ಯೂಟರ್, ಕ್ಯಾಮರಾ, ವೈಫೈ ರೂಟರ್, ವಿಮಾನ ಹಾಗೂ ಕಾರುಗಳಲ್ಲಿ ಇದನ್ನು ಬಳಸಬಹುದಾಗಿದೆ‌. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರದ ಮೇರೆಗೆ ಇದು ಕಾರ್ಯನಿರ್ವಹಿಸಲಿದೆ.

UNION MINISTER ASHWINI VAISHNAW  SEMICON ROADMAP  ಹೈಟೆಕ್ 2 ನ್ಯಾನೋಮೀಟರ್ ಚಿಪ್  BENGALURU NANOMETRE QUALCOMM CHIP

ಅತ್ಯಾಧುನಿಕ ಚಿಪ್ ಅನಾವರಣಗೊಳಿಸಿ ಮಾತನಾಡಿದ ಸಚಿವರು, ಸುಧಾರಿತ ಸೆಮಿಕಂಡಕ್ಟರ್ ತಂತ್ರಜ್ಞಾನದ ವಿನ್ಯಾಸದಲ್ಲಿ ಭಾರತವು ಈಗ ಜಾಗತಿಕ ಕೇಂದ್ರವಾಗುತ್ತಿದೆ. ಕ್ವಾಲ್​ ಕ್ಯಾಮ್‌ನ ಈ ಮೈಲಿಗಲ್ಲು ಭಾರತದ ವಿನ್ಯಾಸ ಪರಿಸರ ವ್ಯವಸ್ಥೆಯು ಎಷ್ಟು ಬೆಳೆದಿದೆ ಎಂಬುದಕ್ಕೆ ಸಾಕ್ಷಿ ಎಂದರು.

2nm ಚಿಪ್‌ಗಳು ಮುಂದಿನ ಪೀಳಿಗೆಯ ವೈರ್‌ಲೆಸ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿವೆ. ಭಾರತವು ಕೇವಲ ಚಿಪ್‌ಗಳನ್ನು ಬಳಸುವ ದೇಶವಾಗಿರದೆ, ಅವುಗಳನ್ನು ವಿನ್ಯಾಸಗೊಳಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಈ ಬೆಳವಣಿಗೆ ಸೂಚಿಸುತ್ತಿದೆ ಎಂದು ತಿಳಿಸಿದರು.

Tags: ಸಚಿವ ಅಶ್ವಿನಿ ವೈಷ್ಣವ್
Previous Post

ಡಿಕೆಶಿ ಹೇಳಿದ್ರೆ ಪ್ರಾಣ ಕೊಡುವುದಕ್ಕೂ ಸಿದ್ಧ: ಶಾಸಕ ಶಿವಗಂಗಾ ಬಸವರಾಜ್

Next Post

ಆನ್​ಲೈನ್ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆ

Next Post
ಆನ್​ಲೈನ್ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆ

ಆನ್​ಲೈನ್ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.