BREAKING NEWS
ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •   ‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •  

—Advertisement—

,

ಹೊಸ ವರ್ಷಾಚರಣೆ; ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನತ್ತ ತೆರಳುವವರಿಗೆ ಮಾರ್ಗಸೂಚಿಗಳೇನು?

Author Picture
Published On: December 31, 2025

—Advertisement—

Updated By: Priyalachhi 

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ತಪಾಸಣೆ ನಡೆಸಿ ಅಗತ್ಯ ಸೂಚನೆಗಳನ್ನ ನೀಡಲಾಗಿದೆ.

ಪ್ರವೇಶ:

ಎಂ.ಜಿ ರಸ್ತೆ: ಎಲ್ಐಸಿ ಕಟ್ಟಡದ ಬಳಿ, ಅನಿಲ್ ಕುಂಬ್ಳೆ ವೃತ್ತ

​ಚರ್ಚ್ ಸ್ಟ್ರೀಟ್ : ಕೆ.ಸಿ. ದಾಸ್ ಬಳಿ

ಬ್ರಿಗೇಡ್ ರಸ್ತೆ: ಕಾವೇರಿ ಜಂಕ್ಷನ್‌ನಲ್ಲಿ ಪ್ರವೇಶ (ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ಜಂಕ್ಷನ್‌ನಿಂದ ಮಾತ್ರ ಪ್ರವೇಶಿಸಬಹುದು)

ಮೇಯೊ ಹಾಲ್ ಜಂಕ್ಷನ್ : ಎಂ.ಜಿ ರಸ್ತೆ ಕಡೆಗೆ ಕಾವೇರಿ ಜಂಕ್ಷನ್‌ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾಮರಾಜ್ ರಸ್ತೆ : ಕಾವೇರಿ ಎಂಪೋರಿಯಂ ಕಡೆಗೆ ಸಂಪೂರ್ಣವಾಗಿ ಪ್ರವೇಶ ನಿರ್ಬಂಧ.

ನಿರ್ಗಮನ ಮಾರ್ಗಗಳು: ಒಪೇರಾ ಜಂಕ್ಷನ್ – ರೆಸಿಡೆನ್ಸಿ ರಸ್ತೆ – ಮೆಯೋ ಹಾಲ್ – ಟ್ರಿನಿಟಿ ಮೆಟ್ರೋ ಅಥವಾ ಟ್ಯಾಕ್ಸಿ ಪಾಯಿಂಟ್‌ಗಳ ಮೂಲಕ ನಿರ್ಗಮನ

ಪಾದಚಾರಿಗಳಿಗೆ ಮಾತ್ರ ವಲಯಗಳು: (​ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ 1ರ ಮಧ್ಯರಾತ್ರಿ 1:00 ರವರೆಗೆ)
​ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಮೇಯೊ ಹಾಲ್‌ಗೆ) ​ಬ್ರಿಗೇಡ್ ರಸ್ತೆ,​ ಚರ್ಚ್ ಸ್ಟ್ರೀಟ್, ​ಮ್ಯೂಸಿಯಂ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ನಿರ್ಗಮಿಸಿದ ನಂತರ ಬ್ರಿಗೇಡ್ ರಸ್ತೆಗೆ ಮರುಪ್ರವೇಶಿಸಲು ಅನುಮತಿ ಇರುವುದಿಲ್ಲ.

ಸಾರಿಗೆ ಮತ್ತು ಪಾರ್ಕಿಂಗ್:

ಸಾರ್ವಜನಿಕ ಸಾರಿಗೆ ಮತ್ತು ​ಕ್ಯಾಬ್‌ಗಳು /ಟ್ಯಾಕ್ಸಿಗಳು: ಕಬ್ಬನ್ ರಸ್ತೆ, ಟ್ರಿನಿಟಿ ಮೆಟ್ರೋ, ಬಿಆರ್‌ವಿ ಜಂಕ್ಷನ್, ಕ್ವೀನ್ಸ್ ರಸ್ತೆ (ಸಿಟಿಒ ಜಂಕ್ಷನ್) ಮತ್ತು ರಾಜಭವನ ರಸ್ತೆಯಲ್ಲಿ ಗೊತ್ತುಪಡಿಸಿದ ಪಾಯಿಂಟ್‌ಗಳಲ್ಲಿ ಪಿಕ್-ಅಪ್/ಡ್ರಾಪ್ ಮಾಡಬಹುದು.

ಮೆಟ್ರೋ ಸೇವೆಗಳು: ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣವು ರಾತ್ರಿ 10 ಗಂಟೆಗೆ ಮುಚ್ಚುತ್ತದೆ. ಕಬ್ಬನ್ ಪಾರ್ಕ್ ಅಥವಾ ಟ್ರಿನಿಟಿ ಮೆಟ್ರೋ ನಿಲ್ದಾಣಗಳನ್ನು ಬಳಸಿ. ಮಧ್ಯರಾತ್ರಿಯ ನಂತರ ಪ್ರತಿ 8 ನಿಮಿಷಗಳಿಗೊಮ್ಮೆ ರೈಲು ಆವರ್ತನವನ್ನು ಹೆಚ್ಚಿಸಲಾಗುತ್ತದೆ.

ಬಿಎಂಟಿಸಿ ವಿಶೇಷ ಸೇವೆಗಳು: ಕೇಂದ್ರ ವಾಣಿಜ್ಯ ವಲಯದ ಐದು ಸ್ಥಳಗಳಿಂದ ಮಧ್ಯರಾತ್ರಿಯ ನಂತರ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ನಿಗದಿತ ಪಾರ್ಕಿಂಗ್ ಸೌಲಭ್ಯಗಳು:

  • ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್
  • ಯುಬಿ ಸಿಟಿ (1 ನೇ ಮಹಡಿ).
  • ಗರುಡ ಮಾಲ್
  • ಕಾಮರಾಜ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್)

ಪಾರ್ಕಿಂಗ್ ನಿಷೇಧಿತ ವಲಯಗಳು: (ಡಿಸೆಂಬರ್ 31ರ ಸಂಜೆ 4ರಿಂದ ಜನವರಿ 1ರ ನಸುಕಿನಜಾವ 3 ರವರೆಗೆ)
ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆ, ಮ್ಯೂಸಿಯಂ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ ಟೋಯಿಂಗ್ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸ್ಥಳದಲ್ಲಿ 400ಕ್ಕೂ ಹೆಚ್ಚು ಕ್ಯಾಮರಾಗಳು (ಮುಖಚಹರೆ ಗುರುತಿಸುವಿಕೆ ಕ್ಯಾಮರಾಗಳು ಸೇರಿದಂತೆ) ಮತ್ತು 3 ಸಾವಿರಕ್ಕೂ ಅಧಿಕ ಖಾಸಗಿ ಸಿಸಿಟಿವಿ ಫೀಡ್‌ಗಳನ್ನು ಕಮಾಂಡ್ ಸೆಂಟರ್‌ನೊಂದಿಗೆ ಸಂಯೋಜಿಸಲಾಗಿದೆ. ಅಲ್ಲಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದ್ದು, ಸ್ಕ್ಯಾನ್ ಮಾಡುವ ಮೂಲಕ ಸಾರ್ವಜನಿಕರು ಬೆಂಗಳೂರು ನಗರ ಪೊಲೀಸ್ ಇಲಾಖೆಯ ವೆಬ್‌ಸೈಟ್ ಪ್ರವೇಶಿಸಿ ಸಲಹೆ-ಸೂಚನೆಗಳು, ನಿಬಂಧನೆಗಳನ್ನು ಪರಿಶೀಲಿಸಬಹುದು ಎಂದು ಪಶ್ಚಿಮ ವಲಯದ ಆಯುಕ್ತ ಸಿ.ವಂಶಿಕೃಷ್ಣ ತಿಳಿಸಿದ್ದಾರೆ.

ರಸ್ತೆಗಳು/ವಾಹನಗಳಲ್ಲಿ ಹೈ-ಡೆಸಿಬಲ್ ಸಂಗೀತ ಅಥವಾ ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದೆ. ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬರುವ ಸಾರ್ವಜನಿಕರು ಮಧ್ಯರಾತ್ರಿಯ ನಂತರ ಈ ಸ್ಥಳಗಳಲ್ಲಿ ಉಳಿಯದಂತೆ ಸೂಚಿಸಲಾಗಿದೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp