• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

2030ರ ವೇಳೆಗೆ 2 ಮಿಲಿಯನ್‌ ಉದ್ಯೋಗ ಸೃಷ್ಟಿ: ಸಂಸದ ಯದುವೀರ್ ಬಣ್ಣನೆ

Sambrama Prabha News by Sambrama Prabha News
February 2, 2026
in Politics
0
2030ರ ವೇಳೆಗೆ 2 ಮಿಲಿಯನ್‌ ಉದ್ಯೋಗ ಸೃಷ್ಟಿ: ಸಂಸದ ಯದುವೀರ್ ಬಣ್ಣನೆ

Updated By: Priyalachhi

ಮೈಸೂರು: ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.
2026-27ನೇ ಸಾಲಿನ ಕೇಂದ್ರ ಆಯವ್ಯಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸದ ಯದುವೀರ್‌ ಒಡೆಯರ್‌, ಇದು ಅಭಿವೃದ್ಧಿ ಹಾಗೂ ಜನಪರ ಬಜೆಟ್‌ ಆಗಿದೆ ಎಂದು ಬಣ್ಣಿಸಿದ್ದಾರೆ.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನೇತೃತ್ವದಲ್ಲಿ ಮೈಸೂರಿನಲ್ಲಿ ಮುಂಬರುವ COSMOS ತಾರಾಲಯ ಮತ್ತು ಖಗೋಳಶಾಸ್ತ್ರ ತರಬೇತಿ ಕೇಂದ್ರದಂತಹ ಯೋಜನೆಗಳು ಸಾಕಷ್ಟು ನೆರವಾಗಲಿವೆ. COSMOS, ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಕೇಂದ್ರವಾಗಿ ಬೆಳೆಯಲು ಇದು ನೆರವಾಗಲಿದೆ. ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲು ಮತ್ತು ವಿಕಸಿತ ಭಾರತ 2047ರ ಹಾದಿಯಲ್ಲಿ ದೇಶದ ವೈಜ್ಞಾನಿಕ ಸಾಮರ್ಥ್ಯ ಬಲಪಡಿಸಲು ಸಹಾಯ ಮಾಡುತ್ತದೆ. ಇದು ಬಜೆಟ್‌ನಲ್ಲಿ ಮಹತ್ವದ ಅಂಶವಾಗಿದೆ ಎಂದರು.

ಹಣಕಾಸಿನ ಶಿಸ್ತು, ಆರ್ಥಿಕ ಸಮತೋಲನ ಮೂಲಸೌಕರ್ಯದಲ್ಲಿ ದಾಖಲೆಯ ಸಾರ್ವಜನಿಕ ಹೂಡಿಕೆ, ಅರೆವಾಹಕಗಳು, ಬಯೋಫಾರ್ಮಾ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆ ವೇಗಗೊಳಿಸಲು 2ನೇ ಹಾಗೂ 3ನೇ ಸ್ತರದ ನಗರಗಳಿಗೂ ಯೋಜನೆಗಳನ್ನು ವಿಸ್ತರಿಸಲಾಗುತ್ತಿರುವುದು ಗಮನಾರ್ಹ ಎಂದು ಸಂಸದರು ತಿಳಿಸಿದರು.

ಶಿಕ್ಷಣದಿಂದ ಉದ್ಯೋಗಕ್ಕೆ ಮಾರ್ಗಗಳು, AVGC ಮತ್ತು ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ ಕೌಶಲ್ಯ, ಪ್ರಾದೇಶಿಕ ಬೆಳವಣಿಗೆಯ ಕೇಂದ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಣೆ ಹಾಕಿದೆ ಎಂದು ವಿವರಿಸಿದರು. ಎಂಎಸ್‌ಎಂಇಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಸಾಲ, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಸಂಪರ್ಕಗಳು ಮತ್ತು ಸುಲಭ ವ್ಯವಹಾರ ಯೋಜನೆಗಳಿಗೆ ಸಾಕಷ್ಟು ಅನುದಾನ ಒದಗಿಸಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ ಎಂದು ತಿಳಿಸಿದರು.

Tags: ಸಂಸದ ಯದುವೀರ್ ಬಣ್ಣನೆ
Previous Post

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ

Next Post

ಮಕ್ಕಳು ವಂಚಿತಾರಗಬಾರದೆಂದು ಜಮೀನು ದಾನ ಮಾಡಿದ ಸಚಿವರ ತಾಯಿ

Next Post
ಮಕ್ಕಳು ವಂಚಿತಾರಗಬಾರದೆಂದು ಜಮೀನು ದಾನ ಮಾಡಿದ ಸಚಿವರ ತಾಯಿ

ಮಕ್ಕಳು ವಂಚಿತಾರಗಬಾರದೆಂದು ಜಮೀನು ದಾನ ಮಾಡಿದ ಸಚಿವರ ತಾಯಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.