• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಶಿವಣ್ಣ, ಉಪ್ಪಿ, ರಾಜ್ ಶೆಟ್ರ ’45’: ನಾಳೆ 180+ ಚಿತ್ರಮಂದಿರಗಳಲ್ಲಿ ರಿಲೀಸ್​

Sambrama Prabha News by Sambrama Prabha News
December 24, 2025
in Latest News
0
ಶಿವಣ್ಣ, ಉಪ್ಪಿ, ರಾಜ್ ಶೆಟ್ರ ’45’: ನಾಳೆ 180+ ಚಿತ್ರಮಂದಿರಗಳಲ್ಲಿ ರಿಲೀಸ್​

Updated By: Priyalachhi

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರತಿಭಾನ್ವಿತ ತಾರೆ ರಾಜ್ ಬಿ ಶೆಟ್ಟಿ ಅಭಿನಯದ ಈ ವರ್ಷದ ಬಹುನಿರೀಕ್ಷೆಯ ಸಿನಿಮಾ ’45’ ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ. ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

ಟ್ರೇಲರ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್ ಆಗುತ್ತಿದ್ದ 45 ಸಿನಿಮಾ ನಾಳೆ 180ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಏಕೆ ಈ ಸಿನಿಮಾವನ್ನು ನೋಡಬೇಕು? ಎಂಬ ಪ್ರಶ್ನೆಗಳಿಗೆ ಇಲ್ಲಿ ಕೆಲ ವಿಶೇಷತೆಗಳಿವೆ.

ವಿಭಿನ್ನ ಶೀರ್ಷಿಕೆ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಚೊಚ್ಚಲ ಸಿನಿಮಾಗೆ ಏಕೆ 45 ನಂಬರ್​​​ ಅನ್ನು ಶೀರ್ಷಿಕೆಯಾಗಿ ಇಟ್ಟಿದ್ದಾರೆ ಅನ್ನೋದಕ್ಕೆ ಈ ಸಿನಿಮಾ ನೋಡಬೇಕು. ಈ ಹಿಂದೆ ಹೇಳಿದಂತೆ ಇದು 45 ದಿನಗಳಲ್ಲಿ ನಡೆಯುವ ಕಥೆ.

Shivarajkumar

ಮೂವರು ಸೂಪರ್​ ಸ್ಟಾರ್ಸ್​ ಸ್ಕ್ರೀನ್​ ಶೇರ್: ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ಬುದ್ಧಿವಂತ ನಟ-ನಿರ್ದೇಶಕ ಎಂದೇ ಜನಪ್ರಿಯರಾದ ರಿಯಲ್​ ಸ್ಟಾರ್​ ಉಪೇಂದ್ರ, ಜೊತೆಗೆ ತಮ್ಮ ಕಂಟೆಂಟ್​ ಸಿನಿಮಾಗಳ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿರುವ ರಾಜ್ ಬಿ ಶೆಟ್ಟಿ ಒಂದೇ ಸಿನಿಮಾದಲ್ಲಿ ನಟಿಸಿರೋದೇ 45ನ ಪ್ರಮುಖ ಹೈಲೆಟ್​. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಚೊಚ್ಚಲ ಚಿತ್ರದಲ್ಲೇ ಈ ಮೂವರಿಗೆ ಆ್ಯಕ್ಷನ್​ ಕಟ್ ಹೇಳಿರುವ ಹಿನ್ನೆಲೆ, ಸಿನಿಮಾ ಸುತ್ತಲಿನ ಕುತೂಹಲ ದುಪ್ಪಟ್ಟಾಗಿದೆ. ಈ ಮೊದಲು ಶಿವಣ್ಣ, ಉಪ್ಪಿ ಒಟ್ಟಿಗೆ ಕೆಲಸ ಮಾಡಿದ್ದರೂ, ರಾಜ್​​ ಬಿ ಶೆಟ್ಟಿ ಜೊತೆಗೆ ಮೊದಲ ಸಿನಿಮಾ. ಹಾಗಾಗಿ, ಈ ಮೂವರ ಕಾಂಬಿನೇಶನ್ ಮತ್ತು ಅರ್ಜುನ್​ ಜನ್ಯ ಅವರ ಕ್ರಿಯೇಟಿವಿ ಕಣ್ತುಂಬಿಕೊಳ್ಳಲು ಫ್ಯಾನ್ಸ್​​ ಕಾತರರಾಗಿದ್ದಾರೆ.

Tags: ಉಪ್ಪಿರಾಜ್ ಶೆಟ್ರಶಿವಣ್ಣ
Previous Post

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ; ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ

Next Post

ನಾವು ನೋಡುತ್ತಿರುವ ಅತೀ ದೊಡ್ಡ ಬದಲಾವಣೆ ಎಐ: AI ಇನ್ನೋವೇಶನ್ ಹಬ್ ಸಿಇಒ

Next Post
ನಾವು ನೋಡುತ್ತಿರುವ ಅತೀ ದೊಡ್ಡ ಬದಲಾವಣೆ ಎಐ: AI ಇನ್ನೋವೇಶನ್ ಹಬ್ ಸಿಇಒ

ನಾವು ನೋಡುತ್ತಿರುವ ಅತೀ ದೊಡ್ಡ ಬದಲಾವಣೆ ಎಐ: AI ಇನ್ನೋವೇಶನ್ ಹಬ್ ಸಿಇಒ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.