Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಪ್ರಕಾಶ್​ ರಾಜ್, ಪೌರ ಕಾರ್ಮಿಕೆ ಫಕ್ಕೀರಿ​ ಸೇರಿ 70 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವ
Special News Home Nation News

ಪ್ರಕಾಶ್​ ರಾಜ್, ಪೌರ ಕಾರ್ಮಿಕೆ ಫಕ್ಕೀರಿ​ ಸೇರಿ 70 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವ

Sambrama Prabha NewsBy Sambrama Prabha NewsOctober 31, 2025No Comments3 Mins Read
Share WhatsApp Facebook Twitter Telegram
kannada rajotsava aword
kannada rajotsava aword
Share
WhatsApp Facebook Twitter Telegram

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರಕಟಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರಿನ ಪೌರ ಕಾರ್ಮಿಕರಾದ ಫಕ್ಕೀರಿ, ಬಹುಭಾಷಾ ನಟ ಪ್ರಕಾಶ್ ರಾಜ್​, ನಿವೃತ್ತ ಐಐಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ 70 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಮಾತನಾಡಿ, “ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ, ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ 2,116 ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿ ಪ್ರಶಸ್ತಿಗೆ ಅರ್ಹರಿದ್ದವರನ್ನು ಆಯ್ಕೆ ಮಾಡಲಾಗಿದೆ. ಅರ್ಜಿ ಹಾಕದ ಶೇ.80ರಷ್ಟು ಸಾಧಕರನ್ನು ಗುರುತಿಸಲಾಗಿದೆ” ಎಂದರು.

“ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಆಯ್ಕೆ ನಡೆದಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿದ್ದೇವೆ. ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ‌ ಮಹಿಳೆಯರನ್ನು ಈ ಸಲ ಆಯ್ಕೆ‌‌ ಮಾಡಲಾಗಿದೆ” ಎಂದು ತಿಳಿಸಿದರು.

“ಪ್ರಶಸ್ತಿ ಪುರಸ್ಕೃತರಿಗೆ 25 ಗ್ರಾಂ ಚಿನ್ನ, 5 ಲಕ್ಷ ರೂ ನಗದು, ಪ್ರಮಾಣಪತ್ರದ ಜೊತೆಗೆ ಫಲಕಗಳನ್ನು ನೀಡಿ ಗೌರವಿಸಲಾಗುವುದು. ನವೆಂಬರ್ 1ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ನಡೆಯಲಿದೆ. ಕರ್ನಾಟಕ ರತ್ನ ಪ್ರಶಸ್ತಿ ಪಡೆದವರಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ಏರ್ಪಡಿಸಿ ಗೌರವಿಸಲಾಗುವುದು” ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಮಾಹಿತಿ:

ಕ್ಷೇತ್ರ: ಸಾಹಿತ್ಯ (ಹೆಸರು ಹಾಗೂ ಜಿಲ್ಲೆ)
ಪ್ರೊ.ರಾಜೇಂದ್ರ ಚೆನ್ನಿ – ಶಿವಮೊಗ್ಗ
ತುಂಬಾಡಿ ರಾಮಯ್ಯ – ತುಮಕೂರು
ಪ್ರೊ.ಆರ್.ಸುನಂದಮ್ಮ – ಚಿಕ್ಕಬಳ್ಳಾಪುರ
ಡಾ.ಎಚ್.ಎಲ್.ಪುಷ್ಪ – ತುಮಕೂರು
ರಹಮತ್ ತರೀಕೆರೆ – ಚಿಕ್ಕಮಗಳೂರು
ಹ.ಮ.ಪೂಜಾರ – ವಿಜಯಪುರ

ಕ್ಷೇತ್ರ: ಜಾನಪದ (ಹೆಸರು ಹಾಗೂ ಜಿಲ್ಲೆ)
ಬಸಪ್ಪ ಭರಮಪ್ಪ ಚೌಡಿ – ಕೊಪ್ಪಳ
ಬಿ.ಟಾಕಪ್ಪ ಕಣ್ಣೂರು – ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೊಳ – ಬೆಳಗಾವಿ
ಹನುಮಂತಪ್ಪ ಮಾರಪ್ಪ, ಚೀಳಂಗಿ – ಚಿತ್ರದುರ್ಗ
ಎಂ.ತೋಪಣ್ಣ – ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
ಶ್ರೀಮತಿ ಸಿಂಧು ಗುಜರನ್ – ದಕ್ಷಿಣ ಕನ್ನಡ
ಎಲ್.ಮಹದೇವಪ್ಪ ಉಡಿಗಾಲ – ಮೈಸೂರು

ಕ್ಷೇತ್ರ: ಸಂಗೀತ (ಹೆಸರು ಹಾಗೂ ಜಿಲ್ಲೆ)
ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
ಮಡಿವಾಳಯ್ಯ, ಸಾಲಿ – ಬೀದರ್

ಕ್ಷೇತ್ರ: ನೃತ್ಯ
ಪ್ರೊ.ಕೆ.ರಾಮಮೂರ್ತಿ ರಾವ್ – ಮೈಸೂರು

ಕ್ಷೇತ್ರ: ಚಲನಚಿತ್ರ / ಕಿರುತೆರೆ
ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
ಶ್ರೀಮತಿ ವಿಜಯಲಕ್ಷ್ಮೀ ಸಿಂಗ್ – ಕೊಡಗು

ಕ್ಷೇತ್ರ: ಆಡಳಿತ
ಹೆಚ್.ಸಿದ್ದಯ್ಯ ಭಾ.ಆ.ಸೇ., (ನಿ) – ಬೆಂಗಳೂರು ದಕ್ಷಿಣ(ರಾಮನಗರ)

ಕ್ಷೇತ್ರ: ವೈದ್ಯಕೀಯ
ಡಾ.ಆಲಮ್ಮ ಮಾರಣ್ಯ – ತುಮಕೂರು
ಡಾ.ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

ಕ್ಷೇತ್ರ: ಸಮಾಜಸೇವೆ
ಶ್ರೀಮತಿ ಸೂಲಗಿತ್ತಿ ಈರಮ್ಮ – ವಿಜಯನಗರ
ಶ್ರೀಮತಿ ಫಕ್ಕೀರಿ – ಬೆಂಗಳೂರು ಗ್ರಾಮಾಂತರ
ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕಿನಾ – ದಕ್ಷಿಣ ಕನ್ನಡ
ಡಾ.ಎನ್.ಸೀತಾರಾಮ ಶೆಟ್ಟಿ – ಉಡುಪಿ
ಕೋಣಂದೂರು ಲಿಂಗಪ್ಪ – ಶಿವಮೊಗ್ಗ

ಕ್ಷೇತ್ರ: ಸಂಕೀರ್ಣ
ಉಮೇಶ ಪಂಬದ – ದಕ್ಷಿಣ ಕನ್ನಡ
ಡಾ.ರವೀಂದ್ರ ಕೋರಿಶೆಟ್ಟರ್ – ಧಾರವಾಡ
ಕೆ.ದಿನೇಶ್ – ಬೆಂಗಳೂರು
ಶಾಂತರಾಜು – ತುಮಕೂರು
ಜಾಫರ್ ಮೊಹಿಯುದ್ದೀನ್ – ರಾಯಚೂರು
ಪೆನ್ನ ಒಬಳಯ್ಯ – ಬೆಂಗಳೂರು ಗ್ರಾಮಾಂತರ
ಶ್ರೀಮತಿ ಶಾಂತಿ ಬಾಯಿ.ಕೆ – ಬಳ್ಳಾರಿ
ಪುಂಡಲೀಕ ಶಾಸ್ತ್ರೀ (ಬುಡಬುಡಕೆ) – ಬೆಳಗಾವಿ

ಕ್ಷೇತ್ರ: ಹೊರನಾಡು / ಹೊರದೇಶ
ಜಕರಿಯ ಬಜಪೆ – ಸೌದಿ
ಪಿ.ವಿ.ಶೆಟ್ಟಿ – ಮುಂಬೈ

ಕ್ಷೇತ್ರ: ಪರಿಸರ
ರಾಮೇಗೌಡ – ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ
ಕ್ಷೇತ್ರ: ಕೃಷಿ
ಎಂ.ಸಿ.ರಂಗಸ್ವಾಮಿ – ಹಾವೇರಿ
ಡಾ.ಎಸ್.ವಿ.ಹಿತ್ತಲಮನಿ – ಹಾಸನ

ಕ್ಷೇತ್ರ: ಮಾಧ್ಯಮ
ಕೆ.ಸುಬ್ರಮಣ್ಯ – ಬೆಂಗಳೂರು
ಅಂಶಿ ಪ್ರಸನ್ನ ಕುಮಾರ್ – ಮೈಸೂರು
ಬಿ.ಎಂ.ಹನೀಫ್ – ದಕ್ಷಿಣ ಕನ್ನಡ
ಎಂ.ಸಿದ್ದರಾಜು – ಮಂಡ್ಯ

ಕ್ಷೇತ್ರ: ವಿಜ್ಞಾನ / ತಂತ್ರಜ್ಞಾನ
ರಾಮಯ್ಯ – ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫಿಲಿಪ್ ರಾಜಕುಮಾರ್ – ದಾವಣಗೆರೆ
ಡಾ.ಆರ್.ವಿ.ನಾಡಗೌಡ – ಗದಗ
ಕ್ಷೇತ್ರ: ಸಹಕಾರ
ಶೇಖರಗೌಡ ವಿ.ಮಾಲಿಪಾಟೀಲ್ – ಕೊಪ್ಪಳ

ಕ್ಷೇತ್ರ: ಯಕ್ಷಗಾನ
ಕೋಟ ಸುರೇಶ ಬಂಗೇರ – ಉಡುಪಿ
ಐರಬೈಲ್ ಆನಂದ ಶೆಟ್ಟಿ – ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ.ಹೆಗಡೆ) – ಉತ್ತರ ಕನ್ನಡ
ಕ್ಷೇತ್ರ: ಬಯಲಾಟ
ಗುಂಡೂರಾಜ್ – ಹಾಸನ

ಕ್ಷೇತ್ರ: ರಂಗಭೂಮಿ
ಹೆಚ್.ಎಂ.ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
ಮೈಮ್ ರಮೇಶ್ – ದಕ್ಷಿಣ ಕನ್ನಡ
ಶ್ರೀಮತಿ ಡಿ. ರತ್ನಮ್ಮ ದೇಸಾಯಿ – ರಾಯಚೂರು

ಕ್ಷೇತ್ರ: ಶಿಕ್ಷಣ
ಡಾ.ಎಂ.ಆರ್.ಜಯರಾಮ್ – ಬೆಂಗಳೂರು
ಡಾ.ಎನ್.ಎಸ್.ರಾಮೇಗೌಡ – ಮೈಸೂರು
ಎಸ್.ಬಿ.ಹೊಸಮನಿ – ಕಲಬುರಗಿ
ಶ್ರೀಮತಿ ರಾಜ್ ಶ್ರೀ ನಾಗರಾಜು – ಬೆಳಗಾವಿ

ಕ್ಷೇತ್ರ: ಕ್ರೀಡೆ
ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
ಎಂ.ಯೋಗೇಂದ್ರ – ಮೈಸೂರು
ಡಾ.ಜಬಿನಾ ಎನ್.ಎಂ. (ಯೋಗ) – ಕೊಡಗು

ಕ್ಷೇತ್ರ: ನ್ಯಾಯಾಂಗ
ನ್ಯಾ.ಪಿ.ಬಿ.ಭಜಂತ್ರಿ (ಪವನ್ ಕುಮಾರ್ ಭಜಂತ್ರಿ) – ಬಾಗಲಕೋಟೆ

ಕ್ಷೇತ್ರ: ಶಿಲ್ಪಕಲೆ
ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
ನಾಗಲಿಂಗಪ್ಪ, ಜಿ.ಗಂಗೂರ – ಬಾಗಲಕೋಟೆ

ಕ್ಷೇತ್ರ: ಚಿತ್ರಕಲೆ
ಬಿ.ಮಾರುತಿ – ವಿಜಯನಗರ

ಕ್ಷೇತ್ರ: ಕರಕುಶಲ
ಎಲ್.ಹೇಮಾಶೇಖರ್ – ಮೈಸೂರು

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
aword kannadarajotsava prakash raj
Add as Preferred on Google Follow on Google News
Share. WhatsApp Facebook Twitter Telegram
Previous Articleಥರ್ಡ್‌ ಕ್ಲಾಸ್‌ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ: ಅಸ್ಸಾಂ CM ಹಿಮಂತ ಶರ್ಮಾಗೆ ಪ್ರಿಯಾಂಕ್ ತಪರಾಕಿ
Next Article ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

October 1, 2026

DKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ

September 10, 2026

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

September 2, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.