Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಚಿಕ್ಕಲ್ಲೂರು ಎನ್‌ಕೌಂಟರ್: ‘ಸ್ವರಕ್ಷಣೆ’ ಕಥೆ ಸುಳ್ಳು? ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ವೈಭವ: ಸಪ್ತರಾತ್ರೋತ್ಸವ

ಕರ್ನಾಟಕದ 101 ತಾಲೂಕುಗಳು ಬರಪೀಡಿತ ಎಂದು ಘೋಷಣೆ: ಸಂಪೂರ್ಣ ಪಟ್ಟಿ ಇಲ್ಲಿದೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ರಾಜ್ಯಪಾಲರ ಗಣರಾಜ್ಯೋತ್ಸವ ದಿನದ ಭಾಷಣದತ್ತ ಎಲ್ಲರ ಚಿತ್ತ ನೆಟ್ಟಿದೆ
Politics

ರಾಜ್ಯಪಾಲರ ಗಣರಾಜ್ಯೋತ್ಸವ ದಿನದ ಭಾಷಣದತ್ತ ಎಲ್ಲರ ಚಿತ್ತ ನೆಟ್ಟಿದೆ

Sambrama Prabha NewsBy Sambrama Prabha NewsJanuary 26, 2026No Comments2 Mins Read
Share WhatsApp Facebook Twitter Telegram
Share
WhatsApp Facebook Twitter Telegram

Updated By: Priyalachhi

ಬೆಂಗಳೂರು: ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ ಸಂಘರ್ಷ ಏರ್ಪಟ್ಟಿದ್ದ ಬೆನ್ನಲ್ಲೇ ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಗಣರಾಜ್ಯೋತ್ಸವ ಭಾಷಣ ಮಹತ್ವ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಈ ಗಣರಾಜ್ಯೋತ್ಸವ ದಿನದ ಭಾಷಣದಲ್ಲಿ ಜಂಟಿ ಅಧಿವೇಶನದ ಭಾಷಣದಂತೆ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶವನ್ನು ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ ಜಂಟಿ ಅಧಿವೇಶನದ ಭಾಷಣ ವಿಚಾರದಲ್ಲಿ ರಾಜ್ಯದಲ್ಲಿ ರಾಜ್ಯಪಾಲ ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಉಂಟಾಗಿದೆ. ಅದೇ ರೀತಿ ಇಂದಿನ ಗಣರಾಜ್ಯೋತ್ಸವ ದಿನದ ರಾಜ್ಯಪಾಲರ ಭಾಷಣದ ವಿಚಾರವಾಗಿ ಮತ್ತೆ ಜಟಾಪಟಿ ಏರ್ಪಡುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಇಂದು ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ವೇಳೆ ಸಂಪ್ರದಾಯದಂತೆ, ಸರ್ಕಾರದ ಇದುವರೆಗಿನ ಯೋಜನೆಗಳು, ಕಾರ್ಯಕ್ರಮಗಳು, ಸಾಧನೆಗಳು, ಮುಂದಿನ ಯೋಜನೆಗಳು ಮತ್ತು ಗುರಿಗಳನ್ನು ವಿವರಿಸಲಿದ್ದಾರೆ. ಆದರೆ, ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವ ಅಂಶಗಳನ್ನು ಸೇರಿಸಿದರೆ, ಆ ಭಾಷಣವನ್ನು ಓದದೇ ತಾವೇ ಸಿದ್ಧಪಡಿಸಿದ ಭಾಷಣ ಓದುವುದಾಗಿ ರಾಜ್ಯಪಾಲರು ಸಂದೇಶವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಪ್ರಸಕ್ತ ನಡೆಯುತ್ತಿರುವ ಜಂಟಿ ಅಧಿವೇಶನ ವೇಳೆ ಸರ್ಕಾರದ ಭಾಷಣವನ್ನು ಓದದೇ ಕೇವಲ ಎರಡು ಸಾಲಿನಲ್ಲಿ ಓದಿ ಹೊರ ನಡೆದ ರಾಜ್ಯಪಾಲರ ನಡೆ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಗಣರಾಜ್ಯೋತ್ಸವ ದಿನದಂದು ಮತ್ತೊಂದು ಸಂಘರ್ಷ ಏರ್ಪಡುತ್ತಾ ಎಂಬುದು ಎಲ್ಲರ ಕುತೂಹಲವಾಗಿದೆ.

ರಾಜ್ಯಪಾಲರ ಭಾಷಣದಲ್ಲಿ ಮತ್ತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ನರೇಗಾ ಯೋಜನೆ ಕುರಿತು ಉಲ್ಲೇಖ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರಿಗೆ ಕನಿಷ್ಠ 4ರಿಂದ 5 ಐದು ದಿನಗಳ ಮುಂಚಿತವಾಗಿ ಕಳುಹಿಸಿಕೊಡಲಾಗುತ್ತದೆ. ಇದರಲ್ಲಿ ಏನಾದರೂ ತಿದ್ದಪಡಿ ಮಾಡಬೇಕಾಗುವ ಅಂಶಗಳಿದ್ದರೆ ಸರಿಪಡಿಸುವಂತೆ ರಾಜಭವನ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತಾರೆ. ಮುಖ್ಯ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದು ಈವರೆಗೆ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
ಗಣರಾಜ್ಯೋತ್ಸವ ದಿನ ರಾಜ್ಯಪಾಲರ
Add as Preferred on Google Follow on Google News
Share. WhatsApp Facebook Twitter Telegram
Previous Articleರಾಜ್ಯದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ
Next Article ಧರ್ಮೇಂದ್ರ, ವಿ.ಎಸ್.ಅಚ್ಯುತಾನಂದನ್ ಸೇರಿ ಐವರು ‘ಪದ್ಮವಿಭೂಷಣ’
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ನನ್ನನ್ನು ಸಿಎಂ ಮಾಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ಹೇಳಿದ್ದರು: ಸಚಿವ ಜಿ. ಪರಮೇಶ್ವರ್ ಮಹತ್ವದ ಹೇಳಿಕೆ

August 26, 2026

ಬಿ. ನಾಗೇಂದ್ರ ಸಂಪುಟಕ್ಕೆ ಯಾಕೆ?: ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ, ರವಿಕುಮಾರ್ ಆಕ್ರೋಶ

August 26, 2026

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ: ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಬಿಗ್ ಅಪ್‌ಡೇಟ್!

August 7, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಚಿಕ್ಕಲ್ಲೂರು ಎನ್‌ಕೌಂಟರ್: ‘ಸ್ವರಕ್ಷಣೆ’ ಕಥೆ ಸುಳ್ಳು? ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ವೈಭವ: ಸಪ್ತರಾತ್ರೋತ್ಸವ

ಕರ್ನಾಟಕದ 101 ತಾಲೂಕುಗಳು ಬರಪೀಡಿತ ಎಂದು ಘೋಷಣೆ: ಸಂಪೂರ್ಣ ಪಟ್ಟಿ ಇಲ್ಲಿದೆ

ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಏರಿಕೆ: ಶತಕದತ್ತ ಮುಖ ಮಾಡಿದ ಬೆಲೆ, ಆದರೂ ರೈತರಿಗಿಲ್ಲ ಬಿಡಿಗಾಸು ಲಾಭ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.