• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ

Sambrama Prabha News by Sambrama Prabha News
January 26, 2026
in Latest News
0
ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ

Updated By: Priyalachhi

ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿರುವ ಚೋರ್ಲಾ ಘಾಟ್ ನಲ್ಲಿ ಸಿನಿಮಾ ರೀತಿಯಲ್ಲಿ 400 ಕೋಟಿ ರೂ. ದರೋಡೆ ನಡೆದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಲಾಗಿದೆ.

ಈ ಪ್ರಕರಣ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದು, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರೇ ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ ಎಂದರು.

ಜನವರಿ 6 ರಂದು ನಾಸಿಕ್ ಎಸ್ ಪಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್ ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ.ಆಗಿರಬಹುದು ಅಂತಾ ಪತ್ರದಲ್ಲಿತ್ತು.ಈ ಕಾರಣಕ್ಕೆ ಖಾನಾಪುರದ ಸಬ್ ಇನ್ಸ್ ಪೆಕ್ಟರ್ ಸೇರಿ ಒಂದು ತಂಡವನ್ನು ಕಳುಹಿಸಿದ್ದೇವೆ ಎಂದರು.

ಡಿವೈಎಸ್ಪಿ ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರತಿದಿನವೂ ಮಾಹಿತಿ ನೀಡುತ್ತಿದ್ದಾರೆ. ನಾಸಿಕ್ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಬಯಸಿದರೆ, ಅವರೊಂದಿಗೆ ಸಂಪರ್ಕದಲ್ಲಿರಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

Tags: ಬೆಳಗಾವಿ ಎಸ್ ಪಿ
Previous Post

ದೆಹಲಿಯ ಕರ್ತವ್ಯ ಪಥದಲ್ಲಿ ವಾಯುಪಡೆ ವಿಮಾನಗಳ ಆರ್ಭಟ

Next Post

ಮಂಗಳವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

Next Post
ಮಂಗಳವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

ಮಂಗಳವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.