• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಮಂಗಳವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

Sambrama Prabha News by Sambrama Prabha News
January 27, 2026
in Latest News
0
ಮಂಗಳವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

Updated By: Priyalachhi

ಪಂಚಾಂಗ:

ದಿನಾಂಕ : 27-01-2026

ವಾರ : ಮಂಗಳವಾರ

ಸಂವತ್ಸರ : ವಿಶ್ವವಸು

ಆಯನ : ಉತ್ತರಾಯಣ

ಪಕ್ಷ : ಶುಕ್ಲ

ತಿಥಿ : ನವಮಿ

ನಕ್ಷತ್ರ : ಭರಣಿ

ಸೂರ್ಯೋದಯ : ಮುಂಜಾನೆ 06:45 ಗಂಟೆಗೆ

ಅಮೃತ ಕಾಲ : ಮಧ್ಯಾಹ್ನ 12:30 ರಿಂದ 01:57ರ ವರೆಗೆ

ದುರ್ಮುಹೂರ್ತ : ಬೆಳಗ್ಗೆ 09:09 ರಿಂದ 09:57 ಹಾಗೂ ಮಧ್ಯಾಹ್ನ 12:21 ರಿಂದ 01:09ರ ತನಕ

ರಾಹುಕಾಲ : ಮಧ್ಯಾಹ್ನ 03:23 ರಿಂದ 04:49ರ ವರೆಗೆ

ಸೂರ್ಯಾಸ್ತ : ಸಂಜೆ 06:15 ಗಂಟೆಗೆ

ರಾಶಿ ಭವಿಷ್ಯ

ಮೇಷ: ಇಂದು, ನೀವು ಯಾರದೋ ಒಬ್ಬರ ಹೃದಯಕ್ಕೆ ಘಾಸಿಯುಂಟು ಮಾಡುತ್ತೀರಿ. ಮತ್ತೊಂದೆಡೆ, ನೀವು ಸ್ಥಿರವಾದ ಬಾಂಧವ್ಯಕ್ಕೆ ಬದ್ಧರಾಗಿರಲು ಕೂಡಾ ಬಯಸುತ್ತಿದ್ದೀರಿ. ವಿವಾಹಿತರಿಗೆ, ಬಂಧಗಳು ಸದೃಢವಾಗಿರುತ್ತವೆ.

ವೃಷಭ: ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನದಂದು ನೀವು ಪ್ರಯಾಣ ಮಾಡಲು ಉತ್ಸಾಹದಲ್ಲಿರುವುದಿಲ್ಲ, ಆದರೆ ಸಂಜೆಗಳು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತುಕತೆಯ ಕಾರಣ ನಿರಾಳವಾಗಿರುತ್ತವೆ.

ಮಿಥುನ: ಇದು ನಿಮ್ಮ ಕುಟುಂಬಕ್ಕೆ ಸಂಭ್ರಮದ ದಿನ. ಆದರೆ, ನಿಮ್ಮ ಕುಟುಂಬ ಸಂತೋಷದಿಂದ ನಲಿಯುತ್ತಿದ್ದರೆ ವ್ಯಾಪಾರ ವಹಿವಾಟು ನಿರ್ವಹಣೆಯಲ್ಲಿ ವ್ಯಸ್ತರಾಗಿರುತ್ತೀರಿ. ದಿನದ ನಂತರದಲ್ಲಿ ನೀವು ವ್ಯಾಪಾರ ಪ್ರವಾಸ ತೆರಳಲೂಬಹುದು. ವೈಯಕ್ತಿಕ ಸಾಧನೆಯನ್ನು ಸಂಭ್ರಮಿಸುವುದಕ್ಕಿಂತ ವೃತ್ತಿಪರ ಯಶಸ್ಸು ಸಾಧಿಸಲು ಸಮಯ ಮೀಸಲಿಡುತ್ತೀರಿ.

ಕರ್ಕಾಟಕ: ಕೆಲಸದ ವಿಷಯದಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ ಎಂದು ನೀವು ಭಾವಿಸುತ್ತೀರಿ. ಆದರೆ ನಿಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ವ್ಯಾಪಾರದಲ್ಲಿ ಸಾಧನೆ ಮಾಡುತ್ತಿರುವುದರಿಂದ ಚಿಂತೆಗೆ ಕಾರಣವೇ ಇಲ್ಲ. ನಿಮಗೆ ಸಾಧ್ಯವಿರುವಾಗ ವೈಭವದತ್ತ ದೃಷ್ಟಿ ಹರಿಸಲು ಪ್ರಯತ್ನಿಸಿ.

ಸಿಂಹ: ನಿಮ್ಮ ಆಲೋಚನಾ ವಿಧಾನದಲ್ಲಿ ಬದಲಾವಣೆಯಿಂದ ಜೀವನದ ಪ್ರತಿಯೊಂದು ಹಂತದಲ್ಲಿಯೂ ನೀವು ಉತ್ತಮ ಸಾಧನೆ ಮಾಡುವ ಸಾಧ್ಯತೆ ಇರುವುದರಿಂದ ನಿಮ್ಮ ಹೃದಯ ಬದಲಿಗೆ ತಲೆಯನ್ನು ಬಳಸಿರಿ. ನಿಮ್ಮ ಮನೆಯನ್ನು ನವೀಕರಿಸುವ ಅಥವಾ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಎಲ್ಲ ರೀತಿಯಲ್ಲಿಯೂ ಇದು ಅತ್ಯಂತ ಉತ್ತಮ ದಿನವಾಗಿದೆ.

ಕನ್ಯಾ: ನೀವು ಹೃದಯ ಒಡೆಯುವ ಒಬ್ಬರೊಂದಿಗೆ ಜೊತೆಯಾಗಿರುತ್ತೀರಿ. ಅಲ್ಲದೆ, ನಿಮ್ಮ ವೆಚ್ಚಗಳು ನಿಮ್ಮ ಉಳಿತಾಯಗಳನ್ನು ಮೀರುತ್ತವೆ. ಆದಾಗ್ಯೂ, ಬಂಧಗಳು ಸದೃಢವಾಗಿ ಬೆಳೆಯುವಂತೆ ಮಾಡಲು ಪ್ರಯತ್ನಗಳನ್ನು ನಡೆಸುತ್ತಿರುವಷ್ಟು ಕಾಲವೂ ನೀವು ವೈವಾಹಿಕ ಸಂತೋಷ ನಿರೀಕ್ಷಿಸಬಹುದು.

ತುಲಾ: ದಿರಿಸು ಮತ್ತು ಉಡುಪು ಧರಿಸುವ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಮತ್ತು ಸೌಂದರ್ಯಕ್ಕೆ ಸೇರ್ಪಡೆಯಾಗುತ್ತದೆ. ಜನರು ನಿಮ್ಮ ಸೌಂದರ್ಯದಿಂದ ಪ್ರಭಾವಿತರಾಗುತ್ತಾರೆ. ಸಂಜೆಯ ಸಾಮಾಜಿಕ ಕಾರ್ಯಕ್ರಮ ನಿಮ್ಮನ್ನು ಮತ್ತೊಬ್ಬರಿಗೆ ಹತ್ತಿರವಾಗಿಸುತ್ತದೆ ಮತ್ತು ಪ್ರಣಯದ ಸಾಧ್ಯತೆ ಇದೆ.

ವೃಶ್ಚಿಕ: ಅವಸರದಿಂದ ಕೆಲಸ ಕೆಡುತ್ತದೆ. ನೀವು ನಿರ್ಧಾರ ಕೈಗೊಳ್ಳುವ ಮುನ್ನ ಅಥವಾ ನಿಮ್ಮ ಯೋಜನೆಗಳು ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸುವುದು ಮುಖ್ಯ. ನಿಮ್ಮ ಪ್ರಯತ್ನಗಳು ವ್ಯರ್ಥವಾಗುವುದರಿಂದ ಈ ದಿನ ನಿಮಗೆ ಭರವಸೆಯಿಂದ ಕೂಡಿಲ್ಲ. ವ್ಯಾಪಾರದ ಪ್ರವಾಸ ಸಾಧ್ಯತೆ ಇದೆ. ಸಂಜೆ ನಿಮ್ಮ ಪ್ರೀತಿಪಾತ್ರರನ್ನು ವಿಶೇಷವಾಗಿ ಭಾವಿಸುವಂತೆ ಮಾಡಿರಿ!

ಧನು: ಶಾಂತಿ ಮತ್ತು ನೆಮ್ಮದಿ, ಇಂದು ನೀವು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದೀರಿ. ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರ ಮುಂದೆ ಭಾವನಾತ್ಮಕ ವ್ಯಕ್ತಿಯಾಗಿ ಕಾಣುತ್ತೀರಿ. ಮಧ್ಯಾಹ್ನ ವ್ಯಾಪಾರ ಅಥವಾ ವಿನೋದ ಮತ್ತು ಮನರಂಜನೆಯ ಚಟುವಟಿಕೆಗಳಲ್ಲಿ ಮುಳುಗಿಹೋಗುತ್ತೀರಿ. ಆದಾಗ್ಯೂ, ಸಂಜೆ ನಿಮ್ಮ ಅಲಂಕರಣಕ್ಕಾಗಿ ನೀವು ಕೊಂಚ ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ಮಕರ: ನೀವು ಇಂದು ಸಮತೋಲನದ ಕಾರ್ಯ ನಿರ್ವಹಿಸುತ್ತೀರಿ. ಒಂದೆಡೆ ನೀವು ನಿಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮ ವಹಿಸುತ್ತೀರಿ, ಮತ್ತೊಂದೆಡೆ, ನಿಮ್ಮ ಹವ್ಯಾಸಗಳಿಗೆ ಕೊಂಚ ಸಮಯ ಮೀಸಲಿಡುತ್ತೀರಿ. ನಿಮ್ಮ ಮೇಲಾಧಿಕಾರಿ ಮತ್ತು ಸಹೋದ್ಯೋಗಿಗಳು ನಿಮ್ಮ ಮೇಲೆ ಪ್ರಶಂಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ. ಅವರ ಮಾತುಗಳನ್ನು ಹಾಗೆಯೇ ಪರಿಗಣಿಸಬೇಡಿ, ನೀವು ಅದರ ಗೂಡಾರ್ಥ ತಿಳಿಯದೇ ಇರಬಹುದು. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ.

ಕುಂಭ: ಇಂದು ನಿಮಗೆ ಪಾರ್ಟಿ ಮಾಡಲು ಅತ್ಯಂತ ಸಣ್ಣ ಕಾರಣಗಳು ಸಾಕು! ಶುಭಸುದ್ದಿ ನಿಮ್ಮ ಉತ್ಸಾಹಕ್ಕೆ ಸೇರ್ಪಡೆಯಾಗುತ್ತದೆ. ಈ ದಿನ ಧನಾತ್ಮಕವಾಗಿ ಪ್ರಾರಂಭವಾಗುತ್ತದೆ. ಮತ್ತು ಇದು ಇಡೀ ದಿನ ಮುಂದುವರೆಯುತ್ತದೆ. ನೀವು ಜೀವನಕ್ಕಾಗಿ ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಿರಿ ಮತ್ತು ಪರಿಪೂರ್ಣ ದಿನವನ್ನು ಪರಿಪೂರ್ಣವಾಗಿ ಮುಗಿಸಿರಿ.

ಮೀನ: ಒಂಟಿಯಾಗಿರುವ ಎಲ್ಲರಿಗೂ ಈ ದಿನ “ಬಂಧನ”ಕ್ಕೆ ಒಳಗಾಗಲು ಒಳ್ಳೆಯ ದಿನ. ವಿವಾಹಿತರು ಅಥವಾ ಪ್ರೇಮಿಗಳನ್ನು ಹೊಂದಿರುವವರಿಗೆ ಪ್ರಣಯದ ದಿನ ನಿಮಗಾಗಿ ಕಾದಿದ್ದು ನಿಮ್ಮನ್ನು ನಿಮ್ಮ ಸಂಗಾತಿಯ ಹತ್ತಿರ ತರುತ್ತದೆ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳ ಸಾಧ್ಯತೆಯೂ ಇದೆ. ಹೊಸ ಬಾಂಧವ್ಯಗಳನ್ನು ರೂಪಿಸಿಕೊಳ್ಳಲು ಮತ್ತು ಹಳೆಯವನ್ನು ನವೀಕರಿಸಲು ಇದು ಅದ್ಭುತವಾದ ದಿನ.

Tags: ಪಂಚಾಂಗಮಂಗಳವಾರದರಾಶಿ ಭವಿಷ್ಯ
Previous Post

ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ

Next Post

ನಾವು ಜನರ ಸೇವೆ ಮಾಡಲು ಸಿಎಂ ಆಗುವುದು: ಡಿ.ಕೆ ಶಿವಕುಮಾರ್

Next Post
ನಾವು ಜನರ ಸೇವೆ ಮಾಡಲು ಸಿಎಂ ಆಗುವುದು: ಡಿ.ಕೆ ಶಿವಕುಮಾರ್

ನಾವು ಜನರ ಸೇವೆ ಮಾಡಲು ಸಿಎಂ ಆಗುವುದು: ಡಿ.ಕೆ ಶಿವಕುಮಾರ್

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.