Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಇಡಿ ದಾಳಿ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ: ದೂರು ಕೊಟ್ಟವರು ಯಾರು? ಸಿಎಂಗೆ ತಿಳಿಸಿದ್ರಾ ಸಚಿವ?

ಮಂಡ್ಯ: ಗಣೇಶ ಮೂರ್ತಿ ಅನಾವರಣದ ವೇಳೆ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯ

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!
Exclusive Latest News

ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!

Sambrama Prabha NewsBy Sambrama Prabha NewsMay 26, 2026Updated:May 26, 2026No Comments3 Mins Read
Share WhatsApp Facebook Twitter Telegram
siddaramaiah-no-election-2028
Share
WhatsApp Facebook Twitter Telegram

ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಹಾಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ. ಅಧಿಕಾರ ಹಂಚಿಕೆ ಸೂತ್ರದನ್ವಯ ಹೈಕಮಾಂಡ್ ಜೊತೆಗಿನ ಸಾಲು ಸಾಲು ಸಭೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆಗೆ ಒಲವು ತೋರಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ. ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದಾದ್ಯಂತ ರಾಜಕೀಯ ವಲಯದಲ್ಲಿ ಈ ಹಠಾತ್ ಬೆಳವಣಿಗೆ ತೀವ್ರ ಸಂಚಲನ ಮೂಡಿಸಿದೆ.

ರಾಹುಲ್ ಗಾಂಧಿಯಿಂದ ಹೊಸ ಆಫರ್:

ಎಐಸಿಸಿ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸುದೀರ್ಘ ಚರ್ಚೆಗಳು ನಡೆದಿವೆ. ಈ ವೇಳೆ ರಾಹುಲ್ ಗಾಂಧಿ ಅವರು ಅಧಿಕಾರ ಹಂಚಿಕೆ ವಿಚಾರವನ್ನು ಖುದ್ದು ಪ್ರಸ್ತಾಪಿಸಿದ್ದು, ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಸದಸ್ಯತ್ವದ ಜೊತೆಗೆ ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನದ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರ ಪುತ್ರ ಯತೀಂದ್ರ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಹಾಗೂ ಆಪ್ತ ಬಣದ ಶಾಸಕರಿಗೆ ಪ್ರಮುಖ ಖಾತೆಗಳ ಭರವಸೆಯನ್ನೂ ಹೈಕಮಾಂಡ್ ಮುಂದಿಟ್ಟಿದೆ ಎಂಬ ಮಾಹಿತಿಯಿದೆ.

ಆಪ್ತರೊಂದಿಗೆ ದೆಹಲಿಯಲ್ಲಿ ಗೌಪ್ಯ ಸಭೆ

 ಹೈಕಮಾಂಡ್ ಜೊತೆಗಿನ ಸಭೆ ಮುಗಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ದೆಹಲಿಯ ಖಾಸಗಿ ಸ್ಥಳವೊಂದರಲ್ಲಿ ತಮ್ಮ ಆಪ್ತ ಸಚಿವರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರೇ ಖುದ್ದು ಸೂಚನೆ ನೀಡಿರುವುದರಿಂದ, ಅವರ ಮಾತನ್ನು ಧಿಕ್ಕರಿಸುವುದು ತಮ್ಮ ಇಷ್ಟು ವರ್ಷಗಳ ರಾಜಕೀಯ ಗೌರವಕ್ಕೆ ಚ್ಯುತಿ ತರಬಹುದು ಎಂಬ ಆಲೋಚನೆಯಿಂದ ಅವರು ರಾಜೀನಾಮೆಗೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗೆ ವಾಪಸ್, ನಾಳೆ ನಿರ್ಣಾಯಕ ದಿನ: ಈ ಎಲ್ಲಾ ಮಹತ್ವದ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ನಾಳೆ (ನೆಹರು ಅವರ ಪುಣ್ಯತಿಥಿ) ನಡೆಯುವ ಕಾರ್ಯಕ್ರಮಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ನಿರ್ಧಾರ ಹೊರಹಾಕುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರ ಸಮ್ಮುಖದಲ್ಲಿಯೇ ಅಂತಿಮ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ.

2023ರಲ್ಲಿ ಸರ್ಕಾರ ರಚನೆಯಾದಾಗಲೇ ಎರಡುವರೆ ವರ್ಷಗಳ ಅಧಿಕಾರ ಹಂಚಿಕೆಯ ಬಗ್ಗೆ ಮಾತುಕಥೆಯಾಗಿತ್ತು. ಇದೀಗ ಆ ಗಡುವು ಸಮೀಪಿಸುತ್ತಿದ್ದಂತೆ, ಗುಟ್ಟಾಗಿ ಉಳಿದಿದ್ದ ನಾಯಕತ್ವ ಬದಲಾವಣೆಯ ಚರ್ಚೆಗಳು ಇದೀಗ ಸ್ಪಷ್ಟ ಸ್ವರೂಪ ಪಡೆದುಕೊಂಡಿವೆ.

ನಾಳೆ ಬೆಂಗಳೂರಿಗೆ ಸುರ್ಜೇವಾಲ, ವೇಣುಗೋಪಾಲ್

ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಹೈಕಮಾಂಡ್ ಸೂಚನೆಯಂತೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲು ಒಲವು ತೋರಿದ್ದಾರೆ ಎನ್ನಲಾಗಿದ್ದು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ರಾಹುಲ್ ಗಾಂಧಿ ಮಾತು ಮೀರುವಂತಿಲ್ಲ ಎಂದ ಸಿಎಂ!

ದೆಹಲಿಯಲ್ಲಿ ನಡೆದ ಹೈಕಮಾಂಡ್ ಭೇಟಿ ಬಳಿಕ ಸಿದ್ದರಾಮಯ್ಯನವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ನೀಡಬಾರದು, ನಾವೇ ಖುದ್ದಾಗಿ ರಾಹುಲ್ ಗಾಂಧಿ ಅವರ ಬಳಿ ಮಾತನಾಡುತ್ತೇವೆ ಎಂದು ಸಿದ್ದರಾಮಯ್ಯನವರ ಆಪ್ತ ಸಚಿವರು ಮತ್ತು ಶಾಸಕರು ತೀವ್ರ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿರುವ ಸಿದ್ದರಾಮಯ್ಯ, “ರಾಹುಲ್ ಗಾಂಧಿ ಅವರ ಸೂಚನೆಯನ್ನು ಮೀರಿ ನಡೆಯಲು ಸಾಧ್ಯವಿಲ್ಲ. ನಾನು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದುಬಿಟ್ಟಿದ್ದೇನೆ. ನಿಮಗೆ ಬೇಕಿದ್ದರೆ ಹೋಗಿ ರಾಹುಲ್ ಗಾಂಧಿ ಜೊತೆ ಮಾತನಾಡಿ” ಎಂದು ತಮ್ಮ ಆಪ್ತರಿಗೆ ಖಡಕ್ ಆಗಿಯೇ ತಿಳಿಸಿದ್ದಾರೆ ಎನ್ನಲಾಗಿದೆ.

2018ರನ್ನೇ ನೆನಪಿಸಿದ ‘ಬಾಡಿ ಲ್ಯಾಂಗ್ವೇಜ್’

ದೆಹಲಿಯಲ್ಲಿ ಎಐಸಿಸಿ ಕಚೇರಿಯಿಂದ ಹೊರಬರುವಾಗ ಸಿದ್ದರಾಮಯ್ಯನವರ ಮುಖದಲ್ಲಿ ಎಂದಿನ ಮಂದಹಾಸ ಇರಲಿಲ್ಲ. ತೀವ್ರ ಗಂಭೀರವಾಗಿ, ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಬರುತ್ತಿದ್ದ ದೃಶ್ಯಗಳು ಅನೇಕ ಊಹಾಪೋಹಗಳಿಗೆ ಕಾರಣವಾಗಿವೆ. ಅವರ ಪಕ್ಕದಲ್ಲೇ ಇದ್ದ ಡಿ.ಕೆ. ಶಿವಕುಮಾರ್ ಮುಖದಲ್ಲಿ ಮಾತ್ರ ನಗು ಎದ್ದು ಕಾಣುತ್ತಿತ್ತು.

2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಣೆಯಾದಾಗ ರಾಜಭವನದ ಎದುರು ಸಿದ್ದರಾಮಯ್ಯನವರು ಇದೇ ರೀತಿ ಕೈಕಟ್ಟಿ ಗಂಭೀರವಾಗಿ ನಿಂತಿದ್ದರು. ಇದೀಗ ಎಐಸಿಸಿ ಕಚೇರಿಯಿಂದ ಹೊರಬರುವಾಗಲೂ ಅದೇ ಮುಖಭಾವ ಕಂಡುಬಂದಿದ್ದು, ಹೈಕಮಾಂಡ್ ಕಠಿಣ ಸಂದೇಶ ರವಾನಿಸಿದೆ ಎಂಬುದನ್ನು ಇದು ಪುಷ್ಟೀಕರಿಸುತ್ತಿದೆ.

ಡಿಸಿಎಂ ಆಗ್ತಾರಾ ಯತೀಂದ್ರ? ಮುಂದೇನು?

ಸಿದ್ದರಾಮಯ್ಯನವರು ದಿಢೀರ್ ಪದತ್ಯಾಗ ಮಾಡಿದರೆ, ದಶಕಗಳಿಂದ ಅವರನ್ನೇ ನಂಬಿಕೊಂಡಿರುವ ಅಹಿಂದ ನಾಯಕರು, ಶಾಸಕರು ಹಾಗೂ ಆಪ್ತವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಲಿದೆ. ಇದೇ ಕಾರಣಕ್ಕೆ ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವ ವೇಣುಗೋಪಾಲ್ ಮತ್ತು ಸುರ್ಜೇವಾಲ ಅವರು, ಶಾಸಕರು ಹಾಗೂ ಸಚಿವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಬಂಡಾಯ ಶಮನಕ್ಕೆ ಮುಂದಾಗಲಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಆಫರ್ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. 2028ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಾತಿವಾರು ಲೆಕ್ಕಾಚಾರದ ಮೇಲೆ ಡಿಸಿಎಂ ಸ್ಥಾನಗಳ ಹಂಚಿಕೆ ನಡೆಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮುಂದಿನ ಒಂದೆರಡು ದಿನಗಳು ತೀವ್ರ ಕುತೂಹಲ ಮೂಡಿಸಿವೆ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
CM Change Congress High Command DK Shivakumar Kannada News Karnataka News Karnataka Politics Rahul Gandhi Siddaramaiah Yathindra Siddaramaiah ಕರ್ನಾಟಕ ರಾಜಕೀಯ. ಕಾಂಗ್ರೆಸ್ ಮುಖ್ಯಮಂತ್ರಿ ಬದಲಾವಣೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಸಿದ್ದರಾಮಯ್ಯ ರಾಜೀನಾಮೆ
Add as Preferred on Google Follow on Google News
Share. WhatsApp Facebook Twitter Telegram
Previous Articleಘನತ್ಯಾಜ್ಯ ಟಿಪ್ಪಿಂಗ್‌ ಶುಲ್ಕ ನಿಗದಿಯಲ್ಲಿ ಭಾರೀ ಹಗರಣ: ಸದ್ದಿಲ್ಲದೇ 39,437 ಕೋಟಿ ರೂ. ಮೊತ್ತಕ್ಕೆ ಕ್ಯಾಬಿನೆಟ್ ಒಪ್ಪಿಗೆ!
Next Article ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಇಡಿ ದಾಳಿ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ: ದೂರು ಕೊಟ್ಟವರು ಯಾರು? ಸಿಎಂಗೆ ತಿಳಿಸಿದ್ರಾ ಸಚಿವ?

September 13, 2026

ಮಂಡ್ಯ: ಗಣೇಶ ಮೂರ್ತಿ ಅನಾವರಣದ ವೇಳೆ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯ

September 13, 2026

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

September 12, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಇಡಿ ದಾಳಿ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ: ದೂರು ಕೊಟ್ಟವರು ಯಾರು? ಸಿಎಂಗೆ ತಿಳಿಸಿದ್ರಾ ಸಚಿವ?

ಮಂಡ್ಯ: ಗಣೇಶ ಮೂರ್ತಿ ಅನಾವರಣದ ವೇಳೆ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯ

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

DKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.