• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬಿಹಾರದಲ್ಲಿ ಎನ್‌ಡಿಎ ಸೋತರೂ ಆಶ್ಚರ್ಯವೇನಿಲ್ಲ! ಶರದ್ ಪವಾರ್

Sambrama Prabha News by Sambrama Prabha News
November 8, 2025
in Home, Latest News, Nation News
0
ಬಿಹಾರದಲ್ಲಿ ಎನ್‌ಡಿಎ ಸೋತರೂ ಆಶ್ಚರ್ಯವೇನಿಲ್ಲ! ಶರದ್ ಪವಾರ್

Updated By: Priyalachhi

ಮುಂಬೈ: ಪೂರ್ವ ರಾಜ್ಯದ ಜನರು ಬದಲಾವಣೆಯನ್ನು ಬಯಸುತ್ತಿರುವುದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋತರೂ ಆಶ್ಚರ್ಯವೇನಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಶರದ್‌ಚಂದ್ರ ಪವಾರ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಬಿಹಾರ ದೇಶದ ಉಳಿದ ಭಾಗಗಳಿಗಿಂತ ಭಿನ್ನವಾದ ರಾಜ್ಯವಾಗಿದ್ದು, ದೇಶದ ರಾಜಕೀಯದಲ್ಲಿ ಕೆಲವು ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರು.

ಹಿರಿಯ ರಾಜಕಾರಣಿಯಾಗಿರುವ ಶರದ್ ಪವಾರ್ , ಬಿಹಾರದಲ್ಲಿ ಪ್ರಚಾರ ಮಾಡಿಲ್ಲವಾದರೂ ರಾಜ್ಯದಲ್ಲಿನ ತಮ್ಮ ಸಂಪರ್ಕಗಳಿಂದ ಪಡೆದ ಪ್ರತಿಕ್ರಿಯೆಗಳ ಪ್ರಕಾರ, ಎನ್‌ಡಿಎ ಅಧಿಕಾರ ಕಳೆದುಕೊಂಡರೂ ಆಶ್ಚರ್ಯವೇನಿಲ್ಲ. ಬಿಹಾರದ ಜನರು ಬದಲಾವಣೆ ಬಯಸುತ್ತಾರೆ ಎಂದು ಅವರು ಹೇಳಿದರು.

“ಇದು ರಾಜಕೀಯ ಅರಿವು ಹೊಂದಿರುವ ಬಡ ರಾಜ್ಯ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಚಂಪಾರಣ್‌ನಲ್ಲಿ ಮಹಾತ್ಮ ಗಾಂಧಿಯವರ ಹೋರಾಟ, ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ಆಂದೋಲನ ಮತ್ತು ಇಂದಿರಾ ಗಾಂಧಿಯವರು ವಿರೋಧ ಪಕ್ಷದಲ್ಲಿದ್ದಾಗ ಆನೆಯ ಮೇಲೆ ಸವಾರಿ ಮಾಡಿದ ಬೆಲ್ಚಿಗೆ ಭೇಟಿ ನೀಡಿದದ್ದು, ಭಾರತೀಯ ರಾಜಕೀಯದಲ್ಲಿ ನಿರ್ಣಾಯಕ ಕ್ಷಣಗಳಾಗಿವೆ ಎಂದು ಅವರು ಹೇಳಿದರು.

ಮೊನ್ನೆ ನಡೆದ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಶೇ. 65. 08 ರಷ್ಟು ಮತದಾನವಾಗಿದೆ.

Tags: NDASharad Pawar
Previous Post

ಶುಲ್ಕ ಪಾವತಿಸದ್ದಕ್ಕೆ ಪರೀಕ್ಷೆಗೆ ನಿರಾಕರಣೆ, ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!

Next Post

ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

Next Post
ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.