Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ವಾಯು ಗುಣಮಟ್ಟ ಸೂಚ್ಯಂಕ ಪ್ರಕಟ: ರಾಜ್ಯದಲ್ಲೇ ಮೈಸೂರಿಗೆ ಮೊದಲ ಸ್ಥಾನ, ದೇಶದಲ್ಲಿ 3ನೇ ಪಟ್ಟ
Latest News Home

ವಾಯು ಗುಣಮಟ್ಟ ಸೂಚ್ಯಂಕ ಪ್ರಕಟ: ರಾಜ್ಯದಲ್ಲೇ ಮೈಸೂರಿಗೆ ಮೊದಲ ಸ್ಥಾನ, ದೇಶದಲ್ಲಿ 3ನೇ ಪಟ್ಟ

Sambrama Prabha NewsBy Sambrama Prabha NewsNovember 20, 2025No Comments2 Mins Read
Share WhatsApp Facebook Twitter Telegram
Share
WhatsApp Facebook Twitter Telegram

Updated By: Priyalachhi

ಮೈಸೂರು: ದೇಶದಲ್ಲೇ ಅತ್ಯಂತ ವ್ಯವಸ್ಥಿತ ನಗರಗಳಲ್ಲಿ ಒಂದಾದ ಸಾಂಸ್ಕೃತಿಕ ನಗರಿ ಮೈಸೂರು ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ (ವಾಯು ಗುಣಮಟ್ಟ ಸೂಚ್ಯಂಕ) ಅಂದರೆ ಶುದ್ಧ ಗಾಳಿ ಹೊಂದಿರುವ ರಾಜ್ಯದ ನಗರಗಳಲ್ಲಿ ಮೊದಲ ಸ್ಥಾನ ಹಾಗೂ ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಮೈಸೂರು ಸ್ವಚ್ಛ ನಗರಿ ಎಂಬುದನ್ನು ಸಾಬೀತುಪಡಿಸಿದೆ. ಈ ಬಗ್ಗೆ ಪಾಲಿಕೆಯ ತೋಟಗಾರಿಕೆ ಇಲಾಖೆಯ ವಿಭಾಗದ ಮುಖ್ಯಸ್ಥರಾದ ಮೋಹನ್ ಕುಮಾರ್ ಈಟಿವಿ ಭಾರತ​ಕ್ಕೆ ವಿವರಿಸಿದ್ದಾರೆ.

“ಮೈಸೂರಿನಲ್ಲಿ ಒಟ್ಟು 65 ವಾರ್ಡ್​ಗಳಿದ್ದು ವಿಜಯನಗರ ಮೂರನೇ ಹಂತ ಸಹ ಮೈಸೂರು ನಗರ ಪಾಲಿಕೆಗೆ ಸೇರುತ್ತದೆ. ಇಲ್ಲಿಯವರೆಗೆ 585 ಉದ್ಯಾನವನಗಳು ಇವೆ. ಇವುಗಳಲ್ಲಿ 332 ಉದ್ಯಾನವನಗಳನ್ನು ಗುತ್ತಿಗೆದಾರರ ಮುಖಾಂತರ ನಿರ್ವಹಣೆ ಮಾಡಲಾಗುತ್ತಿದೆ. ಹಾಗೂ ಕೆಲವು ಆಸಕ್ತ ಸಂಘ ಸಂಸ್ಥೆಗಳು, CSR ಫಂಡ್ ಹಾಗೂ ಸಾರ್ವಜನಿಕರು ದತ್ತು ತೆಗೆದುಕೊಂಡು ಸುಮಾರು 12 ರಿಂದ 13 ಪಾರ್ಕಅನ್ನು ನೋಡಿಕೊಳ್ಳುತ್ತಿದ್ದಾರೆ”.

ನಗರ ಸೌಂದರ್ಯಕ್ಕೆ ರಸ್ತೆ ಮಧ್ಯ ಹೂ ಗಿಡಗಳು: “ಕೆಲವು ಗಿಡಗಳ ಸೌಂದರ್ಯ ಸ್ವಲ್ಪ ಕುಗ್ಗಿದ್ದ ಕಾರಣ 1 ವರ್ಷದ ಹಿಂದೆ 365 ದಿನಗಳೂ ಬಾಡದಂತ ಹೂಗಳನ್ನು ನೆಡಲಾಯಿತು. ಮಳೆ ಕಡಿಮೆ ಆದರೂ ಈ ಹೂವುಗಳು ಬಾಡುವುದಿಲ್ಲ. ಅಂತಹ 13 ರಿಂದ 14 ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡು, ಸುಮಾರು 40 ಕಿಲೋ ಮೀಟರ್​ ಉದ್ದದ ರಸ್ತೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ. ಈಗಾಗಲೇ ನೋಡಿರುವ ಹಾಗೆ ಎಲ್ಲಾ ಕಡೆಯಲ್ಲೂ ರಸ್ತೆಗಳ ಅಕ್ಕ ಪಕ್ಕದ ಸ್ಥಳದಲ್ಲಿ ಹೆಚ್ಚು ಸುಂದರವಾಗಿ ಕಾಣಿಸುತ್ತದೆ ಹಾಗೂ 13 ಪ್ಯಾಕೇಜ್ ಮಾಡಿಕೊಂಡು ಗುತ್ತಿಗೆದಾರರಿಗೆ ನೀಡಲಾಗಿದ್ದು, ಇವರೇ 2 ವರ್ಷಗಳ ಕಾಲ ನಿರ್ವಹಣೆ ಮಾಡುತ್ತಿದ್ದಾರೆ”.

“ಈಗಾಗಲೇ ಗಿಡವನ್ನು ನೆಟ್ಟು 1 ವರ್ಷವಾಗಿದೆ. ಮುಂದಿನ ವರ್ಷ 1 ವರ್ಷಗಳ ಕಾಲ ನಿರ್ವಹಣೆ ಮಾಡಿ ನಂತರ ಕಾರ್ಪೊರೇಷನ್​ಗೆ ಅವುಗಳನ್ನು ಕೊಡಲಾಗುತ್ತದೆ. ಗಿಡಗಳನ್ನು ಮಗುವಿನ ಹಾಗೆ ಪೋಷಣೆ ಮಾಡಬೇಕು. ಅದಾದ ನಂತರ ನಗರಪಾಲಿಕೆ ವತಿಯಿಂದ ಕೇವಲ ನೀರನ್ನು ಹಾಕುವುದು ಹಾಗೂ ಅವುಗಳ ನಿರ್ವಹಣೆ ಕೆಲಸವನ್ನು ನಾವೇ ಮಾಡುತ್ತೇವೆ. ಒಟ್ಟಾರೆ ಗಿಡಗಳನ್ನು ನೆಡುವುದಕ್ಕೆ 2 ಕೋಟಿ ಖರ್ಚಾಗಿದೆ”.

ಪಾಲಿಕೆ ಪಾರ್ಕ್​ಗಳನ್ನು ನಿರ್ವಹಣೆ ಮಾಡುತ್ತವೆ: “ಮಹಾನಗರಪಾಲಿಕೆಯ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಪಾಲಿಕೆ ಪಾರ್ಕ್​ಗಳನ್ನು ಹೆಚ್ಚು ಮಾಡಲಾಗಿದೆ. 2023-24ರಲ್ಲಿ 290 ಪಾರ್ಕ್​ಗಳನ್ನು ಕಾಪಾಡುವ ಕೆಲಸವನ್ನು ಸಹ ಮಾಡುತ್ತಿದ್ದೇವೆ. ಈ ವರ್ಷ ಅವುಗಳನ್ನು 332ಕ್ಕೆ ಏರಿಸಿದ್ದೇವೆ. ಹಾಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವಂಥ ಕೆಲಸವನ್ನು ಸಹ ಮಾಡುತ್ತೇವೆ. ಹಾಗೂ ಇತ್ತೀಚೆಗೆ ಕೇಂದ್ರ ಸರ್ಕಾರದ ಅಮೃತ್ ಮಿತ್ರ ಯೋಜನೆ ಅಡಿಯಲ್ಲಿ ಸ್ತ್ರೀಶಕ್ತಿ ಸ್ವ–ಸಹಾಯ ಸಂಘಗಳನ್ನು ಅಳವಡಿಸಿಕೊಂಡು ಪಾರ್ಕಗಳನ್ನು ನಿಯಂತ್ರಿಸಬಹುದು. ಮತ್ತು ಇದರಲ್ಲಿ ಸುಮಾರು 10 ಪಾರ್ಕ್​ಗಳನ್ನು 6 ಪ್ಯಾಕೇಜ್​ಗಳನ್ನಾಗಿ ವಿಂಗಡಿಸಿ ಆರು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವಂತಹ ಕೆಲಸ ಮಾಡಲಾಗಿದೆ”.

ಸಂಘ ಸಂಸ್ಥೆಗಳ ಸಹಕಾರ: “ಹೆಚ್​ವಿ ರಾಜೀವ್​​ ಸ್ನೇಹ ಬಳಗ ಅವರ ವತಿಯಿಂದ ಪ್ರತಿ ವರ್ಷ ಗಿಡಗಳನ್ನು ಕೊಟ್ಟು ಸಹಕಾರ ಮಾಡಿದ್ದಾರೆ. ರಘುಲಾಲ ಮೆಡಿಕಲ್ಸ್​ ರೀ ಗಾರ್ಡ್ ಕೊಡುವಂತಹ ಒಂದು ಕೆಲಸ ಮಾಡುತ್ತಿದ್ದಾರೆ. ಹಾಗೂ ಟೊಯೋಟೊ ಕಿರ್ಲೋಸ್ಕರ್ ವತಿಯಿಂದ ಪ್ರತಿ ವರ್ಷ ಸಹಕಾರ ಮಾಡಲಾಗುತ್ತಿದೆ”.

ಸ್ವಚ್ಛ ಸರ್ವೇಕ್ಷಣ್​ನಲ್ಲಿ ನಮ್ಮ ಪಾತ್ರ: “ಈ ಬಾರಿಯ ಸ್ವಚ್ಛ ಸರ್ವೇಕ್ಷಣ್​ನಲ್ಲಿ Median beautification ಕೂಡ ಒಂದಾಗಿದೆ. ಇತ್ತೀಚಿಗೆ ಗಿಡಗಳನ್ನು ನೆಡುವುದರಿಂದ ನಮಗೆ ಪಾಯಿಂಟ್​ ಕೂಡ ಬಂದಿದೆ. ಏರ್​ ಕ್ವಾಲಿಟಿ ಇಂಡೆಕ್ಸ್ ಕೂಡ ಚೆನ್ನಾಗಿದೆ. ನಿಮಗೆ ತಿಳಿದಿರುವ ಹಾಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರತಿ ತಿಂಗಳು ನಗರಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
ಮೈಸೂರಿಗೆ ಮೊದಲ ಸ್ಥಾನ ವಾಯು ಗುಣಮಟ್ಟ ಸೂಚ್ಯಂಕ ಪ್ರಕಟ
Add as Preferred on Google Follow on Google News
Share. WhatsApp Facebook Twitter Telegram
Previous Articleಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಎಸ್ಐಟಿ ಅಧಿಕಾರಿಗಳು
Next Article ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

October 8, 2026

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

October 7, 2026

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

October 6, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಸಿಇಸಿ ವಿರುದ್ಧ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಆರೋಪ, ರಾಹುಲ್-ಪ್ರಿಯಾಂಕಾ ವಿರುದ್ಧ 3 ಎಫ್‌ಐಆರ್ ದಾಖಲು

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.