Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
ವರದಿ: ಪ್ರಿಯಲಚ್ಚಿ ಪಂಚಾಂಗ: 01-11-2025, ಶನಿವಾರ ಸಂವತ್ಸರ : ವಿಶ್ವವಸು ಆಯನ: ದಕ್ಷಿಣಾಯಣ ಮಾಸ : ಕಾರ್ತಿಕ ಪಕ್ಷ : ಶುಕ್ಲ ತಿಥಿ : ದಶಮಿ ನಕ್ಷತ್ರ : ಸ್ತಭಿಷ ಸೂರ್ಯೋದಯ : ಮುಂಜಾನೆ 06:12 ಗಂಟೆಗೆ ಅಮೃತಕಾಲ : ಮುಂಜಾನೆ 06:12 ರಿಂದ 07:39 ಗಂಟೆವರೆಗೆ ದುರ್ಮುಹೂರ್ತ : ಬೆಳಗ್ಗೆ 07:48 ರಿಂದ 08:36 ಗಂಟೆತನಕ ರಾಹುಕಾಲ : ಬೆಳಗ್ಗೆ 09:06 ರಿಂದ 10:34 ಗಂಟೆವರೆಗೆ ಸೂರ್ಯಾಸ್ತ : ಸಂಜೆ 05:50 ಗಂಟೆಗೆ ರಾಶಿ ಭವಿಷ್ಯ: ಮೇಷ : ನಿಮಗೆ ದೊಡ್ಡ ಮಿತ್ರವೃಂದವಿದೆ, ಮತ್ತು ಅವರಲ್ಲಿ ಬಹುತೇಕರು ಸಾಂದರ್ಭಿಕ ಮಿತ್ರರಾದರೂ, ಕೆಲವೊಮ್ಮೆ ಅವರು ಅನುಕೂಲಕರವಾಗುತ್ತಾರೆ. ಅವರು ಕೆಲ ತಿರಸ್ಕಾರಗಳಿಂದ ನೀವು ಹೊರಬರಲು ನೆರವಾಗಬಹುದು. ಇದು ಮಿತ್ರರು ವಹಿಸುವ ಪಾತ್ರ ಕುರಿತೂ ತಿಳಿಸುತ್ತದೆ. ವೃಷಭ : ನೀವು ಇಂದು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಭಾವನೆ ಅನುಭವಿಸುತ್ತೀರಿ. ನೀವು ಇದರ ಪರಿಣಾಮದಿಂದ ಪ್ರತಿಯೊಂದರ ಕುರಿತೂ ಮುಖ್ಯವಾಗಿ ಜನರ ಕುರಿತು ಅನುಮಾನ, ಅನಿಶ್ಚಿತತೆ ಮತ್ತು ಅಭದ್ರತೆಯ ಭಾವನೆ ಅನುಭವಿಸುತ್ತೀರಿ. ನೀವು ನಿಮಗೆ ಹತ್ತಿರವಾಗಿರುವವರ ಭಾವನೆಗಳು ಮತ್ತು ಉದ್ದೇಶಗಳನ್ನೂ…
ವರದಿ: ಪ್ರಿಯಲಚ್ಚಿ ನವೆಂಬರ್ ತಿಂಗಳು ಆರಂಭವಾಗಿದ್ದು, ಆಧಾರ್, ಬ್ಯಾಂಕಿಂಗ್, ಜಿಎಸ್‌ಟಿ ಮತ್ತು ಪಿಂಚಣಿಗೆ ಸಂಬಂಧಿಸಿದ 7 ಪ್ರಮುಖ ಹಣಕಾಸು ನಿಯಮಗಳು ಬದಲಾಗಿವೆ. ಮಕ್ಕಳ ಆಧಾರ್ ಅಪ್‌ಡೇಟ್ ಉಚಿತವಾಗಿದ್ದು, ಬ್ಯಾಂಕ್ ಖಾತೆಗಳಿಗೆ 4 ನಾಮಿನಿಗಳನ್ನು ಸೇರಿಸಬಹುದು. ಹೊಸ GST ಸ್ಲ್ಯಾಬ್‌ಗಳು ಜಾರಿಗೆ ಬಂದಿದ್ದು, ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಬದಲಾದ ನಿಯಮಗಳ ಮಾಹಿತಿ ಇಲ್ಲಿದೆ. ಆಧಾರ್ ಅಪ್‌ಡೇಟ್ ಶುಲ್ಕ ಪರಿಷ್ಕರಣೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅಪ್ಡೇಟ್ಗೆ 125 ರೂ. ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತ ಇರಲಿದೆ. ವಯಸ್ಕರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ. ಇರಲಿದ್ದು, ಫಿಂಗರ್‌ಪ್ರಿಂಟ್‌ಗಳು ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಅಪ್ಡೇಟ್ಗೆ 125 ರೂ. ನಿಗದಿಪಡಿಸಲಾಗಿದೆ. ಪರಿಷ್ಕೃತ ನಿಯಮದ ಪ್ರಕಾರ, ಯಾವುದೇ ಸಪೋರ್ಟಿಂಗ್ ಡಾಕ್ಯುಮೆಂಟ್ಗಳನ್ನು ಸಲ್ಲಿಸದೆ ಆಧಾರ್ ವಿಳಾಸ, ಜನ್ಮ ದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ…
ವರದಿ: ಪ್ರಿಯಲಚ್ಚಿ ಬೆಂಗಳೂರು: ಸಾಮಾನ್ಯವಾಗಿ ಅಂಗಾಂಗಳನ್ನು ಆ್ಯಂಬುಲೆನ್ಸ್ ಮೂಲಕವೇ ಸಾಗಣೆ ಮಾಡುವುದುಂಟು. ಆದರೆ, ಇತ್ತೀಚಿನ ಸಂಚಾರ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್ ಗಳೂ ರಸ್ತೆಯಲ್ಲಿ ಶೀಘ್ರಗತಿಯಲ್ಲಿ ಸಂಚಾರ ನಡೆಸುವುದು ಕಷ್ಟಕರವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ನಮ್ಮ ಮೆಟ್ರೋ ಸೌಕರ್ಯ ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಂತೆ ಗುರುವಾರ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಹೃದಯ ಮತ್ತು ಶ್ವಾಸಕೋಶ ಸಾಗಣೆ ಮಾಡಲಾಗಿದೆ. ಇದರಿಂದ ಜೀವವೊಂದು ಉಳಿದಂತಾಗಿದೆ. ಒಂದು ಶ್ವಾಸಕೋಶ ಮತ್ತು ಹೃದಯವನ್ನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲೇ ಕೊಂಡೊಯ್ಯಲಾಗಿದೆ. ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಮೆಟ್ರೋ ರೈಲಿನ ಒಂದು ಭೋಗಿಯಲ್ಲಿ ಶ್ವಾಸಕೋಶ-ಹೃದಯ ತುಂಬಿದ ವೈದ್ಯಕೀಯ ಬಾಕ್ಸ್ ಇಟ್ಟುಕೊಂಡು, ಆಸ್ಪತ್ರೆಯ ಸಿಬ್ಬಂದಿ ಸಂಚರಿಸಿದ್ದಾರೆ.ಎರಡು ಆಸ್ಪತ್ರೆಗಳ ನಡುವಿನ ಸುಮಾರು 30-33 ಕಿಮೀ ದೂರವನ್ನ ಕೇವಲ 61 ನಿಮಿಷದಲ್ಲಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಶ್ವಾಸಕೋಶ ಕಸಿ ಮಾಡುವ ಐವರು ಸಿಬ್ಬಂದಿಯೊಂದಿಗೆ BMRCL ಹೋಮ್ ಗಾರ್ಡ್‌ಗಳೂ ಇದ್ದರು. ಏತನ್ಮಧ್ಯೆ ಸಮನ್ವಯ ಮತ್ತು…
ಬೆಂಗಳೂರು: ರಾಜ್ಯ ಸರ್ಕಾರ ಸೆಪ್ಟೆಂಬರ್ 22ರಿಂದ ಆರಂಭಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(“ಜಾತಿ ಗಣತಿ” ಎಂದೇ ವ್ಯಾಪಕವಾಗಿ ಕರೆಯಲಾಗುತ್ತಿದೆ)ಯ ಮನೆ ಮನೆ ಗಣತಿ ಶುಕ್ರವಾರ ಮುಕ್ತಾಯವಾಗಿದ್ದು, ಆನ್‌ಲೈನ್ ಮೂಲಕ ಮಾಹಿತಿ ಒದಗಿಸಲು ನವೆಂಬರ್ ೧೦ ರವರೆಗೂ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಈವರೆಗೆ ಶೇ.97.51(ಜಿಬಿಎ ಹೊರತುಪಡಿಸಿ)ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ. ರಾಜ್ಯದ ಜನಸಂಖ್ಯೆ 6.85 ಕೋಟಿಗೆ ಹೆಚ್ಚಳ ರಾಜ್ಯಾದ್ಯಂತ ಇದುವರೆಗೆ 6,13,83,908 ಜನರನ್ನು ಈ ಸಮೀಕ್ಷೆ ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ. ಆಯೋಗವು ಹಂಚಿಕೊಂಡ ಸಂಕ್ಷಿಪ್ತ ಮಾಹಿತಿಯ ಪ್ರಕಾರ, ಕರ್ನಾಟಕದ ಅಂದಾಜು ಜನಸಂಖ್ಯೆ 6,85,38,000 ಆಗಿದ್ದರೆ, ಅಕ್ಟೋಬರ್ 31ರ ವೇಳೆಗೆ ಸಮೀಕ್ಷೆ ಮಾಡಲಾದ ಜನಸಂಖ್ಯೆ 6,13,83,908 ಆಗಿದೆ. ಒಟ್ಟು 4,22,258 ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, 34,49,681 ಮನೆಗಳು ಖಾಲಿ ಇದ್ದು ಅಥವಾ ಬೀಗ ಹಾಕಲ್ಪಟ್ಟಿವೆ ಎಂದು ಆಯೋಗ ತಿಳಿಸಿದೆ. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು…
ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರಕಟಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರಿನ ಪೌರ ಕಾರ್ಮಿಕರಾದ ಫಕ್ಕೀರಿ, ಬಹುಭಾಷಾ ನಟ ಪ್ರಕಾಶ್ ರಾಜ್, ನಿವೃತ್ತ ಐಐಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ 70 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಮಾತನಾಡಿ, “ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ, ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2,116 ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿ ಪ್ರಶಸ್ತಿಗೆ ಅರ್ಹರಿದ್ದವರನ್ನು ಆಯ್ಕೆ ಮಾಡಲಾಗಿದೆ. ಅರ್ಜಿ ಹಾಕದ ಶೇ.80ರಷ್ಟು ಸಾಧಕರನ್ನು ಗುರುತಿಸಲಾಗಿದೆ” ಎಂದರು. “ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಆಯ್ಕೆ ನಡೆದಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದವರನ್ನು ಬಹುತೇಕ ಆಯ್ಕೆ ಮಾಡಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿದ್ದೇವೆ. ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ ಮಹಿಳೆಯರನ್ನು…
ಬೆಂಗಳೂರು: ತಮ್ಮನ್ನು ಮೊದಲ ದರ್ಜೆಯ ಮುಠ್ಠಾಳ ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ಮೂರನೇ ದರ್ಜೆ ವಂಚಕ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮತಿ ದೊರೆತ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ವೈಯಕ್ತಿಕ ನಿಂದನೆಗೆ ಇಳಿಯುವವರೆಗೆ ತಲುಪಿದೆ. ದೊಡ್ಡ ಕೈಗಾರಿಕೆಗಳ ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭೆಗಳ ಕೊರೆತೆಯಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಸ್ವಾ, ಪ್ರಿಯಾಂಕ್ ಅವರನ್ನು ‘ಫಸ್ಟ್ ಕ್ಲಾಸ್ ಮುಠ್ಠಾಳ’ ಎಂದು ಕರೆದಿದ್ದರು. ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಅಸ್ಸಾಂ ಸಿಎಂ ಒಬ್ಬ ‘ಮೂರನೇ ದರ್ಜೆ ವಂಚಕ’ ಎಂದು ಲೇವಡಿ ಮಾಡಿದ್ದಾರೆ. ಬಿಸ್ವಾ ಅವರ ಭಾಷೆ ಅವರ ಹತಾಶೆಯನ್ನು ತೋರಿಸುತ್ತದೆ. ಇದು ಅವರ ವರ್ಗದ ವಿಶೇಷ ಹಕ್ಕು ಮತ್ತು ಅವರು ಅಧಿಕಾರದಲ್ಲಿರುವುದರಿಂದ ಪಡೆದ ವಿಶೇಷ ಹಕ್ಕನ್ನು ತೋರಿಸುತ್ತದೆ. ಇಲ್ಲದಿದ್ದರೆ, ಇದರಲ್ಲಿ ಏನೂ ಇಲ್ಲ, ಮೂರನೇ ದರ್ಜೆಯ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಬಹುದು…
Subscribe to Updates
Get the latest creative news from FooBar about art, design and business.