Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ವಿಧಾನಸೌಧಕ್ಕೆ ಮತ್ತೆ ವಾಪಸ್ ಬರೋದು ಭಗವಂತ ಇಚ್ಛೆ ಮತ್ತು ಜನರ ಆಶೀರ್ವಾದದಿಂದ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು. ಎರಡು ವರ್ಷಗಳ ಬಳಿಕ ಕೈಗಾರಿಕಾ ಸಚಿವರ ಜೊತೆ ಸಭೆ ನಡೆಸಲು ವಿಧಾನಸೌಧಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು, ಯಾವಾಗ ವಿಧಾನಸೌಧಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ವಿಧಾನಸೌಧಕ್ಕೆ ಮತ್ತೆ ಬರೋದು ಅದೆಲ್ಲವನ್ನು ಭಗವಂತ ನಿಗದಿ ಮಾಡುತ್ತಾನೆ. ರಾಜ್ಯದ ಜನತೆ ಆಶೀರ್ವಾದದ ಜೊತೆಗೆ ಭಗವಂತ ನಮ್ಮ ಹಣೆಯಲ್ಲಿ ಬರೆದಿರುತ್ತಾನೆ. ಅದರ ಪ್ರಕಾರ ನಾವು ಕೆಲಸವನ್ನು ನಿರ್ವಹಣೆ ಮಾಡಬೇಕಾಗುತ್ತದೆ. ನೋಡೋಣ ಮುಂದಿನ ದಿನಗಳಲ್ಲಿ ಭಗವಂತ ಇಚ್ಛೆ ಏನಿದೆ ಎಂದರು. ನಾವು ಮೈತ್ರಿ ಪಕ್ಷದ ಹೊಂದಾಣಿಕೆಯಲ್ಲಿ ಇದ್ದೇವೆ. ದೆಹಲಿ ಬಿಜೆಪಿ ಹೈಕಮಾಂಡ್ ನಾಯಕರು, ರಾಜ್ಯ ನಾಯಕರು ನಾವೆಲ್ಲ ಜೊತೆಗೂಡಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬರೋದಕ್ಕೆ ಜನತೆ ಆಶೀರ್ವಾದದಿಂದ ಪ್ರಯತ್ನ ಪಡುತ್ತೇವೆ ಎಂದರು. 2028 ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಹಾಗೂ ವಿಧಾನಸೌಧಕ್ಕೆ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಸಂಪುಟ ಪುನಾರಚನೆ ಮತ್ತು ಮಂತ್ರಿ ಸ್ಥಾನಕ್ಕೆ ದೆಹಲಿಗೆ ತೆರಳಿರುವ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಾಕ್ ನೀಡಿದ್ದು, ಅನಾವಶ್ಯಕ ಗೊಂದಲ ಸೃಷ್ಟಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ಸಂಪುಟ ಪುನಾರಚನೆ ಮಾಡಬೇಕು ಮತ್ತು ಬೇರೆ ಶಾಸಕರಿಗೂ ಮಂತ್ರಿಯಾಗುವ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನ ಕೆಲ ಶಾಸಕರ ಗುಂಪು ದೆಹಲಿಗೆ ಹಾರಿದೆ. ಮಾಜಿ ಸಚಿವ ಟಿಬಿ ಜಯಚಂದ್ರ, ಅಶೋಕ್ ಪಠಾಣ್, ಎಸ್.ನಾರಾಯಣಸ್ವಾಮಿ, ಮತ್ತು ಕೆ.ಷಡಕ್ಷರಿ ಸೇರಿದಂತೆ ಹಲವು ಶಾಸಕರು ದೆಹಲಿಗೆ ಹೋಗಿದ್ದು ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿದ್ದ ಟಿಬಿ ಜಯಚಂದ್ರ ಅವರು, ‘ಇದು ನನಗೆ ನಿತ್ಯದ ಕೆಲಸ. ನಾನು ದೆಹಲಿಯಲ್ಲಿ ರಾಜ್ಯ ಪ್ರತಿನಿಧಿ. ವಿಧಾನಸಭಾ ಚುನಾವಣೆಯ ನಂತರ ನಾನು ಇಲ್ಲಿದ್ದೇನೆ. ಈಗ, ಇಂದು ನಾನು ಮಾತ್ರ ಬಂದಿದ್ದೇನೆ. ಅನೇಕ ಶಾಸಕರು ಸಹ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೀದರ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಹಾಯಕ ಸ್ಥಾನಿಕ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರಾಮು ಪಾಟೀಲ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಜಿಲ್ಲಾ ಘಟಕವು ಬೀದರ್ ನ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ 40ನೇ ರಾಜ್ಯ ಸಮ್ಮೇಳನದಲ್ಲಿ ಲೋಕನಾಯಕ ಭೀಮಣ್ಣ ಖಂಡ್ರೆ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಾಗಿ ರಾಮು ಪಾಟೀಲ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 25 ವರ್ಷಗಳಿಗಿಂತ ಹೆಚ್ಚು ಕಾಲದಿಂದ ತಮ್ಮ ಪತ್ರಕರ್ತ ವೃತ್ತಿಜೀವನದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ವಿಷಯಗಳ ಕುರಿತು ಹಲವು ಪರಿಣಾಮಕಾರಿ ಲೇಖನಗಳನ್ನು ಅವರು ಬರೆದಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೀದರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಕಾರ್ಯಕ್ರಮ ಆಯೋಜನೆಯಲ್ಲಿ ಶ್ರಮಿಸಿದವರನ್ನೂ ಸನ್ಮಾನಿಸಿದರು. ಜೊತೆಗೆ, ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಛಾಯಾಚಿತ್ರ ಮತ್ತು ಕಾರ್ಟೂನ್ ಪ್ರದರ್ಶನವನ್ನು ಹಾಗೂ ಮಾಧ್ಯಮ ಮಳಿಗೆಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹರಕುಡ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಮುಂಬೈ: ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಭಾನುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದಾಗಿ ಏಪ್ರಿಲ್ 11ರ ಶನಿವಾರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿಗೆ ಕಾರಣ ದೃಢಪಡಿಸಿದ ವೈದ್ಯರು ಹಿರಿಯ ಗಾಯಕಿ ಬಹು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು ಎಂದು ವೈದ್ಯರಾದ ಪ್ರತೀತ್ ಸಮದಾನಿ ದೃಢಪಡಿಸಿದರು. ‘ಆಶಾ ಭೋಸ್ಲೆ ಇಂದು ನಿಧನರಾದರು ಎಂಬುದು ದುಃಖಕರ ಸುದ್ದಿ. ಅವರು ಬಹು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು…’ ಎಂದು ಅವರು ಹೇಳಿದರು. ಅವರ ನಿಧನದ ಸುದ್ದಿಯನ್ನು ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಆಶಿಶ್ ಶೇಲಾರ್ ಅವರು ಆಸ್ಪತ್ರೆಯ ಹೊರಗೆ ಪ್ರಕಟಿಸಿದರು. ಸೋಮವಾರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಆಶಾ ಭೋಸ್ಲೆ ಅವರ ಪುತ್ರ ಆನಂದ್ ಭೋಸ್ಲೆ ಕೂಡ ಈ ಸುದ್ದಿಯನ್ನು ದೃಢಪಡಿಸಿದ್ದು, ಅಂತಿಮ ನಮನ ಸಲ್ಲಿಸುವ ಬಗ್ಗೆ ವಿವರಗಳನ್ನು…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಚಿಕ್ಕಮಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಎನ್.ಆರ್.ಪುರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು.‌ ಈಗ ನನ್ನ ಅವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದರು. ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನ ಸಂಪುಟ ಪುನರ್ರಚನೆ ವಿಳಂಬಕ್ಕೆ ಕಾರಣವಿರಬಹುದುಎಂದರು. ಅರಣ್ಯ ಹಕ್ಕುಪತ್ರಕ್ಕೆ ಸಭೆ ಮಲೆನಾಡಿನಲ್ಲಿ ರೆಸಾರ್ಟ್ ಗಳಿಗೆ ಬೇಕಾಬಿಟ್ಟಿಯಾಗಿ ಅನುಮತಿ ನೀಡುತ್ತಿರುವ ಸರ್ಕಾರ, ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅರಣ್ಯ ಇಲಾಖೆಯಿಂದ ಹಕ್ಕು ಪತ್ರ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಟೆಲ್ ಅವೀವ್: ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ಮಾಡಿರದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಅದು ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆಯಲ್ಲಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ‘ಇರಾನ್ “ಪರಮಾಣು ಶಸ್ತ್ರಾಸ್ತ್ರವನ್ನು ಸಾಧಿಸಲು ಬಹಳ ಹತ್ತಿರದಲ್ಲಿದೆ” ಮತ್ತು ಸಾವಿರಾರು ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆಯುತ್ತಿದ್ದ ಕಾರಣ ಫೆಬ್ರವರಿಯಲ್ಲಿ ಇಸ್ರೇಲ್ ಜೊತೆ ಯುದ್ಧ ಮಾಡಲು ನಿರ್ಧರಿಸಿತು ಎಂದು ಹೇಳಿದ್ದಾರೆ. ಅಂತೆಯೇ ಕಳೆದ ವರ್ಷದಲ್ಲಿ ಇಸ್ರೇಲ್ ಎರಡು ಬಾರಿ ಇರಾನ್ ಮೇಲೆ ದಾಳಿ ಮಾಡಿರದಿದ್ದರೆ, ಇಸ್ಲಾಮಿಕ್ ಗಣರಾಜ್ಯವು “ಈಗಾಗಲೇ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುತ್ತಿತ್ತು”. ಕಳೆದ ವರ್ಷ ಇರಾನ್ ತನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ಪರಮಾಣು ಶಸ್ತ್ರಾಸ್ತ್ರವನ್ನಾಗಿ ಪರಿವರ್ತಿಸಲು ಇರಾನ್ ತಯಾರಿ ನಡೆಸುತ್ತಿದೆ ಎಂದು ಇಸ್ರೇಲ್‌ಗೆ ಗುಪ್ತಚರ ಮಾಹಿತಿ ಇತ್ತು. ನಾವು ಆ ಗುಪ್ತಚರ ಮಾಹಿತಿಯನ್ನು ಸ್ವೀಕರಿಸಿದ ಕ್ಷಣ, ಕಾರ್ಯಾಚರಣೆಗೆ ಇಳಿದಿದ್ದೇವೆ” ಎಂದು ನೇತನ್ಯಾಹು ಹೇಳಿದರು. ಕೆಲವೇ ತಿಂಗಳುಗಳ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಇಂದಿನ ಪಂಚಾಂಗ ದಿನಾಂಕ : 13-04-2026 ವಾರ : ಸೋಮವಾರ ಸಂವತ್ಸರ : ಶ್ರೀ ಪರಾಭವ ನಾಮ ಆಯನ : ಉತ್ತರಾಯಣ ಪಕ್ಷ : ಕೃಷ್ಣ ತಿಥಿ : ಏಕಾದಶಿ ನಕ್ಷತ್ರ : ಧನಿಷ್ಠ ಸೂರ್ಯೋದಯ : ಮುಂಜಾನೆ 06:06 ಗಂಟೆಗೆ ಅಮೃತ ಕಾಲ : ಮುಂಜಾನೆ 07:39 ರಿಂದ 09:12 ರವರೆಗೆ ದುರ್ಮುಹೂರ್ತ : ಮಧ್ಯಾಹ್ನ 12:30 ರಿಂದ 01:18 ರವರೆಗೆ ಹಾಗೂ ಮಧ್ಯಾಹ್ನ 02:54 ರಿಂದ 03:42ರ ತನಕ ರಾಹುಕಾಲ : ಮಧ್ಯಾಹ್ನ 01:51 ರಿಂದ 03:24 ರವರೆಗೆ ಸೂರ್ಯಾಸ್ತ : ಸಂಜೆ 06:31:00 ಗಂಟೆಗೆ ಇಂದಿನ ಭವಿಷ್ಯ ಮೇಷ : ನಿಮಗೆ ದೊಡ್ಡ ಮಿತ್ರವೃಂದವಿದೆ ಮತ್ತು ಅವರಲ್ಲಿ ಬಹುತೇಕರು ಸಾಂದರ್ಭಿಕ ಮಿತ್ರರಾದರೂ, ಕೆಲವೊಮ್ಮೆ ಅವರು ಅನುಕೂಲಕರವಾಗುತ್ತಾರೆ. ಅವರು ಕೆಲ ತಿರಸ್ಕಾರಗಳಿಂದ ನೀವು ಹೊರಬರಲು ನೆರವಾಗಬಹುದು. ಇದು ಮಿತ್ರರು ವಹಿಸುವ ಪಾತ್ರ ಕುರಿತೂ ತಿಳಿಸುತ್ತದೆ. ವೃಷಭ : ನೀವು ಇಂದು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಭಾವನೆ ಅನುಭವಿಸುತ್ತೀರಿ. ನೀವು ಇದರ ಪರಿಣಾಮದಿಂದ ಪ್ರತಿಯೊಂದರ ಕುರಿತೂ ಮುಖ್ಯವಾಗಿ ಜನರ ಕುರಿತು…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಪ್ರಕಟಣೆ ನೀಡಿದ್ದು, ಇರಾನ್‌ನ ಅಣುಕಾರ್ಯಕ್ರಮದ ಬಗ್ಗೆ ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ, ಹೋರ್ಮುಜ್ ಜಲಸಂಧಿಗೆ ಪ್ರವೇಶಿಸುವ ಅಥವಾ ಅಲ್ಲಿಂದ ಹೊರಡುವ ಹಡಗುಗಳನ್ನು ಅಮೆರಿಕ ನೌಕಾಪಡೆ ತಡೆಹಿಡಿಯುವ ಕಾರ್ಯವನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ಅವರು ‘ಟ್ರೂತ್ ಸೋಶಿಯಲ್’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಇತ್ತೀಚಿನ ಮಾತುಕತೆಯಲ್ಲಿ ಬಹುತೇಕ ವಿಷಯಗಳು ಬಗೆಹರಿದಿದ್ದರೂ, “ನಿಜವಾಗಿ ಮುಖ್ಯವಾಗಿದ್ದ ಅಣ್ವಸ್ತ್ರ ಸಂಬಂಧಿತ ವಿಷಯ ಮಾತ್ರ ಬಗೆಹರಿಯಲಿಲ್ಲ” ಎಂದು ಹೇಳಿದ್ದಾರೆ. ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಸಮುದ್ರ ಸ್ಫೋಟಕಗಳನ್ನು (ಮೈನ್ಸ್) ಅಳವಡಿಸಿರಬಹುದೆಂಬ ಸೂಚನೆ ನೀಡಿ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದು, ಇದನ್ನು “ವಿಶ್ವದ ಮೇಲೆ ನಡೆಯುತ್ತಿರುವ ಬಲವಂತದ ವಸೂಲಿ” ಎಂದು ವರ್ಣಿಸಿದ್ದಾರೆ. “ಇರಾನ್‌ಗೆ ಶುಲ್ಕ ಪಾವತಿಸಿರುವ ಪ್ರತಿಯೊಂದು ಹಡಗನ್ನೂ ಅಂತರರಾಷ್ಟ್ರೀಯ ನೀರಿನಲ್ಲಿ ಪತ್ತೆಹಚ್ಚಿ ತಡೆದು ಪರಿಶೀಲಿಸಲು ನಮ್ಮ ನೌಕಾಪಡೆಗೆ ನಾನು ಆದೇಶಿಸಿದ್ದೇನೆ. ಅನಧಿಕೃತ ಶುಲ್ಕವನ್ನು ಪಾವತಿಸಿದ ಯಾರಿಗೂ ಮುಕ್ತ ಸಮುದ್ರದಲ್ಲಿ ಸುರಕ್ಷಿತ ಸಂಚಾರದ ಹಕ್ಕು ಇರುವುದಿಲ್ಲ. ಇರಾನ್…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಶಾಂತಿ ಮಾತುಕತೆಗಳ ಮಧ್ಯೆ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿತ್ತು. ಯುಎಸ್ Destroyer ನೌಕೆ ಹಾರ್ಮುಜ್ ಕಡೆಗೆ ಹೋಗುತ್ತಿತ್ತು. ಆದರೆ ಇರಾನಿನ ಎಚ್ಚರಿಕೆಯ ನಂತರ ಹಿಂತಿರುಗಬೇಕಾಯಿತು. ಇರಾನ್ ಯುಎಸ್ ಯುದ್ಧನೌಕೆಗೆ 30 ನಿಮಿಷಗಳಲ್ಲಿ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ. ನಂತರ ಯುದ್ಧನೌಕೆ ತನ್ನ ಮಾರ್ಗವನ್ನು ಬದಲಾಯಿಸಿದೆ ಎಂದು ಇರಾನ್ ವರದಿ ಮಾಡಿದೆ. ಯುಎಸ್ ಯುದ್ಧನೌಕೆ ಮತ್ತಷ್ಟು ಮುಂದುವರಿದರೆ, ಅದನ್ನು 30 ನಿಮಿಷಗಳಲ್ಲಿ ಗುರಿಯಾಗಿಸಲಾಗುವುದು ಮತ್ತು ಇದು ಮಾತುಕತೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಇರಾನ್ ಪಾಕಿಸ್ತಾನಿ ಮಧ್ಯವರ್ತಿಗಳಿಗೆ ತಿಳಿಸಿದೆ. ಇರಾನ್ ಯಾವುದೇ ಯುಎಸ್ ಹಡಗು ಹಾರ್ಮುಜ್ ಜಲಸಂಧಿಗೆ ಹೋಗಿಲ್ಲ ಎಂದು ಹೇಳಿಕೊಂಡಿದೆ. ಹಿರಿಯ ಮಿಲಿಟರಿ ಅಧಿಕಾರಿಯನ್ನು ಉಲ್ಲೇಖಿಸಿ ಇರಾನ್‌ನ ರಾಜ್ಯ ಪ್ರಸಾರಕ ಈ ಹೇಳಿಕೆಯನ್ನು ನೀಡಿದೆ. ಹಲವಾರು ಯುಎಸ್ ನೌಕಾ ಹಡಗುಗಳು ಈ ಮಾರ್ಗದ ಮೂಲಕ ಹಾದು ಹೋಗಿವೆ ಎಂದು ಹಲವಾರು ಯುಎಸ್ ವರದಿಗಳು ಹೇಳಿರುವ ಸಮಯದಲ್ಲಿ ಇರಾನ್ ಹೇಳಿಕೆ ಬಂದಿದೆ. ಅಮೆರಿಕ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕೂಗು ಕೇಳಿಬರುತ್ತಿದೆ. ಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯ ಶಾಸಕರು ದೆಹಲಿ ಪರೇಡ್​​​​ ನಡೆಸಲು ಮುಂದಾಗಿದ್ದಾರೆ. ಎ. 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್​​​​ ಅವರು ಕಾಂಗ್ರೆಸ್​​​ ವರಿಷ್ಠರನ್ನು ಭೇಟಿ ಆಗಲಿದ್ದಾರೆ. ಈ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ‌. ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದಿಂದ ತೆರವಾಗಲಿರುವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕೆಂದು ಕೋರಿ ಸುಮಾರು 40 ಮಂದಿ ಹಿರಿಯ ಶಾಸಕರು ದೆಹಲಿ ಪ್ರಯಾಣಕ್ಕೆ ಮುಂದಾಗಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹಾಗೂ ಅಶೋಕ್​​ ಪಟ್ಟಣ್​​ ಅವರ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಈ ನಿಯೋಗ ವರಿಷ್ಠರನ್ನು ಭೇಟಿ ಮಾಡಲಿದೆ. ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಟಿ. ಬಿ. ಜಯಚಂದ್ರ ಅವರು, ಅಧಿವೇಶನ…

Read More