Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ E20 Petrol Across India: ಎಪ್ರಿಲ್ 1ರಿಂದ ದೇಶಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ 20 ಪ್ರತಿಶತ ಎಥೆನಾಲ್ ಹೊಂದಿರುವ ಮಿಶ್ರಣವಾದ E20 ಪೆಟ್ರೋಲ್ ಮಾರಾಟ ಕಡ್ಡಾಯವಾಗಿದೆ. ಈ ನಿರ್ಧಾರದ ಹಿಂದಿನ ಉದ್ದೇಶವೆಂದರೆ ಕಚ್ಚಾ ತೈಲ ಬಳಕೆ ಮತ್ತು ಆಮದುಗಳನ್ನು ಕಡಿಮೆ ಮಾಡುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಮಾಲಿನ್ಯವನ್ನು ತಡೆಯುವುದಾಗಿದೆ. ಆದರೆ ಈ ಬದಲಾವಣೆಯ ಪರಿಣಾಮವು 2023 ಕ್ಕಿಂತ ಮೊದಲು ತಯಾರಿಸಿದ ಹಳೆಯ ವಾಹನಗಳನ್ನು ಹೊಂದಿರುವವರು ಹೆಚ್ಚು ಅನುಭವಿಸುತ್ತಾರೆ. E20 ಪೆಟ್ರೋಲ್ ಹಳೆಯ ವಾಹನಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಸಂಭಾವ್ಯ ಅನಾನುಕೂಲಗಳನ್ನು ನೀವು ಹೇಗೆ ತಗ್ಗಿಸಬಹುದು ಎಂಬುದನ್ನು ಇಲ್ಲಿ ತಿಳಿಯೋಣ.. ಭಾರತದ ಇಂಧನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಬರಲಿದೆ. ಪರಿಸರವನ್ನು ರಕ್ಷಿಸುವ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೈಲದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಎಪ್ರಿಲ್ 1(ಬುಧವಾರ) ರಿಂದ ದೇಶದ ಎಲ್ಲಾ ಭಾಗಗಳಲ್ಲಿ 95 RON (ರಿಸರ್ಚ್…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದ ಬಿಕ್ಕಟ್ಟಿನ ನಡುವೆಯೇ ದೇಶದ ಸ್ಥಿತಿಗತಿಗಳನ್ನು ಸಮತೋಲನದಲ್ಲಿಡಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಮಹತ್ವದ ಸಭೆ ನಡೆಸಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಬಳಿಕ ಪ್ರಧಾನಿ ಮೋದಿಯವರು ಸಚಿವರೊಂದಿಗೆ ಬುಧವಾರ ಸಭೆ ನಡೆಸಿದ್ದು, ಜನಸಾಮಾನ್ಯರಿಗೆ ಯಾವುದೇ ರೀತಿಯ ಹೊರೆ ಅಥವಾ ತೊಂದರೆ ಆಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಸಚಿವಾಲಯಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ತೈಲ ಹಾಗೂ ಅನಿಲ ಸರಬರಾಜಿನ ಅನಿಶ್ಚಿತತೆ, ಸಾಗಣೆ ವ್ಯತ್ಯಯಗಳು ಹಾಗೂ ಬೆಲೆ ಏರಿಳಿತದ ಪರಿಣಾಮಗಳು ಭಾರತದಲ್ಲಿ ಹೇಗೆ ಪ್ರತಿಫಲಿಸಬಹುದು ಎಂಬುದರ ಕುರಿತು ಸಮಗ್ರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ, ಸಭೆಯಲ್ಲಿ ದೇಶದಲ್ಲಿ ಇಂಧನ ಭದ್ರತೆ ಕಾಪಾಡುವುದು ಅತ್ಯಂತ ಪ್ರಮುಖ ಎಂದು ಒತ್ತಿ ಹೇಳಿರುವ ಪ್ರಧಾನಮಂತ್ರಿಗಳು, ಎಲ್ಪಿಜಿ ಮತ್ತು ಎಲ್ಎನ್ಜಿ ಪೂರೈಕೆ ನಿರಂತರವಾಗಿರಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ,…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ಕರ್ನಾಟಕ ಸರ್ಕಾರದ ನಿರ್ಧಾರ ಎಸ್ಎಸ್ಎಲ್ಸಿ (SSLC) ತೃತೀಯ ಭಾಷಾ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ತೀರ್ಮಾನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಕೊನೆಯ ಹಂತದಲ್ಲಿಯೇ ಈ ದಿಢೀರ್ ಆಗಿ ನಿರ್ಧಾರ ಘೋಷಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಬೆಂಗಳೂರಿನ ನಿವಾಸಿಗಳಾದ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಸಲ್ಲಿಸಿರುವ ಈ ಅರ್ಜಿಯಲ್ಲಿ, ಸರ್ಕಾರದ ನಡೆಯನ್ನು ‘ಅಸಂವಿಧಾನಿಕ’ ಎಂದು ಆಕ್ಷೇಪಿಸಿದ್ದಾರೆ. ಯಾವುದೇ ಒಂದು ದೊಡ್ಡ ಶೈಕ್ಷಣಿಕ ಬದಲಾವಣೆ ಮಾಡುವ ಮುನ್ನ ಸಾರ್ವಜನಿಕರ ಅಥವಾ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುವುದು ಅತ್ಯಗತ್ಯ. ಆದರೆ, ಈ ವಿಷಯದಲ್ಲಿ ಸರ್ಕಾರ ಅಂತಹ ಯಾವುದೇ ಪ್ರಕ್ರಿಯೆ ನಡೆಸದೆ, ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನಿಸಿದೆ ಎಂಬುದು ಅರ್ಜಿದಾರರು…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ವಿಧಿ ವಿಧಾನದಂತೆ ರುದ್ರಾಕ್ಷಿ ಮಂಟಪದಲ್ಲಿ ಸ್ವಾಮೀಜಿಯವರ ಪ್ರತಿಮೆಯನ್ನು ಇರಿಸಿ ಮೆರವಣಿಗೆ ಮಾಡಲಾಯಿತು. ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮೆರವಣಿಗೆಯಲ್ಲಿ 15ಕ್ಕೂ ಹೆಚ್ಚು ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. 108 ಕಳಸಗಳನ್ನು ಹೊತ್ತ ಮಹಿಳೆಯರು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದು, ಮಠದಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಯಂತಿ ಹಿನ್ನೆಲೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯನ್ನು 108 ಪುಷ್ಪಗಳಿಂದ ಅಲಂಕರಿಸಲಾಗಿದೆ. ಗಣ್ಯರಿಂದ ನಮನ: ಶ್ರೀಗಳ ಜನ್ಮ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಹೆಚ್ ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಎಕ್ಸ್ ಖಾತೆಯಲ್ಲಿ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಟೆಹರಾನ್: ಇರಾನ್ನ ನೂತನ ಸರ್ವೋಚ್ಚ ನಾಯಕರಾಗಿ ಮೊಜ್ತಾಬಾ ಖಮೇನಿ ನೇಮಕವಾಗಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿಲ್ಲ. ಅಂದಿನಿಂದ ಅನೇಕ ಸಾರ್ವಜನಿಕ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ರಾಷ್ಟ್ರೀಯ tv ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ಎಲ್ಲಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಅವರ ಆರೋಗ್ಯ ಮತ್ತು ಎಲ್ಲಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದೆ. ಈ ಊಹಾಪೋಹಗಳಿಗೆ ತೆರೆ ಎಳೆದಿರುವ ರಷ್ಯಾದ ರಾಯಭಾರಿಯೊಬ್ಬರು, ಮೊಜ್ತಾಬಾ ಖಮೇನಿ ಇರಾನ್ನಲ್ಲಿದ್ದಾರೆ ಎಂದು ಹೇಳಿದ್ದಾರೆ. ಮೊಜ್ತಾಬಾ ಖಮೇನಿ ಇರಾನ್ ನಲ್ಲಿಯೇ ಇದ್ದಾರೆ. ಆದರೆ ಅರ್ಥವಾಗುವ ಕಾರಣಗಳಿಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಇರಾನ್ನ ರಷ್ಯಾದ ರಾಯಭಾರಿ ಅಲೆಕ್ಸಿ ಡೆಡೋವ್ RTVI ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಯುದ್ಧದ ಆರಂಭದಲ್ಲಿ ಫೆಬ್ರವರಿ 28 ರಂದು ಯುಎಸ್-ಇಸ್ರೇಲಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಖಮೇನಿ ಅವರನ್ನು ಇರಾನ್ ನ ಸುಪ್ರೀಂ ಲೀಡರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಅವರು ಕೂಡಾ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನವದೆಹಲಿ: ವಿಮಾನ ಟರ್ಬೈನ್ ಇಂಧನ (ATF) ಅಂದರೆ ಜೆಟ್ ಇಂಧನದ ಬೆಲೆ ಇಂದು ಬುಧವಾರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿ, ಪ್ರತಿ ಕಿಲೋ ಲಿಟರ್ಗೆ 2.07 ಲಕ್ಷ ರೂಪಾಯಿಗೆ ತಲುಪಿದೆ. ಆದರೆ ದೇಶೀಯ ವಿಮಾನಯಾನ ಸಂಸ್ಥೆಗಳು ಈ ಭಾರೀ ಏರಿಕೆಯನ್ನು ನೇರವಾಗಿ ಹೊರುವ ಅವಶ್ಯಕತೆ ಇಲ್ಲದಂತೆ ಒಂದು ವ್ಯವಸ್ಥೆ ರೂಪಿಸುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ವಾಣಿಜ್ಯ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 195.50 ರೂಪಾಯಿ ಹೆಚ್ಚಿಸಲಾಗಿದೆ. ದೆಹಲಿ ನಗರದಲ್ಲಿ ATF ದರವನ್ನು ಪ್ರತಿ ಕಿಲೋ ಲಿಟರ್ಗೆ 1,10,703.08 (114.5ಶೇಕಡಾ) ಹೆಚ್ಚಿಸಿ 2,07,341.22 ರೂಪಾಯಿಗೆ ಏರಿಸಲಾಗಿದೆ ಎಂದು ಸರ್ಕಾರಿ ತೈಲ ಮಾರಾಟ ಕಂಪನಿಗಳು ತಿಳಿಸಿವೆ. ATF ಸಂಪೂರ್ಣವಾಗಿ ನಿಯಂತ್ರಣಮುಕ್ತ (ಡಿರೆಗ್ಯುಲೇಟೆಡ್) ಉತ್ಪನ್ನವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳನ್ನು ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಇದು ವಿಮಾನಯಾನ ಸಂಸ್ಥೆಗಳೊಂದಿಗೆ ಹೊಂದಾಣಿಕೆಯ ಒಪ್ಪಂದದ ಪ್ರಕಾರವಾಗಿದೆ.
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಹಿಂದಿನಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದು ಹಲವಾರು ಪ್ರಮುಖ ಆದಾಯ ತೆರಿಗೆ ಬದಲಾವಣೆಗಳು ಜಾರಿಗೆ ಬರಲಿದೆ. ವೇತನ ಪಡೆಯುವ ವ್ಯಕ್ತಿಗಳು ಮತ್ತು ಉದ್ಯೋಗದಾತರ ಮೇಲೆ ಈ ಹೊಸ ನಿಯಮಗಳು ಪರಿಣಾಮ ಬೀರುತ್ತವೆ. ದಶಕಗಳಷ್ಟು ಹಳೆಯದಾದ 1961 ರ ಆದಾಯ ತೆರಿಗೆ ಕಾಯ್ದೆಯನ್ನು ಹೊಸ ಆದಾಯ ತೆರಿಗೆ ಕಾಯ್ದೆ 2025 ರಿಂದ ಬದಲಾಯಿಸುವುದರೊಂದಿಗೆ ಭಾರತದ ತೆರಿಗೆ ಚೌಕಟ್ಟನ್ನು ಪ್ರಮುಖ ಪರಿಷ್ಕರಣೆಗೆ ಒಳಪಡಿಸಲಾಗಿದೆ. ಹಳೆಯ ನಿಬಂಧನೆಗಳನ್ನು ತೆಗೆದುಹಾಕಿ, ಸಂಕೀರ್ಣ ನಿಯಮಗಳನ್ನು ಸುಗಮಗೊಳಿಸುವ ಮೂಲಕ ಮತ್ತು ತೆರಿಗೆದಾರರಿಗೆ ಅನುಸರಣೆಯನ್ನು ಹೆಚ್ಚು ಸರಳಗೊಳಿಸುವ ಮೂಲಕ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲು ನವೀಕರಿಸಿದ ಶಾಸನವನ್ನು ವಿನ್ಯಾಸಗೊಳಿಸಲಾಗಿದೆ. ಹಣಕಾಸು ವರ್ಷ (FY) ಮತ್ತು ಮೌಲ್ಯಮಾಪನ ವರ್ಷ (AY) ದ್ವಂದ್ವ ಪರಿಕಲ್ಪನೆಗಳನ್ನು “ತೆರಿಗೆ ವರ್ಷ” ಎಂಬ ಒಂದೇ ಪದದೊಂದಿಗೆ ಬದಲಾಯಿಸುವುದು ಅತ್ಯಂತ ಗಮನಾರ್ಹವಾದ ರಚನಾತ್ಮಕ ಬದಲಾವಣೆಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ತೆರಿಗೆದಾರರಿಗೆ, ಆದಾಯ ಗಳಿಕೆ ಮತ್ತು ತೆರಿಗೆ ಮೌಲ್ಯಮಾಪನವನ್ನು ಒಂದೇ ಏಕೀಕೃತ ಸಮಯದೊಳಗೆ ಜೋಡಿಸುವ ಮೂಲಕ ದೀರ್ಘಕಾಲೀನ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದ್ದು ಹಲವು ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಗಾಳಿಯ ಪ್ರಭಾವ ಹೆಚ್ಚಿದ್ದರೆ ಉಳಿದ ಭಾಗಗಳಲ್ಲಿಯೂ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಪಂಚಾಂಗ ದಿನಾಂಕ : 01-04-2026 ವಾರ : ಬುಧವಾರ ಸಂವತ್ಸರ : ಶ್ರೀ ಪರಾಭವ ನಾಮ ಆಯನ : ಉತ್ತರಾಯಣ ಪಕ್ಷ : ಶುಕ್ಲ ತಿಥಿ : ಚತುರ್ದಶಿ ನಕ್ಷತ್ರ : ಉತ್ತರಾಫಾಲ್ಗುಣಿ ಸೂರ್ಯೋದಯ : ಬೆಳಗ್ಗೆ 6:14 ಅಮೃತ ಕಾಲ : ಮಧ್ಯಾಹ್ನ 13:54 ರಿಂದ 15:26ರ ವರೆಗೆ ದುರ್ಮುಹೂರ್ತ : ಬೆಳಿಗ್ಗೆ 11:50 ರಿಂದ 12:38ರ ವರೆಗೆ ರಾಹುಕಾಲ : ಮಧ್ಯಾಹ್ನ 12:22 ರಿಂದ 13:54ರ ವರೆಗೆ ಸೂರ್ಯಾಸ್ತ : ಸಂಜೆ 06:29 ಗಂಟೆಗೆ ಇಂದಿನ ರಾಶಿ ಭವಿಷ್ಯ: ಮೇಷ : ಒಂದು ಮಹತ್ತರ ಸುದ್ದಿ ನಿಮ್ಮನ್ನು ಇಂದು ಅತ್ಯಂತ ಉತ್ಸಾಹದಲ್ಲಿರಿಸುತ್ತದೆ. ಈ ಸುದ್ದಿ ವೈಯಕ್ತಿಕ ಅಥವಾ ಹಣಕಾಸಿನ ಅನುಕೂಲದ್ದಾಗಿರಬಹುದು. ನೀವು ಬಲವಾದ ಪ್ರಯತ್ನ ಹಾಕುತ್ತೀರಿ, ಮತ್ತು ಇಂದು ನೀವು ಅತ್ಯುತ್ತಮ ಫಲಿತಾಂಶಗಳನ್ನು ಕಾಣುತ್ತೀರಿ. ವೃಷಭ : ನೀವು ಇಂದು ಅತ್ಯುತ್ತಮವಾಗಿ ಸಂಘಟಿತ ಮತ್ತು ಕೇಂದ್ರಿತವಾಗಿರುತ್ತೀರಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿನಯಪೂರ್ವಕರಾಗಿರುತ್ತೀರಿ. ಪರಿಸ್ಥಿತಿಗಳಿಗೆ ಅನುಗುಣವಾದ ಅತ್ಯುತ್ತಮ ತಂತ್ರ, ಕಾರ್ಯಯೋಜನೆಯನ್ನು ನೀವು ಗುರುತಿಸಿ ರೂಪಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಇಂದು, ನೀವು ಪ್ರಭಾವಿ, ನೈಜ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಕೆಲವರ ಮುಖದಲ್ಲಿ ಹುಡುಕಿದರೂ ಒಂದು ಮೊಡವೆಯೂ ಸಿಗುವುದಿಲ್ಲ. ಮೇಕಪ್ ಹಾಕಿಕೊಳ್ಳದೆಯೇ ಅವರು ನೈಸರ್ಗಿಕ ಸುಂದರಿಯರಂತೆ ಕಾಣಿಸುತ್ತಾರೆ. ಆದರೆ, ತಜ್ಞರು ಹೇಳುವಂತೆ ಈ ಸೌಂದರ್ಯದ ಗುಟ್ಟು ನಾವು ಅನುಸರಿಸುವ ದೈನಂದಿನ ಅಭ್ಯಾಸಗಳಲ್ಲಿದೆ. ಮುಖ ತೊಳೆಯಿರಿ: ಬಹಳ ಕಡಿಮೆ ಜನರು ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮೊದಲು ಎರಡೂ ಸಂದರ್ಭಗಳಲ್ಲಿ ತಮ್ಮ ಮುಖ ಸ್ವಚ್ಛಗೊಳಿಸುತ್ತಾರೆ. ಈ ನಿರ್ಲಕ್ಷ್ಯವು ಮುಖದ ಮೇಲೆ ಮೊಡವೆಗಳಿಗೆ ಒಂದು ಕಾರಣ. ಇದಕ್ಕಾಗಿಯೇ, ಈ ಎರಡು ಸಂದರ್ಭಗಳ ಜತೆಗೆ ಬೆವರು ಬಂದಾಗಲೂ ಮುಖವನ್ನು ಸ್ವಚ್ಛಗೊಳಿಸುವುದು ಸಹ ಅಗತ್ಯ. ಇದರ ಪರಿಣಾಮವಾಗಿ ಮುಖದ ಮೇಲಿನ ಧೂಳು ಹಾಗೂ ಎಣ್ಣೆಯಂಶ ನಿವಾರಣೆಯಾಗುತ್ತದೆ. ಚರ್ಮದ ರಂಧ್ರಗಳು ಮುಚ್ಚಿಹೋಗುವುದಿಲ್ಲ. ಇದರಿಂದ ಮೊಡವೆಗಳು ರೂಪುಗೊಳ್ಳುವುದಿಲ್ಲ. ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಫೇಸ್ ವಾಶ್ ಆಯ್ಕೆ ಮಾಡುವುದು ಸಹ ಮುಖ್ಯ. ಮೊಬೈಲ್ ಸ್ಕ್ರೀನ್ ಸ್ವಚ್ಛಗೊಳಿಸಿ: ಸಾರ್ವಜನಿಕ ಶೌಚಾಲಯಕ್ಕಿಂತಲೂ ಹೆಚ್ಚು ಮೊಬೈಲ್ ಪರದೆ ಅನೈರ್ಮಲ್ಯವಾಗಿದೆ ಎಂದು ಹಲವು ಅಧ್ಯಯನಗಳು ತೋರಿಸಿವೆ. ಫೋನ್ನಲ್ಲಿ ಮಾತನಾಡುವಾಗ ಮೊಬೈಲ್ ಮುಟ್ಟಿದ…
Subscribe to Updates
Get the latest creative news from FooBar about art, design and business.