Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ನವದೆಹಲಿ: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಧಿವೇಶನ ಮುಗಿದ ಬಳಿಕ ಮತ್ತೆ ಕುರ್ಚಿ ಕಿಚ್ಚು ಭುಗಿಲೇಳು ಸಾಧ್ಯತೆ ಇದೆ. ಅಷ್ಟರಲ್ಲಿ ಕಿತ್ತಾಟಕ್ಕೆ ಮದ್ದರೆಯಲು ಹೈಕಮಾಂಡ್ ಯೋಜನೆ ಹಾಕಿಕೊಳ್ಳುತ್ತಿದೆ. ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಹೈಕಮಾಂಡ್ ಪಾರಾಗಿದ್ದು, ಇದೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ರನ್ನು ದೆಹಲಿಗೆ ಕರೆಸಿ ಮಾತಾಡುವ ಸಾಧ್ಯತೆ ಇದೆ. ಈಮಧ್ಯೆ ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದೆ. ಕಾಂಗ್ರೆಸ್ ಸಂಸದೀಯ ಸಭೆ ಬಳಿಕ ಸೋನಿಯಾ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲ ಹೊತ್ತು ರಾಜ್ಯ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಸೋನಿಯಾಗೆ ವರದಿ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರವಾಗಿ ಎರಡ್ಮೂರು ನಿಮಿಷಗಳ ಕಾಲ ಖೆರ್ಗೆ ಹಾಗೂ ಸೋನಿಯಾ ಚರ್ಚಿಸಿದ್ದಾರೆ. ಸೋನಿಯಾಗೆ ವರದಿ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಸದ್ಯ ಗೊಂದಲಕ್ಕೆ…
Updated By: Priyalachhi ನಟ ರಣವೀರ್ ಸಿಂಗ್ ಅವರು ಇತ್ತೀಚೆಗೆ ವಿವಾದ ಒಂದನ್ನು ಮಾಡಿಕೊಂಡಿದ್ದರು. ದೈವವನ್ನು ಅವರು ದೆವ್ವ ಎಂದು ಕರೆದರು. ಅಷ್ಟೇ ಅಲ್ಲ, ದೈವವನ್ನು ಅನುಕರಿಸಲು ಹೋಗಿ ಹೀಯಾಳಿಸಿದಂತೆ ಕಾಣಿಸಿದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಘಟನೆ ನಡೆಯಿತು. ಅಲ್ಲಿಯೇ ಕುಳಿತಿದ್ದ ರಿಷಬ್ ಶೆಟ್ಟಿಗೂ ಸಾಕಷ್ಟು ಮುಜುಗರ ತಂದಿತ್ತು. ಈಗ ಅಮೇಜಾನ್ ಪ್ರೈಮ್ ವಿಡಿಯೋ ಈ ಬಗ್ಗೆ ಪೋಸ್ಟ್ ಮಾಡಿದೆ. ಈ ಮೂಲಕ ರಣವೀರ್ ಸಿಂಗ್ಗೆ ಕೌಂಟರ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭ ನಡೆಯುತ್ತಿತ್ತು. ರಣವೀರ್ ಸಿಂಗ್ ಅವರು ತಮ್ಮ ‘ಧುರಂದರ್’ ಸಿನಿಮಾ ಪ್ರಚಾರ ಮಾಡಲು ಅಲ್ಲಿಗೆ ಬಂದಿದ್ದರು. ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡರು.
Updated By: Priyalachhi ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ(Parliament Winter Session) ಇಂದಿನಿಂದ ಆರಂಭವಾಗಲಿದೆ. ಈ ಅಧಿವೇಶನವು ಅತ್ಯಂತ ಗದ್ದಲದಿಂದ ಕೂಡಿರಬಹುದು ಎಂದು ನಿರೀಕ್ಷಿಸಲಾಗಿದೆ. ಮತದಾರರ ಪಟ್ಟಿಗೆ ವಿಶೇಷ ತಿದ್ದುಪಡಿಗಳನ್ನು ಸೂಚಿಸುವ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಸರ್ಕಾರವನ್ನು ಸಿಲುಕಿಸಲು ವಿರೋಧ ಪಕ್ಷಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ಎಸ್ಐಆರ್ ಕುರಿತು ಚರ್ಚಿಸದಿದ್ದರೆ, ಸಂಸತ್ತನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ವಿರೋಧ ಪಕ್ಷಗಳು ಸ್ಪಷ್ಟಪಡಿಸಿದವು. ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ವರ್ತಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಸದನದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ವಿರೋಧ ಪಕ್ಷದ ಸಹಕಾರವನ್ನು ಕೋರಿದೆ.ಸರ್ಕಾರವು ವಿರೋಧ ಪಕ್ಷದ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದೆ. ಬಿಹಾರ ಚುನಾವಣೆಯ ನಂತರದ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರ ಸುಧಾರಣೆಗಳನ್ನು ವೇಗಗೊಳಿಸಲು ಬಯಸುತ್ತಿದೆ, ಆದರೆ SIR ಕುರಿತು ಸಮಗ್ರ ಚರ್ಚೆಯಿಲ್ಲದೆ ಸದನದ ಸುಗಮ ಕಾರ್ಯನಿರ್ವಹಣೆ ಕಷ್ಟಕರವಾಗಿರುತ್ತದೆ ಎಂದು ವಿರೋಧ ಪಕ್ಷಗಳು ಸ್ಪಷ್ಟಪಡಿಸಿವೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ…
Updated By: Priyalachhi ಪಂಚಾಂಗ: 01-12-2025, ಸೋಮವಾರ ಸಂವತ್ಸರ : ವಿಶ್ವವಸು ಆಯನ: ದಕ್ಷಿಣಾಯಣ ಮಾಸ : ಕಾರ್ತಿಕ ಪಕ್ಷ : ಶುಕ್ಲ ತಿಥಿ : ಏಕಾದಶಿ ನಕ್ಷತ್ರ : ರೇವತಿ ಸೂರ್ಯೋದಯ : ಮುಂಜಾನೆ 06:25 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 01:32 ರಿಂದ 02:57 ಗಂಟೆ ವರೆಗೆ ದುರ್ಮುಹೂರ್ತ : ಮಧ್ಯಾಹ್ನ 12:49 ರಿಂದ 01:37 & 03:13 ರಿಂದ 04:1 ಗಂಟೆ ತನಕ ರಾಹುಕಾಲ : ಬೆಳಗ್ಗೆ 07:50 ರಿಂದ 09:16 ಗಂಟೆ ವರೆಗೆ ಸೂರ್ಯಾಸ್ತ : ಸಂಜೆ 05:48 ಗಂಟೆಗೆ ರಾಶಿ ಭವಿಷ್ಯ: ಮೇಷ: ಇಂದು ನೀವು ನಿಮ್ಮ ನೋಟಗಳನ್ನು ಉತ್ತಮಪಡಿಸಲು ಪ್ರಯತ್ನಿಸುತ್ತೀರಿ. ನೀವು ಹೊಸ ನೋಟಗಳನ್ನು ಪ್ರಯತ್ನಿಸುತ್ತೀರಿ. ಅತ್ಯಂತ ಬಯಸಿದ ಡೇಟ್ ನಿಮ್ಮಲ್ಲಿ ನಿರೀಕ್ಷೆಗಳನ್ನು ಹೆಚ್ಚಾಗಿಸುತ್ತದೆ ಮತ್ತು ಸೀಟಿನ ಅಂಚಿನಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ. ಹೊರಗಿನ ಭಾವನೆಗಳು ನೈಜ ಬಾಂಧವ್ಯಗಳನ್ನು ಅಳೆಯಲು ಸಾಧ್ಯವಿಲ್ಲವಾದ್ದರಿಂದ ನೀವು ಅದನ್ನು ಸರಳವಾಗಿ ಸ್ವೀಕರಿಸಿ. ವೃಷಭ: ನೀವು ಇಂದು ಅತ್ಯಂತ ಪ್ರಣಯದ ಮೂಡ್…
Updated By: Priyalachhi ದೊಡ್ಡಬಳ್ಳಾಪುರ ಉಪವಿಭಾಗ ಧಿಕಾರಿ ದುರ್ಗಾಶ್ರೀ ಅವರು ಆಯೋಗದ ವಿಚಾರಣೆಗೆ ಸತತ ಗೈರು ಹಾಜರಾಗಿದಲ್ಲದೆ ಅರ್ಜಿದಾರರು ಕೋರಿರುವ ಅರ್ಜಿಗೆ ಉತ್ತರವನ್ನು ನೀಡದೆ ಮಾಹಿತಿ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ದಕ್ಷಿಣ ಉಪವಿಭಾಗದ Ac ವಿಶ್ವನಾಥ್, ಕೆಆರ್ ಪುರಂ ನ ತಹಸಿಲ್ದಾರ್ ಸರಿದಂತೆ ಈ ಮೂರು ಜನಕ್ಕೂ ತಲಾ 25,000 ದಂಡ ವಿಧಿಸಿ ಆಯೋಗ ಸೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂರು ಅಧಿಕಾರಿಗಳು ಮಾಹಿತಿ ಕಾಯ್ದೆ ಅಡಿ ದಾಖಲಾತಿಗಳನ್ನು ನೀಡುತ್ತೇವೆ ಎಂದು ಹೇಳಿ ಕೊನೆಗೆ ನೀಡದೇ ಇರುವುದರಿಂದ ಈ ಭ್ರಷ್ಟ ಅಧಿಕಾರಿಗಳಿಗೆ ಆಯೋಗವು ಬಿಸಿ ಮುಟ್ಟಿಸಿದೆ.
Updated By: Priyalachhi ಬೆಂಗಳೂರಿನ:- ಆನೇಕಲ್ ತಾಲ್ಲೂಕಿನ, ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ತಿಳಿಸಿದ್ದಾರೆ. ಉಪ ತಹಸಿಲ್ದಾರರಾದ ಚಂದ್ರಶೇಖರ್ ಬಿ.ಕೆ, ಶಿರಸ್ತೇದಾರರಾದ ಮಾರುತಿ ಪ್ರಸಾದ್, ದಿನಕರನ್ ಜಿ, ಲೋಕೇಶ್ ಎಸ್, ಪ್ರಥಮ ದರ್ಜೆ ಸಹಾಯಕರಾದ ಮಹೇಶ್, ಮಂಗಳ, ನಾರಾಯಣ, ದ್ವಿತೀಯ ದರ್ಜೆ ಸಹಾಯಕರಾದ ಕೆ ರಾಘವೇಂದ್ರ, ಮಂಜುನಾಥ್ ಎಂ ವಿ, ಡಿ ದರ್ಜೆ ನೌಕರರಾದ ಕಲ್ಪನಾ ಪಿ, ಮಂಜುನಾಥ್, ಶೋಭಾ ಎನ್, ಪ್ರವೀಣ್, ಮುನಿರಾಜು, ಮಂಜುಳಮ್ಮ ಮತ್ತು ಮೀನಾಕ್ಷಿ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರದೇಶದ ಸರ್ಕಾರಿ ಜಮೀನುಗಳ ಮೂಲ ಮಂಜೂರಾತಿ ಕಡತಗಳು, ದರಖಾಸ್ತು ವಹಿ, ಸಾಗುವಳಿ ಚೀಟಿಗಳು, ಸಾಗುವಳಿ ಚೀಟಿ ವಿತರಣಾ ವಹಿ, ಮಂಜೂರಿ ನಡವಳಿ ವಹಿ, ಇನಾಂ ಡಿಸಿ…
Updated By: Priyalachhi ಶ್ರೀಲಂಕಾದಲ್ಲಿ ಅಬ್ಬರಿಸುತ್ತಿರುವ ದಿತ್ವಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಶ್ರೀಲಂಕಾದಲ್ಲಿ ಚಂಡಮಾರುತದಿಂದ ಎಫೆಕ್ಟ್ನಿಂದ ಇದುವರೆಗೂ 132 ಮಂದಿ ಸಾವನ್ನಪ್ಪಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶ್ರೀಲಂಕಾದಲ್ಲಿ ವಿನಾಶವನ್ನ ಸೃಷ್ಟಿಸಿ ಭಾರತದ ತಮಿಳು ನಾಡಿನ ಕಡಲ ತೀರಕ್ಕೆ ಕಾಲಿಟ್ಟಿರುವ ದ್ವಿತಾ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ತಟ್ಟಲಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Updated By: Priyalachhi ಬೆಂಗಳೂರು: “ರಾಜ್ಯದ ಹಲವು ವಿಚಾರಗಳ ಸಂಬಂಧ ಕೇಂದ್ರ ಸಚಿವರ ಭೇಟಿಗೆ ದೆಹಲಿಗೆ ಹೋಗುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಎಸ್.ಎಂ. ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಬಳಿಕ ದೆಹಲಿಗೆ ತೆರಳುವ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸುತ್ತಾ, “ರಾಜ್ಯದ ಹಲವು ವಿಚಾರಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಕೇಂದ್ರ ಸಚಿವರ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು. ಮುಂದುವರೆದು, “ಕೇಂದ್ರಕ್ಕೆ ಸರ್ವಪಕ್ಷ ಸಭೆ ಕರೆದೊಯ್ಯಬೇಕು ಅಂತನೂ ಇದ್ದೇವೆ. ಇದರ ಬಗ್ಗೆನೂ ನಾನೂ ಸಿಎಂ ಚರ್ಚೆ ಮಾಡಿದ್ದೇವೆ. ಮೆಕ್ಕೆಜೋಳ, ಕಬ್ಬು ಇತರೆ ವಿಚಾರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಚರ್ಚೆ ಆಗಿದೆ” ಎಂದೂ ತಿಳಿಸಿದರು. “ಎಸ್.ಎಂ. ಕೃಷ್ಣಾ ಅವರ ವರ್ಷದ ಕಾರ್ಯಕ್ಕೆ ಇಡೀ ಕುಟುಂಬ ಬಂದಿದ್ದೇವೆ ಎಂದು ಇದೇ ವೇಳೆ ತಿಳಿಸಿದ ಡಿಸಿಎಂ, ಭೂವರಹಾ ಸ್ವಾಮಿ ದೇವಸ್ಥಾನಕ್ಕೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ “ನಮಗೆ ಎಲ್ಲಿ ನಂಬಿಕೆ ಇದೆಯೋ ಅಲ್ಲಿಗೆ ಹೋಗುತ್ತೇವೆ. ಎಲ್ಲ ಧರ್ಮಗಳ ಮೇಲೂ ನಮಗೆ ನಂಬಿಕೆ ಇದೆ, ರಾಜಕಾರಣ…
Updated By: Priyalachhi ಬೆಂಗಳೂರು: ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕಲು ಬಂಧಿಖಾನೆ ಇಲಾಖೆ ಮುಂದಾಗಿದೆ. ಮುಖ್ಯ ಅಧೀಕ್ಷಕ ಹುದ್ದೆ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಸರ್ಕಾರ ನೇಮಿಸಿದ ಐಪಿಎಸ್ ಅಧಿಕಾರಿ ಅಂಶುಕುಮಾರ್ ನೇತೃತ್ವದಲ್ಲಿ ಜೈಲು ಸಿಬ್ಬಂದಿಗಳ ವಿಶೇಷ ತಂಡ ರಚಿಸಿಕೊಂಡು, ಆಧುನಿಕ ಉಪಕರಣ ಬಳಸಿ ಕಾರಾಗೃಹದ ಒಳಗೆ ಬಳಕೆಯಾಗುತ್ತಿದ್ದ ನಿಷೇಧಿತ ವಸ್ತುಗಳನ್ನು ಪತ್ತೆ ಹಚ್ಚುತ್ತಿದೆ. ಅಕ್ರಮದ ಕೂಪವೆಂದು ಕಳಂಕ ಹೊತ್ತಿರುವ ಸೆಂಟ್ರಲ್ ಜೈಲನ್ನು ಕಳಂಕರಹಿತ ಮಾಡಲು ಹಾಗೂ ಪಾರದರ್ಶಕತೆ ತರಲು ಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಕಳೆದ ಎರಡು ದಿನಗಳಲ್ಲಿ 52 ಮೊಬೈಲ್, 38 ಸಿಮ್ ಕಾರ್ಡ್ಗಳು, ಚಾರ್ಜರ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಪತ್ತೆ ಹಚ್ಚಿದೆ. ಅಕ್ರಮದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ. ಇಷ್ಟು ದಿನಗಳ ಕಾಲ ಪೊಲೀಸರು ಬರಿಗೈಲಿ ತೆರಳಿ ದಾಳಿ ಮಾಡುತ್ತಿದ್ದರು. ಇದರ ಬಗ್ಗೆ ಸಜಾಬಂಧಿಗಳು ಮುಂಚಿತವಾಗಿಯೇ ಮಾಹಿತಿ ಅರಿತು ಮೊಬೈಲ್ಗಳನ್ನ ಬಚ್ಚಿಟ್ಟು ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಇದನ್ನು…
Updated By: Priyalachhi ನವದೆಹಲಿ: ಈ ಚಳಿಗಾಲದಲ್ಲಿ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದೆ. ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಷೇಧ ಜಾರಿಯಲ್ಲಿರುವುದರಿಂದ ದೇಶಿಯ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವೆಂದು ಘಾಜಿಪುರ ಮಂಡಿಯ ವ್ಯಾಪಾರಿಗಳು ಹೇಳಿದ್ದಾರೆ. ಪ್ರಸ್ತುತ ನಾಸಿಕ್, ಅಲ್ವಾರ್, ಮಧ್ಯಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಇತರ ಸ್ಥಳಗಳಿಂದ ಬಂದ ಈರುಳ್ಳಿ ಮಾರುಕಟ್ಟೆಯಲ್ಲಿದೆ. ಇಳುವರಿಯೂ ಚೆನ್ನಾಗಿದೆ. ಈರುಳ್ಳಿ ರಫ್ತು ನಿಷೇಧದಿಂದಾಗಿ, ಘಾಜಿಪುರ ಮಂಡಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿಗೆ ಹೋಲ್ಸೇಲ್ ಬೆಲೆ ಕೆ.ಜಿಗೆ 2 ರೂ. ನಿಂದ 13 ರೂ. ವರೆಗೆ ಇದೆ” ಎಂದು ಘಾಜಿಪುರ ಮಂಡಿಯ ಈರುಳ್ಳಿ ವ್ಯಾಪಾರಿ ಪರಮಾನಂದ ಸೈನಿ ತಿಳಿಸಿದರು. ಬೆಳೆಗೆ ಖರ್ಚು ಮಾಡಿದ ಹಣವೂ ರೈತರಿಗೆ ಸಿಗುತ್ತಿಲ್ಲ. ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡಬೇಕಿರುವುದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಅವರು ಕಮಿಷನ್ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ ಮತ್ತು ಬೆಳೆಗೆ ಹೂಡಿಕೆ ಮಾಡಿದ್ದ ಬಂಡವಾಳವನ್ನು ಸಹ ಭರಿಸಬೇಕಾಗುತ್ತದೆ. 50…
Subscribe to Updates
Get the latest creative news from FooBar about art, design and business.