ಬೆಂಗಳೂರು: ಕಡತಗಳ ವಿಲೇವಾರಿ ಹಾಗೂ ಅನಾವಶ್ಯಕ ಕೆಲಸಗಳ ವಿಳಂಬ, ಲಂಚ, ಭ್ರಷ್ಟಾಚಾರ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಶನಿವಾರ ಅವರು ಜಿಲ್ಲಾಧಿಕಾರಿಗಳು, ಸಿಇಒಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ರಾಜ್ಯದಲ್ಲಿನ ಮಳೆ, ಬೆಳೆ, ಸಿಎಸ್ಆರ್ ಶಾಲೆಗಳು, ಕಾನೂನು ಸುವ್ಯವಸ್ಥೆ, ಎಸ್ಐಆರ್ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಸರ್ಕಾರದ ಎಲ್ಲಾ ಪ್ರಮುಖ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಜವಾಬ್ದಾರಿ ಅರಿತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಸೂಚನೆ ನೀಡಿದರು.
ಸಾರ್ವಜನಿಕರು, ಯೋಜನೆಗಳು, ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ಬಗ್ಗೆ ನಿರಂತರ ಗಮನಹರಿಸಿ. ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳ ವಾಹನಗಳನ್ನು ಗುರುತಿಸಲು ಪ್ರತ್ಯೇಕ ಕಲರ್ ಸ್ಟಿಕರಿಂಗ್ ಮಾಡಿಸಬೇಕು. ಉದಾಹರಣೆಗೆ ಅರಣ್ಯ ಇಲಾಖೆಗೆ ಹಸಿರು, ಆರೋಗ್ಯ ಇಲಾಖೆಗೆ ನೀಲಿ+ರೆಡ್ ಹೀಗೆ ಹಾಕಬೇಕು ಎಂದು ಸೂಚಿಸಿದರು.

