Author: Sub Editor

ತುಮಕೂರು/ಬೆಂಗಳೂರು: ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು ಶ್ರೀಮಠಕ್ಕೆ ಚಿನ್ನದ ಉಡುಗೊರೆ ನೀಡಿದ್ದರು ಎಂಬ ಹೇಳಿಕೆಯನ್ನು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಖೇಣಿಯವರು ಕೇವಲ ತಮ್ಮ ಪ್ರಚಾರಕ್ಕಾಗಿ ಶ್ರೀಮಠದ ಹೆಸರನ್ನು ಬಳಸಿಕೊಂಡಿದ್ದು, ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಶ್ರೀಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಲಿಂಗ ಶ್ರೀಗಳು, “ಅಶೋಕ್ ಖೇಣಿಯವರು ಮಠಕ್ಕೆ ಚಿನ್ನ ಕೊಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಅವರ ಸಂಪರ್ಕವೇ ನಮಗಿಲ್ಲ. ಪರಮಪೂಜ್ಯರು (ಡಾ. ಶಿವಕುಮಾರ ಸ್ವಾಮೀಜಿ) ಲಿಂಗೈಕ್ಯರಾದಾಗಲೂ ಅವರು ಮಠಕ್ಕೆ ಬಂದಿರಲಿಲ್ಲ. ಕೇವಲ ತಮ್ಮ ಪ್ರಚಾರಕ್ಕಾಗಿ ಇಂತಹ ಉತ್ಪ್ರೇಕ್ಷೆಯ ಮಾತುಗಳನ್ನು ಆಡುತ್ತಿದ್ದಾರೆ. ಖೇಣಿಯವರು ಯಾವುದೇ ಚಿನ್ನದ ಉಡುಗೊರೆ ನೀಡಿರುವ ಬಗ್ಗೆ ನಮಗೆ ಮಾಹಿತಿಯೂ ಇಲ್ಲ, ಮಠದಲ್ಲಿ ಯಾವುದೇ ದಾಖಲೆಯೂ ಇಲ್ಲ. ಯಾರದ್ದೋ ವೈಯಕ್ತಿಕ ವ್ಯವಹಾರಕ್ಕಾಗಿ ಶ್ರೀಮಠದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ನಮಗೆ ತೀವ್ರ ನೋವು ಮತ್ತು ಬೇಸರ ತರಿಸಿದೆ. ಈ ಕುರಿತು ಮಠದಿಂದ ಈಗಾಗಲೇ ಸ್ಪಷ್ಟೀಕರಣ ಪ್ರಕಟಣೆಯನ್ನೂ ಹೊರಡಿಸಲಾಗಿದೆ,”…

Read More

ರಾಮನಗರ (ಸಂಭ್ರಮ ಪ್ರಭ ನ್ಯೂಸ್ ಡೆಸ್ಕ್): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕಾಗಿ ಕರಿಬೇವು ಸೊಪ್ಪಿನಂತೆ ಬಳಸಿಕೊಂಡು ಈಗ ಮೂಲೆಗುಂಪು ಮಾಡಿದೆ. ಅವರಿಗೆ ಪಕ್ಷ ‘ರೆಸ್ಟ್ ಗ್ಯಾರಂಟಿ’ ಕೊಟ್ಟಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಆರ್ಥಿಕ ಸ್ಥಿತಿ ಹಾಗೂ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಕುರಿತು ತೀವ್ರ ಅಸಮಾಧಾನ ಹೊರಹಾಕಿದರು. ಕರಿಬೇವು ಸೊಪ್ಪಿನಂತೆ ಸಿದ್ದರಾಮಯ್ಯ ಬಳಕೆ! ಸಿದ್ದರಾಮಯ್ಯ ಅವರ ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಆರ್. ಅಶೋಕ್, “ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಒಗ್ಗರಣೆಗೆ ಬಳಸುವ ಕರಿಬೇವು ಸೊಪ್ಪಿನಂತೆ ಉಪಯೋಗಿಸಿ ಪಕ್ಕಕ್ಕಿಟ್ಟಿದೆ. ಅವರ ಬಾಯಿ ಮುಚ್ಚಿಸಿ, ಮೈಸೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುವ ಸ್ಥಿತಿಗೆ ತರಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಮುಖ ನೋಡಿ ಒಕ್ಕಲಿಗರು ಮತ ಹಾಕುವುದಿಲ್ಲ ಎಂದು ಅವರದೇ ಪಕ್ಷದ ನಾಯಕ ಕೆ.ಎನ್. ರಾಜಣ್ಣ ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ” ಎಂದು…

Read More

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ದಾಳಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಸತೀಶ್ ಜಾರಕಿಹೊಳಿ, ತಮ್ಮ ವಿರುದ್ಧ ಇಡಿಗೆ ದೂರು ಕೊಟ್ಟವರು ಯಾರು ಎಂಬುದು ತಮಗೆ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗೋ ದೇಶದ ಮೆಸ್ಸೆರಿಸ್ ಗಣಿಗಾರಿಕೆ ಸಂಸ್ಥೆಯಲ್ಲಿ ತಮಗೆ 40ರಷ್ಟು ಪಾಲು ಇದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. “ಇದು ಕೇವಲ ಆರೋಪವಷ್ಟೇ. ಅವರು 40% ಪಾಲು ಇದೆ ಎಂದು ಹೇಳಿದರೆ, ಅದರ ದಾಖಲೆಗಳನ್ನು ತೋರಿಸಲಿ. ನಮ್ಮದಿದ್ದರೆ ನಾವು ಒಪ್ಪಿಕೊಳ್ಳಲೇಬೇಕು. ಸುಮ್ಮನೆ ಆರೋಪ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಸವಾಲು ಹಾಕಿದ್ದಾರೆ. ದೂರುದಾರರು ಯಾರು? ಸಿಎಂಗೆ ಮಾಹಿತಿ ನೀಡಿದ್ದ ಸತೀಶ್ ದಾಳಿಯ ಬಗ್ಗೆ ಮೊದಲೇ ಸುಳಿವು ಇತ್ತೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಸತೀಶ್ ಜಾರಕಿಹೊಳಿ, “ನನ್ನ ವಿರುದ್ಧ…

Read More

ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ವಿಸ್ತೃತ ಜಾಲದ ಮೂಲಕ (ಸಿಂಡಿಕೇಟ್‌) ಕಾರ್ಯ ನಿರ್ವಹಿಸುತ್ತಿದೆ’ ಎಂಬ ಕೇಂದ್ರೀಯ ಕಸ್ಟಮ್ಸ್‌ ಪ್ರತಿಪಾದನೆಯನ್ನು ಹೈಕೋರ್ಟ್‌ ಪ್ರಮುಖವಾಗಿ ಉಲ್ಲೇಖಿಸಿದೆ. 2 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ಆರೋಪಿಯೊಬ್ಬರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದ ಕ್ರಿಮಿನಲ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ಚಟುವಟಿಕೆಗಳು ರಾಷ್ಟ್ರದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ’ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ ಕೇಂದ್ರೀಯ ಕಸ್ಟಮ್ಸ್‌ ಪರ ವಕೀಲ ಮಧು ಎನ್‌.ರಾವ್‌, ‘ಅರ್ಜಿದಾರರು ದಂಧೆಯ ಮೊದಲ ಕೊಂಡಿಯೋ, ಮಧ್ಯವೋ ಅಥವಾ ದೊಡ್ಡ ಸಿಂಡಿಕೇಟ್‌ನ ಸಣ್ಣ ಕೊಂಡಿಯೋ ಎಂಬುದನ್ನು ತನಿಖೆಯಲ್ಲೇ ನಿಖರವಾಗಿ ಶೋಧಿಸಬೇಕಿದೆ. ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಕಸ್ಟಮ್ಸ್ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ’ ಎಂದು ವಿವರಿಸಿದ್ದರು. ‘ಜಾಲದಲ್ಲಿ ಪರದೆಯ ಹಿಂದೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಗುರುತು,…

Read More

ಸಾಲು ಸಾಲು ಹಬ್ಬಗಳು ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಅಡುಗೆಮನೆಯ ‘ಕಿಂಗ್’ ಎಂದೇ ಕರೆಸಿಕೊಳ್ಳುವ ಈರುಳ್ಳಿ ದರ ಈಗ ಧಿಡೀರನೆ ಗಗನಮುಖಿಯಾಗಿದೆ. ಕೇವಲ ಒಂದು ತಿಂಗಳ ಹಿಂದಷ್ಟೇ ಕೆ.ಜಿ.ಗೆ 20-30 ರೂಪಾಯಿಗೆ ಸಿಗುತ್ತಿದ್ದ ಈರುಳ್ಳಿ, ಈಗ 60-85 ರೂಪಾಯಿ ಗಡಿ ದಾಟಿದೆ! ಮಾರುಕಟ್ಟೆಯ ಟ್ರೆಂಡ್ ನೋಡಿದರೆ ಮುಂದಿನ ದಿನಗಳಲ್ಲಿ ಶತಕ ಬಾರಿಸಿದರೂ ಅಚ್ಚರಿಯಿಲ್ಲ. ಗ್ರಾಹಕರಿಗೆ ಕಣ್ಣೀರು, ಇತ್ತ ರೈತರಿಗೂ ತಪ್ಪಿಲ್ಲ ಕಣ್ಣೀರು! ಸಾಮಾನ್ಯವಾಗಿ ಬೆಲೆ ಏರಿಕೆಯಾದರೆ ಬೆಳೆಗಾರನಿಗೆ ಖುಷಿಯಾಗುತ್ತದೆ. ಆದರೆ, ಈ ಬಾರಿ ದರ ಹೆಚ್ಚಾದರೂ ಅನ್ನದಾತನ ಮುಖದಲ್ಲಿ ಮಂದಹಾಸವಿಲ್ಲ. ಇದಕ್ಕೆ ಮುಖ್ಯ ಕಾರಣ ‘ಬರ ಮತ್ತು ಮಳೆ ಕೊರತೆ’. ರಾಜ್ಯದ ಪ್ರಮುಖ ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಇಳುವರಿ ಸಂಪೂರ್ಣ ಕುಸಿದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಯಾವ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ? ಚಿತ್ರದುರ್ಗದ ರೈತರ ಸಂಕಷ್ಟ: ಪ್ರತಿ ವರ್ಷ ಸುಮಾರು 40 ಸಾವಿರ ಹೆಕ್ಟೇರ್…

Read More

ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ನಿಗಮದ ಹಣ ದುರ್ಬಳಕೆ ಹಗರಣದ ಆರೋಪ ಹೊತ್ತಿರುವ ಬಿ. ನಾಗೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಬೇರೆ ಸಮರ್ಥರು ಇರಲಿಲ್ಲವೇ ಎಂದ ನಿಖಿಲ್ ಪ್ರಶ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ನಾಗೇಂದ್ರ ಅವರ ಮೇಲಿನ ಆರೋಪ ನಿನ್ನೆ ಮೊನ್ನೆಯದಲ್ಲ. ಕಳೆದ ವರ್ಷವೇ ಈ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಖುದ್ದು ಮುಖ್ಯಮಂತ್ರಿಗಳೇ ಸದನದಲ್ಲಿ 189 ಕೋಟಿ ಅಲ್ಲ, 87 ಕೋಟಿ ರೂ.ಗಳ ಹಣ ದುರ್ಬಳಕೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಅವರನ್ನೇ ಯಾಕೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು? ಕಾಂಗ್ರೆಸ್ ಪಕ್ಷದಲ್ಲಿ ಆ ಸ್ಥಾನ ತುಂಬಲು ಬೇರೆ ಸಮರ್ಥರು ಇರಲಿಲ್ಲವೇ?…

Read More

ವಿಶೇಷ ವರದಿ: ‘ದಿ-ಫೈಲ್’ ಜಾಲತಾಣದ ತನಿಖಾ ವರದಿ ಆಧಾರಿತ ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರದ ಸ್ವೀಕಾರ ಕೇಂದ್ರದಿಂದ ಬರೋಬ್ಬರಿ 1,776 ಮಹಿಳೆಯರು ಮತ್ತು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಸ್ವೀಕಾರ ಕೇಂದ್ರದ ಅನಾಥ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳು ಅನೈತಿಕ ಚಟುವಟಿಕೆಗಳ ಜಾಲಕ್ಕೆ ಸಿಲುಕಿರುವ ಶಂಕೆಯಿದ್ದು, ಇದರಲ್ಲಿ ಕೇಂದ್ರದ ಕೆಲ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಶಾಮೀಲಾತಿ ಇರಬಹುದು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಮಹಾ ಅವ್ಯವಹಾರದ ಬಗ್ಗೆ ‘ದಿ-ಫೈಲ್’ (The-File) ಜಾಲತಾಣವು ಎಕ್ಸ್‌ಕ್ಲೂಸಿವ್ ದಾಖಲೆಗಳನ್ನು ಕಲೆಹಾಕಿ ವರದಿ ಪ್ರಕಟಿಸಿದ್ದು, ಸರ್ಕಾರದ ವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಎಂಬುದನ್ನು ಎತ್ತಿ ತೋರಿಸಿದೆ.  7 ವರ್ಷಗಳಿಂದ ಕೊಳೆಯುತ್ತಿರುವ ದೂರು, ಕಣ್ಣುಮುಚ್ಚಿ ಕುಳಿತ ಆಯೋಗ  ಈ ಪ್ರಕರಣದ ಕುರಿತು ಗಜೇಂದ್ರಕುಮಾರ್ ಗೌಡ ಎಂಬುವರು 2019ರಲ್ಲೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದರು. ಆದರೆ, 7 ವರ್ಷಗಳು ಕಳೆದರೂ ಆಯೋಗ ಕೇವಲ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡುತ್ತಿದೆ. 2019ರಲ್ಲಿ…

Read More

ಬೆಂಗಳೂರು | ಇಂದು ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ, ಒಕ್ಕಲಿಗ ಸಮುದಾಯದ ಹಕ್ಕುಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾದ ವಿಷಯಗಳು: – ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ನ್ಯಾಯಸಮ್ಮತ ಮೀಸಲಾತಿ ನೀಡಬೇಕು. – ಕಾಮಗಾರಿ ಗುತ್ತಿಗೆಗಳಲ್ಲಿ ಹಿಂದುಳಿದ ಒಕ್ಕಲಿಗ ಪ್ರವರ್ಗಕ್ಕೂ ಮೀಸಲಾತಿ ಕಲ್ಪಿಸಬೇಕು. – ಬಿಡಿಎ, ಕೆಐಎಡಿಬಿ ಸೇರಿದಂತೆ ವಿವಿಧ ನಿವೇಶನ ಹಂಚಿಕೆ ಯೋಜನೆಗಳಲ್ಲಿ ಒಕ್ಕಲಿಗ ಸಮುದಾಯಕ್ಕೂ ಸಮಾನ ಅವಕಾಶ ದೊರಕಬೇಕು. – ಒಕ್ಕಲಿಗ ಸಂಘದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಬೈಲಾ ತಿದ್ದುಪಡಿ ಕುರಿತು ಸದಸ್ಯರ ಅಭಿಪ್ರಾಯಗಳನ್ನು ಆಲಿಸಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಶಾಸಕರಾದ ಹೆಚ್.ಡಿ. ರಂಗನಾಥ್ ರವರು, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರಾದ ಆಡಿಟರ್ ನಾಗರಾಜ್ ಯಲಚವಾಡಿ ರವರು, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ…

Read More

ಬೆಂಗಳೂರು: ರೇಷನ್ ಕಾರ್ಡ್ (ಪಡಿತರ ಚೀಟಿ) ಹೊಂದಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸಿಹಿಸುದ್ದಿಯೊಂದು ಸಿಕ್ಕಿದೆ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅನರ್ಹ ಫಲಾನುಭವಿಗಳನ್ನು ತಡೆದು ನೈಜ ಬಡ ಕುಟುಂಬಗಳಿಗೆ ಸೌಲಭ್ಯ ತಲುಪಿಸಲು ಸರ್ಕಾರವು e-KYC (ಇ-ಕೆವೈಸಿ) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳು (ರೇಷನ್ ಅಂಗಡಿ) ಅಥವಾ ಸೇವಾ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅಲೆಯಬೇಕಾಗಿಲ್ಲ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಹಾಗೂ ಆಧಾರ್ ಮುಖಾಧಾರಿತ ಪರಿಶೀಲನೆ (Face Authentication) ತಂತ್ರಜ್ಞಾನದ ಮೂಲಕ, ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್‌ನಲ್ಲೇ ಕೇವಲ ೨ ನಿಮಿಷಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. e-KYC ಪೂರ್ಣಗೊಳಿಸಲು ಬೇಕಾಗುವ ಅಗತ್ಯ ದಾಖಲೆಗಳು ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಕೆಳಗಿನ ಮೂಲ ದಾಖಲೆಗಳು ಮತ್ತು ಸೌಲಭ್ಯಗಳು ಸಿದ್ಧವಾಗಿರಬೇಕು: ರೇಷನ್ ಕಾರ್ಡ್: ಕುಟುಂಬದ ಮೂಲ ಪಡಿತರ ಚೀಟಿ ಸಂಖ್ಯೆ. ಆಧಾರ್…

Read More

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು ತಮ್ಮ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ (APAR) ಹಾಗೂ ಸ್ಥಿರಾಸ್ತಿ ವಿವರಗಳನ್ನು (IPR) ಇನ್ನು ಮುಂದೆ ಕಡ್ಡಾಯವಾಗಿ ಡಿಜಿಟಲ್ ರೂಪದಲ್ಲೇ ಸಲ್ಲಿಸಬೇಕಾಗುತ್ತದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಹೊಸ ನಿಯಮದ ಪ್ರಕಾರ, 2026ರ ಆಗಸ್ಟ್ 20ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಅಧಿಕೃತ e-PAR (e-Performance Appraisal Report) ಆಪ್‌/ಪೋರ್ಟಲ್ ಮೂಲಕವೇ ಪ್ರತಿಯೊಬ್ಬ ನೌಕರರೂ ತಮ್ಮ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. 💡 ಪ್ರಮುಖ ಬದಲಾವಣೆಗಳು ಮತ್ತು ವಿಶೇಷತೆಗಳು ಹೊಸ IPR ಮಾಡ್ಯೂಲ್ ಸೇರ್ಪಡೆ: ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಅಭಿವೃದ್ಧಿಪಡಿಸಿರುವ e-PAR ವ್ಯವಸ್ಥೆಯಲ್ಲಿ ಹೊಸದಾಗಿ ‘IPR Module’ ಅನ್ನು ಸೇರಿಸಲಾಗಿದೆ. ಇದರ ಮೂಲಕ ಸ್ಥಿರಾಸ್ತಿ ಮತ್ತು ಹೊಣೆಗಾರಿಕೆಗಳ ವಿವರವನ್ನು ಆನ್‌ಲೈನ್‌ನಲ್ಲೇ ನಮೂದಿಸಬಹುದು. ಮ್ಯಾನುಯಲ್ ಸಲ್ಲಿಕೆಗೆ ಮುಕ್ತಿ: ಇಲ್ಲಿಯವರೆಗೆ ನೌಕರರು ಆಸ್ತಿ ವಿವರ ಹಾಗೂ ಕಾರ್ಯಕ್ಷಮತೆ ವರದಿಗಳನ್ನು ಕೈಬರಹದ…

Read More