• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ

Sambrama Prabha News by Sambrama Prabha News
November 4, 2025
in Home, Latest News
0
ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ

Updated By: Priyalachhi

ಬೆಂಗಳೂರು: ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗ್ತಿದೆ ಎಂದು ಆರೋಪಿಸಿ ಲೆಕ್ಕಪತ್ರ ಕೋರಿ ವಿಜಯ್​ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನಯ ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿದೆ. ರಿಟ್ ಅರ್ಜಿಯಲ್ಲಿ ಬ್ಯಾಂಕ್​ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ವಿಜಯ್ ಮಲ್ಯ ಪರ ವಕೀಲ ಸಜನ್ ಪೂವಯ್ಯಗೆ ಕೋರ್ಟ್​ ಪ್ರಶ್ನೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್​ಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್​ 12ಕ್ಕೆ ಮುಂದೂಡಿದೆ.

ವಿಜಯ್​ ಮಲ್ಯ ಪರ ವಕೀಲರ ವಾದವೇನು?

ವಿಜಯ್​ ಮಲ್ಯ ಪರ ವಾದಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್​ನವರು ಒಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ UBHL ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿದ್ದು, ಡಾ.ವಿಜಯ್ ಮಲ್ಯ ಇದರ ನಿರ್ದೇಶಕರಾಗಿದ್ದರು. ಅಲ್ಲದೆ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸುವುದು ಸಾಂವಿಧಾನಿಕ ಹಕ್ಕೆಂದು ಹೇಳಿದ್ದಾರೆ. ಈ ವೇಳೆ ಪ್ರಶ್ನೆ ಮಧ್ಯಪ್ರವೇಶ ಮಾಡಿದ ಪೀಠ, ‘ಸುಪ್ರೀಂ’ನ ನ್ಯಾಯಾಂಗ ನಿಂದನೆ ಕೇಸ್​ನಲ್ಲಿ‌ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್ ವಿಚಾರಣೆಗೆ ಬಂದಿಲ್ಲ. ಹೀಗಿರುವಾಗ ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನಿಸಿದೆ. ವಿಜಯ್ ಮಲ್ಯ ಲಂಡನ್ ಕೋರ್ಟ್ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದು ಈ ವೇಳೆ ಮಲ್ಯ ಪರ ವಕೀಲರು ವಾದಿಸಿದ್ದಾರೆ.

ಬ್ಯಾಂಕ್​ಗಳ ಪರ ವಕೀಲರು ಹೇಳೋದೇನು?

ಇತ್ತ ಬ್ಯಾಂಕ್​ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದು, ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಅವರು ಮುಗ್ದರಾಗಿದ್ದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ಆರೋಪಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಕೋರ್ಟ್​ ವಿಚಾರಣೆಯನ್ನ ನವೆಂಬರ್​ 12ಕ್ಕೆ ಮುಂದೂಡಿದೆ.

ವಿಜಯ್​ ಮಲ್ಯ ಆರೋಪವೇನು?

ತಾನು ಪಾವತಿಸಬೇಕಿದ್ದ 6,200 ಕೋಟಿ ಸಾಲಕ್ಕೆ 14,000 ಕೋಟಿ ವಸೂಲಿ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರೇ ಲೋಕಸಭೆಗೆ ತಿಳಿಸಿದ್ದು, 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಪ್ರಕ್ರಿಯೆ ಮುಂದುವರಿಸಲಾಗಿದೆ. ಹೀಗಾಗಿ ವಸೂಲಿಯಾದ ಲೆಕ್ಕಪತ್ರವನ್ನು ಬ್ಯಾಂಕ್​ಗಳು ನೀಡಬೇಕು ಎಂಬುದು ವಿಜಯ್​ ಮಲ್ಯ ಆಗ್ರಹ.

Tags: Vijay Mallyaಬ್ಯಾಂಕ್​ ಸಾಲವಿಜಯ್​ ಮಲ್ಯಹೈಕೋರ್ಟ್
Previous Post

ಕರ್ನಾಟಕದಲ್ಲಿ ಕೆಲಸ ಮಾಡುವ ಬಿಹಾರಿಗಳಿಗೆ 3 ದಿನ ರಜೆ ನೀಡುವಂತೆ ಡಿಕೆಶಿ ಮನವಿ

Next Post

‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು

Next Post
‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು

‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.