• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬಿಹಾರ ಚುನಾವಣೆಯ ಸೋಲಿಗೆ ಇವಿಎಂ ದುರ್ಬಳಕೆ, ಹಣ ಬಲ ಕಾರಣ: ಆರ್​ಜೆಡಿ

Sambrama Prabha News by Sambrama Prabha News
November 18, 2025
in Latest News, Nation News
0
ಬಿಹಾರ ಚುನಾವಣೆಯ ಸೋಲಿಗೆ ಇವಿಎಂ ದುರ್ಬಳಕೆ, ಹಣ ಬಲ ಕಾರಣ: ಆರ್​ಜೆಡಿ

Updated By: Priyalachhi

ಪಟ್ನಾ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಹಿನ್ನಡೆ ಅನುಭವಿಸಿದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ), ಪಕ್ಷದ ಸೋಲಿಗೆ ಇವಿಎಂ ದುರ್ಬಳಕೆ ಮತ್ತು ಹಣದ ಶಕ್ತಿ ಕಾರಣ ಎಂದು ಆರೋಪಿಸಿದೆ.

ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಇಂದು ನಡೆದ ಸಭೆಯಲ್ಲಿ, ಚುನಾವಣೆಯ ಸೋಲಿನ ಕುರಿತು ಅವಲೋಕನ ನಡೆಯಿತು.

ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್​ಜೆಡಿ ರಾಜ್ಯಾಧ್ಯಕ್ಷ ಮಂಗನಿ ಲಾಲ್​ ಮಂಡಲ್​, “ಪಕ್ಷ ಸೋಲಿನ ಕುರಿತು ವಿವರವಾದ ಪರಿಶೀಲನೆ ನಡೆಸಿತು. ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಮತ್ತು ಹಣದ ಬಲ ಪ್ರಮುಖ ಪಾತ್ರ ವಹಿಸಿದೆ. ಚುನಾವಣೆಗೆ ಮುನ್ನ ಮುಕ್ತವಾಗಿ ಹಣ ಹಂಚಿಕೆ ಮಾಡಲಾಗಿದೆ” ಎಂದು ಆರೋಪಿಸಿದರು.

“ಮತದಾರರ ಮೇಲೆ ಪ್ರಭಾವ ಬೀರಲು ಅಪಾರ ಪ್ರಮಾಣದ ಹಣ ಹಂಚಲಾಯಿತು. ಚುನಾವಣೆಯ ಸಂದರ್ಭದಲ್ಲಿ ಆರ್‌ಜೆಡಿ ನಾಯಕರನ್ನು ಟೀಕಿಸಲಾಯಿತು. ಪಕ್ಷದ ಕಾರ್ಯಕರ್ತರಿಗೆ ವಿವಿಧ ಸ್ಥಳಗಳಲ್ಲಿ ಕಿರುಕುಳ ನೀಡಿ, ಬಂಧಿಸಲಾಯಿತು. ಈ ಕುರಿತು ಚುನಾವಣಾ ಆಯೋಗ ಮತ್ತು ವೀಕ್ಷಕರಿಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇವಿಎಂ ಅನ್ನು ಕುಶಲತೆಯಿಂದ ಬಳಕೆ ಮಾಡಿರುವುದು ಬಹಿರಂಗಗೊಂಡಿದೆ” ಎಂದು ಆಕ್ರೋಶ ಹೊರಹಾಕಿದರು.

“ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ. ಹಾಗಾಗಿ, ಈ ಇವಿಎಂ ಯಂತ್ರಗಳನ್ನು ರದ್ದುಗೊಳಿಸಬೇಕು. ನ್ಯಾಯಯುತ ಚುನಾವಣೆಗಳು ಬೇಕಾದರೆ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇವಿಎಂಗಳ ಬದಲಿಗೆ ಮತಪೆಟ್ಟಿಗೆಗಳನ್ನು ಬಳಸಿ ಚುನಾವಣೆಗಳನ್ನು ನಡೆಸಬೇಕು” ಎಂದು ಅವರು ಸಲಹೆ ನೀಡಿದರು.

Tags: EVM misuseRJD
Previous Post

ನಾಲೆಯಲ್ಲಿ ಸಿಲುಕಿದ್ದ ಕಾಡಾನೆ

Next Post

‘ನೋಡಲೇಬೇಕಾದ ಚಿತ್ರ, ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ’: ‘ಮಾರುತ’ ವೀಕ್ಷಿಸಿದ ಪೊಲೀಸರು

Next Post
‘ನೋಡಲೇಬೇಕಾದ ಚಿತ್ರ, ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ’: ‘ಮಾರುತ’ ವೀಕ್ಷಿಸಿದ ಪೊಲೀಸರು

'ನೋಡಲೇಬೇಕಾದ ಚಿತ್ರ, ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ': 'ಮಾರುತ' ವೀಕ್ಷಿಸಿದ ಪೊಲೀಸರು

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.