Updated By: Priyalachhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲಲು ಮತದಾನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಅವರ ಜನರ ಹೃದಯವನ್ನು ಹ್ಯಾಕ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ನಡೆದ ‘ಚುನಾವಣೆ ಸುಧಾರಣೆ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಣಾವತ್, ಪ್ರತಿಪಕ್ಷಗಳ ಸದಸ್ಯರು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕಳೆದ ವರ್ಷ ತೀವ್ರ ಆಘಾತವಾಗಿತ್ತು. ಅವರನ್ನು ಆಗಾಗ್ಗೆ ಹಾಗೆ ನೋಡುವುದು ಆಘಾತಕಾರಿ ಎಂದು ಹೇಳಿದರು.

ವಿಪಕ್ಷ ಸಂಸದರು ಪದೇ ಪದೇ ಸದನದ ಬಾವಿಗಿಳಿದು SIR, SIR’ಎಂದು ಕೂಗಿ ಸಾಧ್ಯವಾದಷ್ಟು ಎಲ್ಲಾ ಮಾರ್ಗಗಳಲ್ಲಿ ಬೆದರಿಕೆ, ಅನುಚಿತ ವರ್ತನೆ ಮಾಡಲು ಪ್ರಯತ್ನಿಸಿದರು. ಈ ಅಡ್ಡಿಯಿಂದ ಸಂಸತ್ ಕಲಾಪ ಸುಗಮವಾಗಿ ಸಾಗಿರಲಿಲ್ಲ .ಕಳೆದ ಎರಡೂ ಮೂರು ದಿನ ಹೊರತುಪಡಿಸಿದರೆ ಬಹುತೇಕ ಅವರು ಸದನ ನಡೆಯಲು ಅವಕಾಶ ನೀಡಿರಲಿಲ್ಲ ಎಂದರು.

ನಾವು ಜನರ ಪ್ರತಿನಿಧಿಗಳು, ಹೊಸ ಸಂಸದರಾಗಿ ಇಲ್ಲಿಗೆ ಬಂದಿರುವ ನಾವು ಕಲಿಯುವುದು ಸಾಕಷ್ಟಿದೆ. ವಿಪಕ್ಷಗಳ ಸದಸ್ಯರು ಪ್ರತಿಯೊಂದು ಅಧಿವೇಶನವನ್ನು ರಂಗಮಂದಿರವನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version