• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಕರ್ನಾಟಕದಲ್ಲಿ ಆಟೋ LPG ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್

Sambrama Prabha News by Sambrama Prabha News
April 7, 2026
in Home, Latest News, Politics
0
ಕರ್ನಾಟಕದಲ್ಲಿ ಆಟೋ LPG ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಆಟೋ LPG ಸರಬರಾಜನ್ನು ಹೆಚ್ಚಿಸಿದೆ. ಜಾಗತಿಕ ಭೂರಾಜಕೀಯ ಅಸ್ಥಿರತೆಯ ಪರಿಣಾಮವಾಗಿ ಬೇಡಿಕೆ ತೀವ್ರವಾಗಿ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ರಾಜ್ಯದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಒಟ್ಟು 72 ಆಟೋ ಎಲ್ ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳನ್ನು (ALDS) ನಡೆಸುತ್ತಿವೆ. ಇದರಲ್ಲಿ ಇಂಡಿಯನ್ ಆಯಿಲ್ 55 ಸ್ಟೇಷನ್‌ಗಳನ್ನು ನಿರ್ವಹಿಸುತ್ತಿದೆ. 300ಕ್ಕೂ ಹೆಚ್ಚು ಖಾಸಗಿ ಎಎಲ್ ಡಿಎಸ್ ಗಳಿದ್ದರೂ, ಅವುಗಳಲ್ಲಿ ಸುಮಾರು 80 ಶೇಕಡಾದಷ್ಟು ಕಾರ್ಯನಿರ್ವಹಿಸದಿರುವುದರಿಂದ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ.

ಸೀಮಿತ ಮೂಲಸೌಕರ್ಯ ಮತ್ತು ವಿತರಣೆ ಸಾಮರ್ಥ್ಯವೂ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಂಪನಿ ತಿಳಿಸಿದೆ. ಬೆಲೆ ವ್ಯತ್ಯಾಸವೂ ಬೇಡಿಕೆ ಮೇಲೆ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ಸರ್ಕಾರಿ ಪೆಟ್ರೋಲ್ ಬಂಕ್‌ಗಳಲ್ಲಿ ಆಟೋ LPG ಲೀಟರ್‌ಗೆ 89.52 ರೂಪಾಯಿಗೆ ಲಭ್ಯವಿದ್ದರೆ, ಖಾಸಗಿ ಸ್ಟೇಷನ್‌ಗಳಲ್ಲಿ 99 ರೂಪಾಯಿಯಿಂದ 105ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದರಿಂದ ಸರ್ಕಾರಿ ಬಂಕ್‌ಗಳಲ್ಲಿ ದೀರ್ಘ ಸಾಲಿನಲ್ಲಿ ಆಟೋಗಳು ನಿಂತಿರುವುದು ಕಂಡುಬರುತ್ತಿದೆ.

ರಾಜ್ಯದಲ್ಲಿ ಸುಮಾರು 70 ಶೇಕಡಾ ಆಟೋ ರಿಕ್ಷಾಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ಅಗತ್ಯವಿದ್ದರೆ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಇಂಡಿಯನ್ ಆಯಿಲ್ ಸಲಹೆ ನೀಡಿದೆ.

ಆಟೋ ಚಾಲಕರು ಪ್ರತಿಭಟನೆಗೆ ಮುಂದು

ಬೆಂಗಳೂರಿನಲ್ಲಿ ಆಟೋ ಎಲ್ ಪಿಜಿ ಕೊರತೆಯನ್ನು ವಿರೋಧಿಸಿ ಆಟೋ ಚಾಲಕರ ಸಂಘಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಸರ್ಕಾರದ ನಿರ್ಲಕ್ಷ್ಯದಿಂದ ಜೀವನೋಪಾಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದ್ದಾರೆ.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್, ಆದಾಯ ಕುಸಿತ ಮತ್ತು ಇಂಧನ ಲಭ್ಯತೆಯ ಅಸ್ಥಿರತೆಯಿಂದ ಚಾಲಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ. ಸಾರಿಗೆ ಇಲಾಖೆ ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳುತ್ತಾರೆ.

ಬಹುತೇಕ ಚಾಲಕರಿಗೆ ಆರ್ಥಿಕವಾಗಿ ನಷ್ಟವುಂಟಾಗಿದೆ. ಇಎಂಐ ಪಾವತಿಸಲು ಸಾಧ್ಯವಾಗುತ್ತಿಲ್ಲ. ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

Tags: LPG
Previous Post

ಉಲ್ಬಣಗೊಂಡ ರಾಜ್ಯದ ವಿದ್ಯುತ್ ಬೇಡಿಕೆ

Next Post

‘ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ

Next Post
‘ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ

'ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.