BREAKING NEWS
‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •   ಡಿಕೆ ಶಿವಕುಮಾರ್‌ಗೆ ಒಲಿದ ಸಿಎಂ ಪಟ್ಟ: ಮತ್ತೆ ಮುನ್ನೆಲೆಗೆ ಬಂತು ಕುಮಾರಕೃಪಾ ರಸ್ತೆಯ ‘ಅದೃಷ್ಟದ ಮನೆ’ಯ ರೋಚಕ ಕಥೆ!   •   ಬೆಂಗಳೂರು: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಜಾಜಿನಗರ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ   •   40,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ   •   ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ   •   ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!   •  

—Advertisement—

ಉಲ್ಬಣಗೊಂಡ ರಾಜ್ಯದ ವಿದ್ಯುತ್ ಬೇಡಿಕೆ

Author Picture
Published On: April 7, 2026

—Advertisement—

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು : ಕಳೆದ ಮೂರು ವಾರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಗಗನಕ್ಕೇರಿದ್ದು, ಬಳಕೆನೂ ಶರವೇಗದಲ್ಲಿ ಮೇಲಕ್ಕೇರುತ್ತಿದೆ. ಬಿರು ಬೇಸಿಗೆ ಧಗೆ ಜೊತೆಗೆ ಮಧ್ಯಪ್ರಾಚ್ಯ ಯುದ್ಧವೂ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಇನ್ನಷ್ಟು ಉಲ್ಬಣಗೊಳಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆ ವಿದ್ಯುತ್ ಬೇಡಿಕೆ ಪ್ರಮಾಣದ ಮೇಲೆ ಇಂಧನ ಇಲಾಖೆ ತೀವ್ರ ನಿಗಾ ಇರಿಸಿದೆ. ಅಷ್ಟಕ್ಕೂ ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ, ಬಳಕೆ ಎಷ್ಟಿದೆ ಎಂಬ ಸಮಗ್ರ ವರದಿ ಇಲ್ಲಿದೆ.

ಸಾಮಾನ್ಯವಾಗಿ ಏಪ್ರಿಲ್, ಮೇನಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಉಲ್ಬಣಗೊಳ್ಳುತ್ತದೆ. ಬೇಸಿಗೆಯಲ್ಲಿ ತಾಪಮಾನ ವೃದ್ಧಿಯಾಗುತ್ತಿರುವುದರಿಂದ ಎಸಿ, ಕೂಲರ್ ಬಳಕೆ ಹೆಚ್ಚಾಗುತ್ತದೆ. ಇದರ ಜೊತೆಗೆ ಕೃಷಿ ಪಂಪ್ ಸೆಟ್ ಬಳಕೆ ಪ್ರಮಾಣವೂ ದುಪ್ಪಟ್ಟಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಉಲ್ಬಣವಾಗುತ್ತದೆ. ಹಾಗಾಗಿ, ಈ ವರ್ಷವೂ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ, ಇದರ ಜೊತೆಗೆ ಈ ಬಾರಿ ಮಧ್ಯಪ್ರಾಚ್ಯ ಯುದ್ದದ ಹಿನ್ನೆಲೆ ಎಲ್​ಪಿಜಿ ಕೊರತೆ ಎದುರಾಗಿದ್ದು, ಬಹುತೇಕ ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಇಂಡಕ್ಷನ್, ವಿದ್ಯುತ್ ಉಪಕರಣಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ವಿದ್ಯುತ್ ಬೇಡಿಕೆಯಲ್ಲಿ ಎಷ್ಟು ಹೆಚ್ಚಳ? : ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಮಾರ್ಚ್ ತಿಂಗಳಲ್ಲಿ 18,000 ಮೆ.ವಾ. ಸಮೀಪಕ್ಕೆ ವಿದ್ಯುತ್‌ ಬೇಡಿಕೆ ಏರಿಕೆಯಾಗಿದೆ. ಇಂಧನ ಇಲಾಖೆಯ ಅಂಕಿ-ಅಂಶದಂತೆ ಜನವರಿ ತಿಂಗಳಲ್ಲಿ ರಾಜ್ಯದಲ್ಲಿ 9,248 ಎಂ.ಯು ವಿದ್ಯುತ್ ಬಳಕೆಯಾಗಿದೆ. ಸರಾಸರಿ 298 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ.‌ ಅದೇ ಫೆಬ್ರವರಿ ತಿಂಗಳಲ್ಲಿ 9,151 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 327 ಎಂ.ಯು. ವಿದ್ಯುತ್ ಬಳಸಲಾಗಿದೆ.

ಮಾರ್ಚ್ ತಿಂಗಳಲ್ಲಿ ವಿದ್ಯುತ್ ಬಳಕೆ ಮತ್ತಷ್ಟು ಹೆಚ್ಚಿದೆ. ಈ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 10,378 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 335 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಇತ್ತ ಏಪ್ರಿಲ್ ತಿಂಗಳಲ್ಲಿ ಈವರೆಗೆ 1,649 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಸರಾಸರಿ 330 ಎಂ.ಯು. ವಿದ್ಯುತ್ ಬಳಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಸರಾಸರಿ 311 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿತ್ತು. ಈ ಬಾರಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸರಾಸರಿ ವಿದ್ಯುತ್ ಬಳಕೆಯಲ್ಲಿ 19 ಎಂ.ಯು. ನಷ್ಟು ಹೆಚ್ಚಳವಾಗಿದೆ.

ಕಳೆದ ಎರಡು ವಾರದಲ್ಲಿ ಬೇಡಿಕೆ, ಬಳಕೆಯಲ್ಲಿ ಭಾರಿ ಹೆಚ್ಚಳ : ಕಳೆದ ಎರಡು ವಾರದ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಬಳಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಾರ್ಚ್ 26ರಂದು 17,000 ಮೆ.ವಾ. ವಿದ್ಯುತ್ ಬೇಡಿಕೆ ಇದ್ದು, 336 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಅದೇ ಮಾ.27ರಂದು 17,826 ಮೆ.ವಾ. ವಿದ್ಯುತ್ ಬೇಡಿಕೆ ಕಂಡಿದ್ದು, 343 ಎಂ.ಯು. ಬಳಕೆಯಾಗಿದೆ. ಮಾ.28ರಂದು 17,705 ಮೆ.ವಾ. ವಿದ್ಯುತ್ ಬೇಡಿಕೆ ಬಂದಿದ್ದು, ಅಂದು 337 ಎಂ.ಯು. ವಿದ್ಯುತ್ ಬಳಕೆ ಮಾಡಲಾಗಿದೆ. ಮಾ.30ರಂದು 16,866 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 334 ಎಂ.ಯು. ವಿದ್ಯುತ್ ಬಳಕೆಯಾಗಿದೆ. ಅದೇ ಮಾ.31ರಂದು 17,175 ಮೆ.ವಾ. ವಿದ್ಯುತ್ ಬೇಡಿಕೆ ಬಂದಿತ್ತು. ಅಂದು ಒಟ್ಟು 337 ಎಂ.ಯು. ವಿದ್ಯುತ್ ಬಳಕೆ ಆಗಿತ್ತು.

ಏಪ್ರಿಲ್ 1 ರಂದು 16,724 ಮೆ. ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 332 ಎಂ.ಯು. ಬಳಕೆ ಮಾಡಲಾಗಿದೆ. ಏ.2ರಂದು 17,359 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು, 339 ಎಂ.ಯು. ಬಳಕೆ ಆಗಿದೆ. ಏ.3ರಂದು 17,192 ಮೆ.ವಾ. ವಿದ್ಯುತ್ ಬೇಡಿಕೆ ಬಂದಿದ್ದು, 334 ಎಂ.ಯು. ವಿದ್ಯುತ್ ಬಳಕೆಯಾಗಿದೆ.‌ ಇನ್ನು ಏ.4ರಂದು ರಾಜ್ಯದಲ್ಲಿ 16,745 ಮೆ.ವಾ. ಬೇಡಿಕೆ ಬಂದಿದ್ದು, 334 ಬಳಕೆ ಆಗಿದೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp