BREAKING NEWS
ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •   ‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •  

—Advertisement—

ಬಿವೈವಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದರೆ ಇಡೀ ಬಣ್ಣವನ್ನು ವಿಸ್ತಾರವಾಗಿ ಕೋರ್ಟ್​ಗೆ ತಿಳಿಸುತ್ತೇನೆ: ಶಾಸಕ ಯತ್ನಾಳ್​

Author Picture
Published On: December 15, 2025

—Advertisement—

Updated By: Priyalachhi

ಚಿಕ್ಕೋಡಿ: “ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದರೆ ಬಹಳ ಚಲೋ. ಅದು ಮಾಡಿ ಬಿಟ್ಟರೆ ಇಡೀ ಬಣ್ಣವನ್ನು ಅತ್ಯಂತ ವಿಸ್ತಾರವಾಗಿ ಕೋರ್ಟ್​ಗೆ ತಿಳಿಸುತ್ತೇನೆ” ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಿ.ವೈ. ವಿಜಯೇಂದ್ರ ಅವರ ಎಚ್ಚರಿಕೆ ಮಾತಿಗೆ ಮರು ಸವಾಲು ಹಾಕಿದರು.

ಶಾಸಕ ಯತ್ನಾಳ್ ಪದೇ ಪದೇ ನನ್ನ ಹಾಗೂ ನಮ್ಮ ಕುಟುಂಬ ವಿರುದ್ಧ ಮಾತನಾಡುತ್ತಿದ್ದರೆ ನಾನು ಮಾನನಷ್ಟ ಮೊಕದ್ದಮೆ ದಾಖಲು ಮಾಡೋದಕ್ಕೆ ಚಿಂತನೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ ವಿಚಾರಕ್ಕೆ ಚಿಕ್ಕೋಡಿ ಈಟಿವಿ ಭಾರತ ಪ್ರತಿನಿಧಿ ಶಿವರಾಜ್ ನೇಸರಗಿ ಜೊತೆ ಯತ್ನಾಳ್​ ಮಾತನಾಡುತ್ತಾ, “ವಿಜಯೇಂದ್ರ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ. ಎಲ್ಲವನ್ನು ನಾನು ನ್ಯಾಯಾಲಯದಲ್ಲಿ ವಿಸ್ತಾರವಾಗಿ ವಿವರಣೆ ನೀಡುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿಜಯೇಂದ್ರ, ಡಿ.ಕೆ. ಶಿವಕುಮಾರ್​ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ಇವತ್ತು ಮುಗಿದ ಹೊಗಿರುವ ಕತೆ. ಮೇಲಿನವರು ಒಪ್ಪದ ಕಾರಣ ಈ ಪ್ರಶ್ನೆ ಉದ್ಬವಿಸುವುದಿಲ್ಲ. ಕಾಂಗ್ರೆಸ್ ಯಾವುದೇ ಗುಂಪು ಬಂದರು ಸರ್ಕಾರ ರಚನೆ ಮಾಡುವುದಿಲ್ಲ ಎಂದು ತಿರ್ಮಾನ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ಹೇಳಿಕೆ ಕೊಟ್ಟಿದ್ದಾರೆ. ಇದು ಮುಗಿರುವ ಅಧ್ಯಾಯ, ಸದ್ಯಕ್ಕೆ ಕಾಂಗ್ರೆಸ್​ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಎಂಬುದು ಗೊಂದಲ ನಡೆಯುತ್ತಿದೆ” ಎಂದರು.

“ಪ್ರತಿ ವರ್ಷ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಕೊನೆಯ ಎರಡು ದಿನ ಚರ್ಚೆ ಆಗುತಿತ್ತು. ಇದರಿಂದ ಈ ಭಾಗಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಸ್ಪೀಕರ್​ ಯು.ಟಿ. ಖಾದರ್ ಅವರಿಗೆ ಮೊದಲೇ ಎರಡು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವಂತೆ ಮನವಿ ಸಲ್ಲಿಸಿದ್ದೆ. ಇದರ ಪರಿಣಾಮವಾಗಿ ಮೊದಲಿಗೆ ಚರ್ಚೆ ಬಂದಿದೆ. ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದೆ. ಹೋರಾಟ ಮಾಡಬೇಕು ಮಾಡುತ್ತಾ ಇದ್ದೇವೆ. ಈ ವರ್ಷ ಆಗದ ಕೆಲಸಗಳನ್ನು ಮುಂದಿನ ಸಲ ಸದನಕ್ಕೆ ನೆನಪು ಮಾಡುವ ಕೆಲಸವನ್ನು ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಬೇಕು: “ನಾನು ಬಿಜೆಪಿಗೆ ಮರಳಿ ಹೋಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ಶಾಸಕರು ಬನ್ನಿ ಎನ್ನುತ್ತಿದ್ದಾರೆ. ನನಗೆ ಗೌರವಿತ ಸ್ಥಾನ ಕೊಟ್ಟರೆ ಮಾತ್ರ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ” ಎಂದ ಯತ್ನಾಳ್​ ಅವರು ಬೆಳಗಾವಿ ವಿಭಜನೆ ವಿಚಾರವಾಗಿ ಮಾತನಾಡಿ, “ಅಥಣಿ ಜಿಲ್ಲಾ ರಚನೆಗೆ ಸ್ಥಳೀಯ ಶಾಸಕರ ಒತ್ತಾಯವಾಗಿದೆ. ಅಖಂಡ ಕರ್ನಾಟಕ ಬೇಕು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನನ್ನ ಬೆಂಬಲವಿಲ್ಲ. ನಮಗೆ ಆಗಿರುವ ಅನ್ಯಾಯ ಬಗ್ಗೆ ಮರಳಿ ನ್ಯಾಯ ಪಡೆಯಬೇಕು. ಇಲ್ಲಿ ಉತ್ತರ ಕರ್ನಾಟಕದ ಶಾಸಕರು ಆಯ್ಕೆ ಆಗುತ್ತಾರೆ ನಂತರ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅಥಣಿ ಜಿಲ್ಲಾ ರಚನೆಗೆ ಬೇಡಿಕೆ ಇಟ್ಟಿದ್ದಾರೆ. ವಿಜಯಪುರಕ್ಕೆ ಸೇರುವ ಕೆಲವರು ಹೇಳುತ್ತಿದ್ದಾರೆ. ನಾನು ಏನೇ ಮಾತನಾಡಿದರು ಗೊಂದಲಕ್ಕೆ ಕಾರಣವಾಗುತ್ತದೆ. ಜಮಖಂಡಿ, ಅಥಣಿ ಜಿಲ್ಲಾ ರಚನೆಗೆ ಮಾತು ಇದೆ. ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಬೇಕು. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದೆ. ಇಲ್ಲಿ ಹಲವಾರು ಜನರು ತಮ್ಮ ಜಿಲ್ಲೆಗೆ ಬೇಡುತಿದ್ದಾರೆ. ಕೆಲವರು ಅಥಣಿ, ಗೋಕಾಕ್​, ಚಿಕ್ಕೋಡಿ ಬೇಡುತಿದ್ದಾರೆ. ಈ ಬಗ್ಗೆ ಸೂಕ್ತವಾಗಿ ನಿರ್ಣಯ ಮಾಡಬೇಕು. ಒಂದು ಕಮಿಟಿ ಮಾಡಿಕೊಂಡು 70 ಕಿ.ಮಿ ವ್ಯತ್ಯಾಸ ಇಟ್ಟುಕೊಂಡು ಜಿಲ್ಲೆ ರಚನೆ ಆಗಬೇಕು” ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp