• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಆರ್‌ಟಿಐ ಬಳಕೆದಾರರಿಗೆ ದೊಡ್ಡ ಜಯ: ಸಾರ್ವಜನಿಕ ಸೇವಕನ ವಿವರಗಳು ಇನ್ನು ಮುಂದೆ ರಹಸ್ಯವಲ್ಲ

Sambrama Prabha News by Sambrama Prabha News
January 23, 2026
in Latest News
0
ಆರ್‌ಟಿಐ ಬಳಕೆದಾರರಿಗೆ ದೊಡ್ಡ ಜಯ: ಸಾರ್ವಜನಿಕ ಸೇವಕನ ವಿವರಗಳು ಇನ್ನು ಮುಂದೆ ರಹಸ್ಯವಲ್ಲ

Updated By: Priyalachhi

ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೋರಿದಾಗ ಇದು ವೈಯಕ್ತಿಕ ಮಾಹಿತಿ ಎಂದು ಹೇಳಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದ ಅಧಿಕಾರಿಗಳಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಬಿಸಿ ಮುಟ್ಟಿಸಿದೆ.​W.P.No.33854/2024 ಪ್ರಕರಣದಲ್ಲಿ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ನೀಡಿದ ಈ ತೀರ್ಪು ಮಾಹಿತಿ ಬಳಕೆದಾರರಿಗೆ ಹೊಸ ಆಯುಧ ನೀಡಿದೆ.

​ಒಬ್ಬ ವ್ಯಕ್ತಿ ಸಾರ್ವಜನಿಕ ಸೇವೆಗೆ ಸೇರಿದ ಕ್ಷಣದಿಂದಲೇ ಅವನು ಸಾರ್ವಜನಿಕರ ಪರಿಶೀಲನೆಗೆ ಒಳಪಡುತ್ತಾನೆ. ಅವನು ಸಾರ್ವಜನಿಕ ಗಮನದಲ್ಲೇ ಬದುಕಬೇಕು ಎಂಬುದನ್ನು ಒಪ್ಪಿಕೊಳ್ಳಬೇಕು.

ಅಧಿಕಾರಿಯ ಸೇವೆಗೆ ಸೇರಿದ ದಿನಾಂಕ, ವರ್ಗಾವಣೆಗಳು, ಬಡ್ತಿ ಮತ್ತು ನಿವೃತ್ತಿಯ ವಿವರಗಳು ಯಾವುದೇ ಕಾರಣಕ್ಕೂ ಖಾಸಗಿ ಮಾಹಿತಿಯಾಗಲು ಸಾಧ್ಯವಿಲ್ಲ. ಸಾರ್ವಜನಿಕ ಸೇವಕನ ಆಸ್ತಿ ಮತ್ತು ಬಾಧ್ಯತೆಗಳ ವಿವರಗಳು ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿರುತ್ತವೆ. ಅವನ್ನು ಸಂಪೂರ್ಣವಾಗಿ ಮರೆಮಾಚುವಂತಿಲ್ಲ. ​ಸೆಕ್ಷನ್ 8(1)(j) ನೆಪವೊಡ್ಡಿ ವೈಯಕ್ತಿಕ ಮಾಹಿತಿ ಎಂಬ ಯಾಂತ್ರಿಕವಾಗಿ ನಿರಾಕರಿಸುವುದು ಕಾನೂನುಬಾಹಿರ.
​
​ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪಾದನೆ ಮತ್ತು ಅಧಿಕಾರ ದುರ್ಬಳಕೆಯನ್ನು ಪ್ರಶ್ನಿಸಲು ಈಗ ಹೆಚ್ಚಿನ ಬಲ ಸಿಕ್ಕಿದೆ. ​ಅಧಿಕಾರಿಗಳ ಸೇವಾ ದಾಖಲೆಗಳನ್ನು ಪಡೆಯುವ ಮೂಲಕ ಪಾರದರ್ಶಕತೆಯನ್ನು ಖಚಿತಪಡಿಸಿ ಕೊಳ್ಳಬಹುದು. ಎಲ್ಲವೂ ಖಾಸಗಿ ಎಂದು ಹೇಳಿ ಜನರನ್ನು ಅಲೆದಾಡಿಸುವ ವ್ಯವಸ್ಥೆಗೆ ಈ ತೀರ್ಪು ಗಟ್ಟಿ ಎಚ್ಚರಿಕೆ ನೀಡಿದೆ. ​ಸಂವಿಧಾನದ ಆಶಯದಂತೆ ಪಾರದರ್ಶಕ ಆಡಳಿತ ನಮ್ಮ ಹಕ್ಕು.

Tags: ಆರ್‌ಟಿಐ
Previous Post

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Next Post

ಇ.ಡಿಯಿಂದ ₹20.85 ಕೋಟಿ ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ

Next Post
ಇ.ಡಿಯಿಂದ ₹20.85 ಕೋಟಿ ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ

ಇ.ಡಿಯಿಂದ ₹20.85 ಕೋಟಿ ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.