Updated By: Priyalachhi 

ಮೆಚ್ಚಿನ ತಾರೆಯರ ಜನ್ಮದಿನ ಎಂದಾಗ ಫ್ಯಾನ್ಸ್ ಬೃಹತ್ ಕಟೌಟ್ ಹಾಕಿ, ಅದಕ್ಕೆ ಹಾಲಿನ ಅಭಿಷೇಕ ಮಾಡೋದು ಸಹಜ. ಇದೀಗ ಯಶ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲೇ ಇತಿಹಾಸ ಬರೆದಿದ್ದಾರೆ.

ಹೌದು, ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟಿದ ದಿನ. ಹೀಗಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸುತ್ತಿದೆ. ಯಶ್ ಅವರನ್ನು ಹತ್ತಿರದಿಂದ ನೋಡಿರುವ ಅಭಿಮಾನಿ ಸಂಘಟನೆ ಮೆಟ್ರೋಗೆ ಜಾಹೀರಾತು ನೀಡಿ, ಯಶ್​​ ಬರ್ತ್​ಡೇಗೆ ವಿಶೇಷವಾಗಿ ಶುಭ ಕೋರಿದ್ದಾರೆ.

Rocking Star Yash's 'Toxic' Look

ಸದ್ಯ ಕಾಡುಗೋಡಿ ಟು ಚಲಘಟ್ಟ ಮೆಟ್ರೊ ಟ್ರೈನ್​​ನಲ್ಲಿ ಯಶ್ ಭಾವಚಿತ್ರ ಒಳಗೊಂಡಿರುವ ಪೋಸ್ಟರ್ ಹಾಕಲಾಗಿದೆ. ಇಂದಿನಿಂದ ಯಶ್ ಬರ್ತ್ ಡೇ ದಿನವರೆಗೂ ಈ ಪೋಸ್ಟರ್ಸ್​​ ಕಾಣಿಸಿಕೊಳ್ಳಲಿದೆ. ಈ ಮೆಟ್ರೋ ರೈಲಿನಲ್ಲಿ ಒಂದು ದಿನಕ್ಕೆ ಸರಿಸುಮಾರು 6‌ ಲಕ್ಷ ಜನ ಓಡಾಡುತ್ತಾರೆ.

ಯಶ್ ಆಪ್ತರೊಬ್ಬರು ಹೇಳುವ ಹಾಗೇ, ಮೂರು ದಿನದ ಜಾಹೀರಾತಿಗೆ 10 ಲಕ್ಷ ರೂಪಾಯಿಂದ 15 ಲಕ್ಷ ರೂಪಾಯಿ ಕೊಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನೊಬ್ಬನ ಫೋಟೋ ಮೆಟ್ರೋದಲ್ಲಿ ರಾರಾಜಿಸುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ರು.
Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version