BREAKING NEWS
‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •   ಡಿಕೆ ಶಿವಕುಮಾರ್‌ಗೆ ಒಲಿದ ಸಿಎಂ ಪಟ್ಟ: ಮತ್ತೆ ಮುನ್ನೆಲೆಗೆ ಬಂತು ಕುಮಾರಕೃಪಾ ರಸ್ತೆಯ ‘ಅದೃಷ್ಟದ ಮನೆ’ಯ ರೋಚಕ ಕಥೆ!   •   ಬೆಂಗಳೂರು: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಜಾಜಿನಗರ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ   •   40,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ   •   ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ   •   ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!   •  

—Advertisement—

ಉಡುಪಿ ಶ್ರೀಕೃಷ್ಣ ದೇವರಿಗೆ 2 ಕೋಟಿ ರೂಪಾಯಿಯ ಚಿನ್ನದ ಭಗವದ್ಗೀತೆ ಸಮರ್ಪಣೆ

Author Picture
Published On: January 9, 2026

—Advertisement—

Updated By: Priyalachhi 

ಉಡುಪಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ ಶ್ರೀಗಳು ಇದೀಗ ಮತ್ತೊಂದು ಮಹತ್ವದ ಕೊಡುಗೆ ನೀಡಿದ್ದಾರೆ. ದೆಹಲಿಯ ದಾನಿಯೊಬ್ಬರು ನೀಡಿರುವ 2 ಕೋಟಿ ರೂ ವೆಚ್ಚದ ಚಿನ್ನದ ಭಗವದ್ಗೀತೆಯನ್ನು ಅವರು ಕೃಷ್ಣನಿಗೆ ಸಮರ್ಪಿಸಿದ್ದಾರೆ.

ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಲಕ್ಷ್ಮಿ ನಾರಾಯಣನ್ ಎಂಬವರು ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಿಶಿಷ್ಟ ಭಗವದ್ಗೀತೆಯಲ್ಲಿ ಎಲ್ಲ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿವೆ.

ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ರಥ ಬೀದಿಯಲ್ಲಿ ಚಿನ್ನದ ಭಗವದ್ಗೀತೆಯ ಮೆರವಣಿಗೆ ನಡೆಯಿತು. ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

golden-bhagavad-gita

ಪರ್ಯಾಯ ಪುತ್ತಿಗೆ ಶ್ರೀಗಳು ಮಾತನಾಡಿ, “ಭಗವದ್ಗೀತೆ ಎಲ್ಲರ ಹೃದಯದಲ್ಲಿ ಅವ್ಯಕ್ತವಾಗಿದೆ. ಅದನ್ನು ವ್ಯಕ್ತಗೊಳಿಸುವುದು ನಮ್ಮ ಕರ್ತವ್ಯ. ನಮ್ಮಲ್ಲಿ ಸುಪ್ತವಾದ ಭಗವದ್ಗೀತೆಯ ಅಸ್ತಿತ್ವವನ್ನು ಗುರುತಿಸಿ ಜಾಗೃತಗೊಳಿಸಿದರೆ, ಗೀತಾ ಪ್ರಚಾರ ಸಾಧ್ಯ. ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಬೇಕು” ಎಂದು ಕರೆ ನೀಡಿದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp