• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು: ಜಬ್ಬಾರ್​ ವಿರುದ್ಧ ಸಚಿವ ಮಲ್ಲಿಕಾರ್ಜುನ್ ಕಿಡಿ

Sambrama Prabha News by Sambrama Prabha News
April 12, 2026
in Latest News, Politics
0
ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು: ಜಬ್ಬಾರ್​ ವಿರುದ್ಧ ಸಚಿವ ಮಲ್ಲಿಕಾರ್ಜುನ್ ಕಿಡಿ

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ದಾವಣಗೆರೆ: ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಅಬ್ದುಲ್ ಜಬ್ಬಾರ್​ನನ್ನು ಎಂಎಲ್​​ಸಿ ಮಾಡಿದ್ದು ನಾವು, ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ್ ಹರಿಹಾಯ್ದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್​ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಚುನಾವಣೆ ನಂತರ ರಿಲ್ಯಾಕ್ಸ್ ಮೂಡ್​​ನಲ್ಲಿದ್ದೆ. ನನಗೆ ಯಾರೂ ಕಾಲ್ ಮಾಡಿಲ್ಲ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದರು.

ನಾನು 1994ರಿಂದ ಚುನಾವಣೆ ಮಾಡಿದ್ದೇನೆ. ನನಗೆ ಇದು ಹದಿನಾರನೇ ಚುನಾವಣೆ. ಹಿಂದಿನ ಚುನಾವಣೆಗಳಷ್ಟು ಟೈಟ್ ಆಗಿಲ್ಲ. 2013ರ ಚುನಾವಣೆ ರಿಪೀಟ್ ಆಗುತ್ತದೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಇದ್ದಾರೆ. ನಾಯಕರ ನಡುವಿನ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಗೆದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇವೆ, ಇಲ್ಲ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಶಾಮನೂರು ಕುಟುಂಬ ಬುದ್ದಿವಂತರನ್ನು ಹತ್ತಿರ ಸೇರಿಸಲ್ಲ, ದಡ್ಡರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಎಂಬ ಅಬ್ದುಲ್ ಜಬ್ಬಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವನು ಬುದ್ದಿವಂತನಂತಾ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಜನರ ರೆಸ್ಪಾನ್ಸ್ ಚೆನ್ನಾಗಿದೆ. ಗೆಲುವು ಸಿಗುತ್ತೆ ಎಂಬ ವಿಶ್ವಾಸ ಇದೆ. ನಮ್ಮ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಮತದಾರರ ಒಲವು ಕಂಡುಬಂದಿದೆ. ಒಳ್ಳೆಯ ಅಂತರದಲ್ಲಿ ಪಕ್ಷ ಗೆಲ್ಲುತ್ತೆ, ಸಮರ್ಥ್ ಶಾಮನೂರು ಶಾಸಕರಾಗುತ್ತಾರೆ ಎಂಬ ವಿಶ್ವಾಸ ಇದೆ. ಪಕ್ಷದ ಸಚಿವರು, ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ. ಮುಖ್ಯಮಂತ್ರಿಯಿಂದ ಹಿಡಿದು ಕಟ್ಟಕಡೆಯ ಕಾರ್ಯಕರ್ತರಿಗೆ ಧನ್ಯವಾದ. ನಮ್ಮ ಮನೆತನ ಹಾಗೂ ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಸಮರ್ಥ್ ಉಳಿಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
Tags: ಮಲ್ಲಿಕಾರ್ಜುನ್
Previous Post

ಸಂಪುಟ ಪುನಾರಚನೆಗೆ ಗಮನ ಹರಿಸುವ ಸಮಯ ಬಂದಿದೆ: ಸತೀಶ್ ಜಾರಕಿಹೊಳಿ

Next Post

ಉಪಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕೂಗು

Next Post
ಉಪಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕೂಗು

ಉಪಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕೂಗು

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.