• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಕೇರಳ ನಾಯಕತ್ವ ಬಿಕ್ಕಟ್ಟು ಬಗೆಹರಿಸಿದ ಕಾಂಗ್ರೆಸ್ ಹೈಕಮಾಂಡ್ ಗೆ ಮುಂದಿನ ಸವಾಲು ಕರ್ನಾಟಕ!

Sambrama Prabha News by Sambrama Prabha News
May 16, 2026
in Nation News, Politics
0
ಕೇರಳ ನಾಯಕತ್ವ ಬಿಕ್ಕಟ್ಟು ಬಗೆಹರಿಸಿದ ಕಾಂಗ್ರೆಸ್ ಹೈಕಮಾಂಡ್ ಗೆ ಮುಂದಿನ ಸವಾಲು ಕರ್ನಾಟಕ!

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ಕೇರಳದಲ್ಲಿ ತೀವ್ರ ಲಾಬಿ ಮತ್ತು ಆಂತರಿಕ ಒತ್ತಡದ ನಡುವೆ ಸಿಎಂ ಆಯ್ಕೆ ಕಗ್ಗಂಟನ್ನು ಬಗೆಹರಿಸಿದ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ನೆರೆಯ ಕರ್ನಾಟಕ ಮುಂದಿನ ಸವಾಲು ಆಗಿದೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವಾದ ಮೇ 15 ರಂದು ಮುಖ್ಯಮಂತ್ರಿ ಪಟ್ಟ ಸಿಗುವ ವಿಶ್ವಾಸದಲ್ಲಿ ಅವರ ಅಭಿಮಾನಿಗಳಿದ್ದರು. ಆದರೆ, ಈ ನಿರೀಕ್ಷೆಯೂ ಹುಸಿಯಾಗಿದ್ದು, ಯಾವಾಗ ಸಿಡಿದ್ದೇಳುತ್ತಾರೋ ಗೊತ್ತಿಲ್ಲ.

ನವೆಂಬರ್‌ನಲ್ಲಿ ಪ್ರಮುಖ ಚರ್ಚೆಯೊಂದು ನಡೆದಿತ್ತು. ಸಂಭಾವ್ಯ ನಾಯಕತ್ವ ಬದಲಾವಣೆ ಬಗ್ಗೆಗಿನ ಊಹಾಪೋಹಗಳು ರಾಜ್ಯ ಘಟಕದಲ್ಲಿ ಅನಿಶ್ಚಿತತೆಗೆ ಕಾರಣವಾಗಿತ್ತು. ಆ ಸಮಯದಲ್ಲಿ, ಕಾಂಗ್ರೆಸ್ ಹೈಕಮಾಂಡ್ ನಿರ್ಣಾಯಕ ಪರಿಹಾರಕ್ಕೆ ಬರದೆ ಬಿಕ್ಕಟ್ಟನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.

ಈಗ ಕೇರಳದ ಸಮಸ್ಯೆ ಹೆಚ್ಚಾಗಿ ಇತ್ಯರ್ಥವಾಗಿರುವುದರಿಂದ ಪಕ್ಷದೊಳಗಿನ ಗಮನವು ಕರ್ನಾಟಕದತ್ತ ತಿರುಗಿದೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಗದ್ದುಗೆ ಗುದ್ದಾಟ ಮತ್ತೊಮ್ಮೆ ತೀವ್ರಗೊಳ್ಳುವ ನಿರೀಕ್ಷೆಯಿದೆ.

Tags: ಕಾಂಗ್ರೆಸ್ ಹೈಕಮಾಂಡ್
Previous Post

ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ

Next Post

RSS ನವ್ರು ಪಾಕಿಸ್ತಾನದ ಏಜೆಂಟ್‌ಗಳು: ಪ್ರಿಯಾಂಕ್ ಖರ್ಗೆ ಆಗ್ರಹ

Next Post
RSS ನವ್ರು ಪಾಕಿಸ್ತಾನದ ಏಜೆಂಟ್‌ಗಳು: ಪ್ರಿಯಾಂಕ್ ಖರ್ಗೆ ಆಗ್ರಹ

RSS ನವ್ರು ಪಾಕಿಸ್ತಾನದ ಏಜೆಂಟ್‌ಗಳು: ಪ್ರಿಯಾಂಕ್ ಖರ್ಗೆ ಆಗ್ರಹ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.